ಹೊಸ ರೀತಿ ಪ್ರಚಾರಕ್ಕೆ ಮುಂದಾದ ’ಕೆಜಿಎಫ್-2’ತಂಡ

ಬೆಂಗಳೂರು : ’ಕೆಜಿಎಫ್: ಚಾಪ್ಟರ್ ೨’ ಸದ್ಯ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ. ಈ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಏ.೧೪ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಯಶ್ ಅಭಿಮಾನಿಗಳು ’ಕೆಜಿಎಫ್ ೨’ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿಜಯ್ ಕಿರಗಂದೂರು ಅವರು ಈ ಸಿನಿಮಾವನ್ನು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅದ್ದೂರಿಯಾಗಿ ಪ್ರಶಾಂತ್ ನೀಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನರಾಚಿಯ ಕರಾಳ ಲೋಕವನ್ನು ನಿರ್ದೇಶಕರು ಈಗಾಗಲೇ ’ಕೆಜಿಎಫ್: ಚಾಪ್ಟರ್ ೧’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಈಗ ಅದರ ಮುಂದುವರಿದ ಭಾಗ ’ಕೆಜಿಎಫ್: ಚಾಪ್ಟರ್ ೨’ನಲ್ಲಿ ಇರಲಿದೆ. ಒಟ್ಟಾರೆ ರಾಕಿ ಭಾಯ್? ಜಗತ್ತು ಹೇಗಿರಲಿದೆ ಎಂಬುದು ಏ.೧೪ರಂದು ತಿಳಿಯಲಿದೆ. ಆದರೆ ಅದಕ್ಕೂ ಮುನ್ನ ಮೆಟಾವರ್ಸ್ ಮೂಲಕ ಈ ಪ್ರಪಂಚ ಅನಾವರಣ ಆಗಲಿದೆ. ಹೌದು, ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ’ಕೆಜಿಎಫ್’ ಲೋಕವನ್ನು ತೋರಿಸಲು ಪ್ಲ್ಯಾನ್ಮಾಡಲಾಗಿದೆ. ಈ ವಿ?ಯ ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಮೆಟಾವರ್ಸ್ ಎಂದರೆ ಏನು ಅದರಲ್ಲಿ ’ಕೆಜಿಎಫ್: ಚಾಪ್ಟರ್ ೨’ ಜಗತ್ತು ಹೇಗಿರಲಿದೆ ಇದರಲ್ಲಿ ಜನರು ಏನೆಲ್ಲ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.


ಇತ್ತೀಚೆಗ? ಬೆಂಗಳೂರಿನಲ್ಲಿ ’ಕೆಜಿಎಫ್?: ಚಾಪ್ಟರ್? ೨’ ಸಿನಿಮಾದ ಟ್ರೇಲರ್ ಲಾಂಚ್ ಆಯಿತು. ಈ ಸಂದರ್ಭದಲ್ಲಿ ಕೆಜಿಎಫ್? ಮೆಟಾವರ್ಸ್? ಬಗ್ಗೆ ನಿರೂಪಕ ಕರಣ್ ಜೋಹರ್ಅವರು ಘೋಣೆ ಮಾಡಿದರು. ಆದರೆ ಅದೇನು ಎಂಬುದನ್ನು ಚಿತ್ರತಂಡದವರು ವಿವರಿಸಲಿಲ್ಲ. ’ಕೆಜಿಎಫ್’ ಸಿನಿಮಾದ ಅಭಿಮಾನಿಗಳು ಮೆಟಾವರ್ಸ್ ಜಗತ್ತಿನಲ್ಲಿ ಹಲವು ವಿಯಗಳನ್ನು ನೋಡಬಹುದು. ಎಲ್ಲವೂ ಇಲ್ಲಿ ವರ್ಚುವಲ್ ರಿಯಾಲಿಟಿ ರೀತಿ ಇರಲಿದೆ. ಈ ಹೊಸ ಪ್ರಕಾರದ ದುನಿಯಾದಲ್ಲಿ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲು ಎಲ್ಲರಲ್ಲೂ ಕೌತುಕ ಮೂಡಿದೆ. ಏಪ್ರಿಲ್ ೭ರಿಂದ ’ಕೆಜಿಎಫ್: ಚಾಪ್ಟರ್ ೨’ ರಾಕಿ ಭಾಯ್ ಮೆಟಾವರ್ಸ್ ಸೇಲ್ಸ್ ಆರಂಭ ಆಗಲಿದೆ. ಇದಕ್ಕೆ ಸಂಬಂಧಿಸಿದ ವೆಬ್ಸೈಟ್ ಕೂಡ ಈಗ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಚಿತ್ರತಂಡ ಹಂಚಿಕೊಂಡಿದೆ.. Non-fungible token ಮೂಲಕ ಕೆಜಿಎಫ್ ಮೆಟಾವರ್ಸ್ಗೆ ಪ್ರವೇಶ ಪಡೆಯಬಹುದು. ಅಲ್ಲಿ ಗೇಮ್ ಡೆವೆಲಪ್ ಮಾಡಬಹುದು, ವಸ್ತುಗಳನ್ನು ಹಾಗೂ ಸ್ಥಳಗಳನ್ನು ವರ್ಚುವಲ್ ಆಗಿ ಖರೀದಿಸಬಹುದು. ಇನ್ನೂ ಹಲವಾರು ಸಾಧ್ಯತೆಗಳು ಈ ದುನಿಯಾದಲ್ಲಿ ಇದೆ. ಒಟ್ಟಿನಲ್ಲಿ ಜನರಿಗೆ ಹೊಸದೊಂದು ಅನುಭೂತಿ ನೀಡಲು ’ಕೆಜಿಎಫ್ಮೆಟಾವರ್ಸ್’ ಸಿದ್ಧವಾಗುತ್ತಿದೆ.


ಮೆಟಾವರ್ಸ್ ಎಂಬುದು ಇಂಟರ್ನೆಟ್ ಲೋಕದ ಹೊಸ ಆವಿರ. ಸೋಶಿಯಲ್ ಮೀಡಿಯಾಗಳ ಸ್ವರೂಪವನ್ನೇ ಇದು ಸಂಪೂರ್ಣವಾಗಿ ಬದಲಾಯಿಸಲಿದೆ. ಸಿನಿಮಾ ನೋಡುವ, ಶಾಪಿಂಗ್ ಮಾಡುವ, ಜನರ ಜೊತೆ ಸ್ನೇಹ ಬೆಳೆಸುವ, ಚರ್ಚೆ ನಡೆಸುವ. ಹೀಗೆ ಎಲ್ಲ ಕ್ರಿಯೆಗಳೂ ಇಲ್ಲಿ ಹೊಸ ರೂಪ ಪಡೆದುಕೊಳ್ಳಲಿವೆ. ಇದು ಈಗ ’ಕೆಜಿಎಫ್: ಚಾಪ್ಟರ್? ೨’ ಸಿನಿಮಾದ ಪ್ರಚಾರಕ್ಕೆ ಬಳಕೆ ಆಗುತ್ತಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗವನ್ನು ದೊಡ್ಡ ಸ್ಥಾನಕ್ಕೆ ಕೊಂಡೊಯ್ದ ಖ್ಯಾತಿ ’ಕೆಜಿಎಫ್: ಚಾಪ್ಟರ್ ೧’ ಸಿನಿಮಾಗೆ ಇದೆ. ಈಗ ಈ ಸಿನಿಮಾದ ಎರಡನೇ ಪಾರ್ಟ್ಬಿಡುಗಡೆ ಆಗುತ್ತಿದ್ದು ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ಅಭಿನಯಿಸಿರುವುದರಿಂದ ಉತ್ತರ ಭಾರತದಲ್ಲೂ ಈ ಚಿತ್ರದ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ಸೂಪರ್ ಹಿಟ್ ಆಗಿದೆ.

Leave a Comment

Your email address will not be published. Required fields are marked *

Translate »
Scroll to Top