ದಾಸ ಶೇಷ್ಠ ಕನಕ-ಪುರಂದರ ಸ್ಮರಣೆಗಾಗಿ ಮೂರು ದಿನಗಳ ಸಂಗೀತ ಉತ್ಸವಕ್ಕೆ ಚಾಲನೆ

ಮನೆ ಮನೆಗಳಿಗೆ ದಾಸ ಸಾಹಿತ್ಯ ತಲುಪಿಸಲು ಮುಂದಾದ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ

 

ಬೆಂಗಳೂರು : ನಾಡಿನ ಶ್ರೇಷ್ಠ ದಾಸಪರಂಪರೆಯ ಕನಕ-ಪುರಂದರ ದಾಸರ ಸಾಹಿತ್ಯ ಮನೆ, ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ದಿಟ್ಟ ಹೆಜ್ಜೆ ಇಟ್ಟಿದ್ದು, ಶ್ರೀ ರಾಮಮಂದಿರ ಸಭಾಂಗಣದಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ 15ನೇ ವರ್ಷದ ಕನಕ ಪುರಂದರ ಸಂಗೀತ ಉತ್ಸವಕ್ಕೆ ವೈಭವದ ಚಾಲನೆ ದೊರೆಯಿತು.

          ಯೋಗರತ್ನ ಡಾ||ಎಸ್.ಎನ್.ಓಂಕಾರ್, ಹರಿದಾಸ ಸಂಘದ ಅಧ್ಯಕ್ಷ ಡಾ||ಹಾ.ರಾ.ನಾಗರಾಜಾಚಾರ್ಯ, ಸಮಾಜ ಸೇವಕರಾದ ಎಸ್.ರಘುನಾಥ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್, ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರ ಕೆ.ಎಸ್.ಶ್ರೀಧರ್, ಖಜಾಂಚಿ ಎಸ್. ಮಹೇಶ್ ಮೂರು ದಿನಗಳ ಕಾಲ ಸಂಗೀತ ಉತ್ಸವಕ್ಕೆ ಚಾಲನೆ ನೀಡಿದರು.

 

          ನೃತ್ಯದಲ್ಲಿ ಸಾಧನೆ ಮಾಡಿದ ಡಾ||ಮಾಲಾ ಶಶಿಕಾಂತ್ ಮತ್ತು ಸಂಗೀತ ಸಾಧಕ  ಡಾ||ಸುವರ್ಣ ಮೋಹನ್ ಅವರಿಗೆ ಗಾನ ಚೇತನ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

          ಕೆ.ಎಸ್.ಶ್ರೀಧರ್ ಮಾತನಾಡಿ, ಕನಕ ಮತ್ತು ಪುರಂದರ ದಾಸರು ದಾಸಶೇಷ್ಠರು ದಾಸ ಸಾಹಿತ್ಯಕ್ಕೆ ಅವರ ನೀಡಿದ ಕೊಡುಗೆ ಅಪಾರ. ದಾಸ ಶೇಷ್ಠರ ವಿಚಾರ ಚಿಂತನೆ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ 15ವರ್ಷಗಳಿಂದ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ದಾಸ ಸಾಹಿತ್ಯ ಎಲ್ಲರ ಮನೆ, ಮನಗಳಿಗೆ ತಲುಪಿಸಲು   ಕನಕ-ಪುರಂದರ ಬಾವಚಿತ್ರದೊಂದಿಗೆ ಕಲಾ ತಂಡಗಳ ಜೊತೆಯಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ, ದಾಸ ಶೇಷ್ಠರ ಚಿಂತನೆಗಳನ್ನು ಮನೆಮನೆಗಳಿಗೆ ತಲುಪಿಸಲಾಗುತ್ತಿದೆ ಎಂದರು.

 

ಸಂಘದ ಪದಾಧಿಕಾರಿಗಳಾದ ಡಾ||ಮಂಜುನಾಥ್, ಜಯರಾಮ್, ಸುದರ್ಶನ್, ಮದನ್ ರಾವ್, ಬಸವರಾಜ್, ವಿಜಯರಾಘವನ್, ಪದ್ಮನಾಭ, ರವೀಂದ್ರ ,ವಿಠ್ಠಲ್, ಗಂಗಾಧರ್, ರಾಜ, ವೆಂಕಟೇಶ್ ಬಾಬು, ಕೃಷ್ಣಮೂರ್ತಿ, ರಂಗರಾಜು, ಅಶೋಕ್, ಚಂದ್ರಶೇಖರ್ ಓ.ಟಿ.,  ಎನ್.ಬಾಬು, ಕುಪೇಂದ್ರ, ನಾಗೇಂದ್ರ ವಿರೇಶ್ , ಹೆಚ್.ಎಲ್.ಕೃಷ್ಣ, ಶಾರದಯ್ಯ ಭಾಗವಹಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top