ಕರುನಾಡ ಕಂದನಿಗೆ ಭಾವಪೂರ್ಣ ಶ್ರದ್ಧಾಂಜಲಿ

ದೇವನಹಳ್ಳಿ: ರಾಜ್‍ಕುಮಾರ್ ಅವರಂತೆಯೇ ಪುನೀತ್ ಕೂಡ ಚಂದನವನದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದವರು ಅಪ್ಪು ಎಂದು ದೇವನಹಳ್ಳಿ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಸರೋವರಬೀದಿಯ ನೆಹರು ಮಕ್ಕಳ ಪಾರ್ಕ್ ನಲ್ಲಿ ಮಾರುತಿ ಯುವಕರ ಬಳಗದ ವತಿಯಿಂದ ಕನ್ನಡದ ಕಂದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ 11 ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ ಪ್ರಚಾರಕ್ಕೆ ಬಾರದೇ ಅದೆಷ್ಟೋ ಮಕ್ಕಳು ವೃದ್ಧರು ನಿರ್ಗತಿಕರು ತಮ್ಮ ಬಾಳನ್ನು ಹಸನು ಮಾಡಿಕೊಂಡಿದ್ದಾರೆ ಇಂತಹ ನಿಸ್ವಾರ್ಥ ಸೇವಕನಿಗೆ ವಿಧಿ ಘೋರ ಶಿಕ್ಷೆ ನೀಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ರವರ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳಿಂದ ಅನ್ನಸಂತರ್ಪಣೆ ಮಾಡಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ್,ಮಾರುತಿ ಯುವಕರ ಬಳಗದ ಹೇಮಂತ್, ಮುನಿರಾಜ( ದರ್ಶನ್), ನಾಗೇಶ್, ಗಂಗೂಲಿ, ಜಗದೀಶ್, ಮುರಳಿ, ಪ್ರವೀಣ್, ಅಮರ್, ಮುನಿರಾಜು, ಪೇಂಟರ್ ಮನಿರಾಜು ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top