ಹೊಸಪೇಟೆ: ವಕ್ಫ್ ಬೋರ್ಡ್ನಿಂದ ಹಿಂದೂ-ಮುಸ್ಲಿಂ ಸಮಾಜಕ್ಕೆ ಅನ್ಯಾಯವಾಗಿದ್ದು, ವಕ್ಫ್ ಕಾಯ್ದೆ ಸಂಪೂರ್ಣ ರದ್ಧಾಗಬೇಕು ಎಂದು ಆಗ್ರಹಿಸಿ, ಪಕ್ಷತೀತ, ಜ್ಯಾತತೀತವಾಗಿ ಹೋರಾಟಕ್ಕೆ ಅಣಿಯಾಗಿದ್ದು, ಜ.4ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಮ್ಮದು ಯತ್ನಾಳ್ ಬಣವಲ್ಲ, ನಾವೆಲ್ಲರೂ ಬಿಜೆಪಿ ಬಣ. ಕೆಲ ಮಾದ್ಯಮಗಳು ಸೃಷ್ಠಿ ಮಾಡುತ್ತಿವೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇನ್ಮುಂದೆ ಬಿಜೆಪಿ ಕಚೇರಿಯಲ್ಲಿ ಸಭೆಗಳನ್ನು ನಡೆಸಲಾಗುವುದು. ಮಾಜಿ ಸಚಿವ ಆನಂದ ಸಿಂಗ್, ಬರಲಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರು ಬರಲಿ, ಕಾಂಗ್ರೆಸ್ ನವರು ಬರಲಿ. ಇದು ಪಕ್ಷತೀತ ಹೋರಾಟ. ಇದೊಂದು ಕರಾಳ ಕಾನೂನು ಇದು ಸಂಪೂರ್ಣವಾಗಿ ರದ್ಧಾಗಬೇಕು. ಇದಕ್ಕಾಗಿ ಜ.6ರಂದು ಸಹ ಹೋರಾಟ ಮುಂದುವರೆಯಲಿದೆ ಎಂದರು.
ವಿಜೇಂದ್ರ ಅವರ ವಿಚಾರ ಸದ್ಯ ಪ್ರಸ್ತಾಪ ಮಾಡಬೇಡಿ ಎಂದ ಅವರು, ಸಿಟಿ ರವಿ ಹಾಗೂ ಮುನಿರತ್ನ ಪ್ರಕರಣಗಳ ವಿಚಾರವಾಗಿ ರಾಜಕಾರಣದಲ್ಲಿ ಎಲ್ಲವೂ ಎದುರಿಸಬೇಕು. ರಾತ್ರಿಯಲ್ಲ ಸಿಟಿ ರವಿಯವರನ್ನು ತಿರುಗಾಡಿಸಿದ್ದಾರೆ ಎಂಬ ಸತೀಶ್ ಜಾರಕಿಹೊಳೆ ನಮಗೆ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ. ಈ ವಿಚಾರವಾಗಿ ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ಅವರೊಂದು ನಾವೊಂದು ಮಾತನಾಡೋದು ಸರಿಯಲ್ಲ ಎಂದು ಜಾರಿಕೊಂಡರು.