ಒಂದೇ ಸೂರಿನಡಿ ಉನ್ನತ ಆಭರಣಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು

ವರ ಮಹಾಲಕ್ಷ್ಮಿ ಹಬ್ಬ- ದಕ್ಷಿಣ ಭಾರತದ ಅತಿದೊಡ್ಡ “ಏಷ್ಯಾ ಜ್ಯುವೆಲ್ಸ್ ಶೋ 2024”

ಆ. 9 ರಿಂದ ಮೂರು ದಿನಗಳ ಕಾಲ ಆಯೋಜನೆ

 

ಬೆಂಗಳೂರು : ವರ ಮಹಾಲಕ್ಷ್ಮಿ ಹಬ್ಬ, ಮದುವೆ ಋತುವಿಗಾಗಿ ಜಿಟಿಜಿಟಿ ಮಳೆಯ ನಡುವೆ ಬಹು ನಿರೀಕ್ಷಿತ ದಕ್ಷಿಣ ಭಾರತದ ‘ಏಷ್ಯಾ ಜ್ಯುವೆಲ್ಸ್ ಶೋ 2024’ – ಉನ್ನತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬೆಂಗಳೂರು ನಗರ ಸಜ್ಜಾಗಿದೆ. ರೆಸಿಡೆನ್ಸಿ ರಸ್ತೆಯ ರಿಟ್ಜ್-ಕರ‍್ಲ್ಟನ್ ಹೋಟೆಲ್ ನಲ್ಲಿ ಆಗಸ್ಟ್‌ 9 , 10 ಮತ್ತು 11 ರಂದು ಮೂರು ದಿನಗಳ ಕಾಲ ವಡವೆಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಒಂದೇ ಸೂರಿನಡಿ ಭಾರತದ ಶ್ರೇಷ್ಠ ವಿನ್ಯಾಸಕರ ಅತ್ಯುತ್ತಮ ಬ್ರಾಂಡ್ ಗಳನ್ನು ಖರೀದಿಸಲು ವೇದಿಕೆ ಸಜ್ಜಾಗಿದೆ. ಏಷ್ಯಾ ಜ್ಯುವೆಲ್ಸ್ ಶೋ 2024, ಆವೃತ್ತಿ ಗಮನ ಸೆಳೆಯುತ್ತಿದೆ. ಬೆಳಿಗ್ಗೆ 10.30 ರಿಂದ ರಾತ್ರಿ 8 ರವರೆಗೆ ಪ್ರದರ್ಶನ ಆಯೋಜಿಸಲಾಗಿದೆ. ದೇಶಾದ್ಯಂತ ಉನ್ನತ ಆಭರಣ ತಯಾರಕರಿಂದ ಹಿಂದೆಂದೂ ಕಾಣದ ಅತ್ಯುತ್ತಮ ಆಭರಣ ವಿನ್ಯಾಸಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತದೆ. ಆಗಸ್ಟ್‌ 9 ರಂದು ಮಧ್ಯಾಹ್ನ 12 ಗಂಟೆಗೆ ಪ್ರದರ್ಶನವನ್ನು ಉದ್ಘಾಟಿಸಲಾಗುತ್ತಿದೆ. ಏಷ್ಯಾ ಜ್ಯುವೆಲ್ಸ್ ಶೋ ವಿಶೇಷ ಮತ್ತು ಉನ್ನತ-ಮಟ್ಟದ ಫೈನ್ ಬ್ರಾಂಡೆಡ್ ಆಭರಣಗಳಿಗೆ ಮೇಳ ಖ್ಯಾತಿ ಪಡೆದಿದೆ.

ಸಂಯೋಜಕರಾದ ಹರೀಶ್ ರವರು ಮಾತನಾಡಿ 50ನೇ ವರ್ಷದ ಏಷ್ಯಾ ಜ್ಯುವೆಲ್ಸ್ ಶೋ ಪ್ರದರ್ಶನಗೊಳ್ಳುತ್ತಿದೆ.

 

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅಭರಣ ಪ್ರದರ್ಶನ ಏರ್ಪಡಿಸಲಾಗಿದೆ, ಚಿನ್ನದ ಬೆಲೆ ಕಡಿಮೆ ಆಗಿರುವುದರಿಂದ ಖರೀದಿ ಮಾಡಲು ಮಹಿಳೆಯರಿಗೆ ಸುವರ್ಣಕಾಶ.

ಕರ್ನಾಟಕ ರಾಜ್ಯಕ್ಕೆ ಪ್ರದರ್ಶನ ಮೇಳದಿಂದ ಹೊರ ರಾಜ್ಯಗಳಿಗೆ ಹೋಗಿದೆ ಇಲ್ಲಿಯೆ  ಅಭರಣಗಳ ಖರೀದಿ ಮಾಡಬಹುದು ಮತ್ತು ರಾಜ್ಯಕ್ಕೆ ಹೆಚ್ಚಿನ ಅದಾಯ ಬರುತ್ತದೆ.

 

ಅಮೂಲ್ಯ ಕಲ್ಲುಗಳನ್ನು ಒಂದೇ ಸೂರಿನಡಿ ತರುವ, ದಕ್ಷಿಣ ಭಾರತದಲ್ಲಿ ಸೊಗಸಾದ ಮತ್ತು ವಿಶ್ವ ದರ್ಜೆಯ ಆಭರಣಗಳನ್ನು ಖರೀದಿಸಲು ಇದು ಪರಿಪೂರ್ಣ ತಾಣವಾಗಿದೆ. ಬೆಂಗಳೂರು, ಮುಂಬೈ ಮತ್ತು ದೆಹಲಿ, ಜೈಪುರ, ಹೈದರಾಬಾದ್ ನ ಪ್ರಮುಖ ಬ್ರಾಂಡ್ ಗಳ ಐಷಾರಾಮಿ ಆಭರಣ ವಿನ್ಯಾಸಗಳು ಪ್ರದರ್ಶನದಲ್ಲಿರಲಿವೆ. ಅಂತಾರಾಷ್ಟ್ರೀಯ ಆಭರಣ ವಿನ್ಯಾಸಗಳ ಬೆರಗುಗೊಳಿಸುವ ಶ್ರೇಣಿಯನ್ನು ಸಹ ಇದು ಒಳಗೊಂಡಿದೆ. 

ಗಜರಾಜ್ ಜ್ಯುವೆಲ್ಲರ್ಸ್ (ಬೆಂಗಳೂರು), ನಿಖರ್ ಜ್ಯುವೆಲ್ಸ್ (ಬೆಂಗಳೂರು), ಸೃಷ್ಟಿ ಜ್ಯುವೆಲ್ಸ್ (ಬೆಂಗಳೂರು), ಸಿಂಹ ಜ್ಯುವೆಲ್ಲರ್ಸ್ (ಬೆಂಗಳೂರು), ವರಶ್ರೀ ಜ್ಯುವೆಲ್ಸ್ (ಬೆಂಗಳೂರು), ಎಂಪಿ ಜ್ಯುವೆಲ್ಲರ್ಸ್ (ಬೆಂಗಳೂರು), ಸೆಹಗಲ್ ಜ್ಯುವೆಲ್ಲರ್ಸ್ (ದೆಹಲಿ), ನೇಹಾ ಕ್ರಿಯೇಷನ್ಸ್ (ಮುಂಬೈ), ಹೇಮಾ ಕೊಠಾರಿ – ಮುಂಬೈ, ಶ್ರೀಹರಿ ಡಯಾಗೆಮ್ಸ್ ಬೈ ಅನಿರುದ್ಧ್ (ದೆಹಲಿ), ಹೌಸ್ ಆಫ್ ಇಭಾನ್ (ಮುಂಬೈ), ಸೋಹಮ್ ಕ್ರಿಯೇಷನ್ಸ್ (ಮುಂಬಯಿ), ಕರಣ್ ಜೋಹರ್, ಶ್ರೀ ಗಣೇಶ್ ಡೈಮಂಡ್ಸ್ & ಜ್ಯುವೆಲ್ಲರಿ (ಬೆಂಗಳೂರು), ಶ್ರೀ ಪರಮನೈ ಜ್ಯುವೆಲ್ಸ್ (ದೆಹಲಿ), ಸುನಿಲ್ ಜ್ಯುವೆಲ್ಲರ್ಸ್ (ಜೈಪುರ), ಆಭೂಷಣ್ ಜ್ಯುವೆಲ್ಲರ್ಸ್ (ಬೆಂಗಳೂರು), ಫಿಯೋನಾ ಡೈಮಂಡ್ಸ್ (ಬೆಂಗಳೂರು), ಜ್ಯುವೆಲ್ಲರಿ ಬೈ ನಿಖಿತಾ (ಬೆಂಗಳೂರು), ತ್ರಿ-ದಿಯಾ (ಬೆಂಗಳೂರು), ಕಹಾ ಡೈಮಂಡ್ಸ್ (ಬೆಂಗಳೂರು), ಎಫ್ ಝಡ್ ಜೆಮ್ಸ್ (ಜೈಪುರ) ಆಭರಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಲಿವೆ. 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top