ಆರೋಗ್ಯಕರ ಮತ್ತು ಸಂತೋಷದಾಯಕ ಜೀವನಕ್ಕೆ ಅಡ್ಡಪರಿಣಾಮಗಳಿಲ್ಲದ ಔಷಧರಹಿತ ಚಿಕಿತ್ಸೆ ಅಗತ್ಯ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಶನಲ್ ನಿಂದ ಆರೋಗ್ಯ ರಕ್ಷಣೆ ಕುರಿತು ಪ್ರಾದೇಶಿಕ ಸಮ್ಮೇಳನ ಆಯೋಜಿಸಲಾಗಿತ್ತು. ಲಯನ್ ರಮಣಮೂರ್ತಿ ಬೊಡ್ಡಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಜಿಂದಾಲ್ ನೇಚರ್ ಕ್ಯೂರ್ ಆಸ್ಪತ್ರೆಯ ಡಾ.ಎಚ್‌.ಪಿ.ಭಾರತಿ ಹಾಗೂ ಡಾ.ಗುರುಪಾದಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಂದಾಲ್ ನೇಚರ್ ಕ್ಯೂರ್‌ನ ಡಾ ಭಾರತಿ ಮತ್ತು ನೇಚರ್ ಕ್ಯೂರ್ ಆಸ್ಪತ್ರೆಯ ಡಾ ಗುರುಪಾದಪ್ಪ ಅವರು ಆರೋಗ್ಯ ಕಾಪಾಡುವ ವಿಧಾನಗಳ ಬಗ್ಗೆ ಬೆಳಕು ಚೆಲ್ಲಿದರು. ಆರೋಗ್ಯಕರ ಮತ್ತು ಸಂತೋಷದಾಯಕ ಜೀವನಕ್ಕಾಗಿ ಪೌಷ್ಟಿಕ ಆಹಾರ ಮತ್ತು ಪ್ರಕೃತಿ ಚಿಕಿತ್ಸೆ ಅಗತ್ಯವಾಗಿದೆ. ಅಡ್ಡ ಪರಿಣಾಮಗಳಿಲ್ಲದ ಔಷಧರಹಿತ ಚಿಕಿತ್ಸೆ ಮತ್ತು ಅನೇಕ ದೀರ್ಘಕಾಲದ ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ರಕ್ಷಣೆ ಪಡೆಯಲು ಸೂಕ್ತ ಕಾರ್ಯತಂತ್ರ ಅನುಸರಿಸಬೇಕು ಎಂದು ಹೇಳಿದರು.

ಚೈತನ್ಯ ಮತ್ತು ಯೋಗಕ್ಷೇಮವನ್ನು ತಮ್ಮಲ್ಲಿಯೇ ಉತ್ತೇಜಿಸಿಕೊಳ್ಳುವ ಕುರಿತು ಹೆಚ್ಚಿನ ಗಮನಹರಿಸಬೇಕು. ಮದ್ಯಪಾನದಂತಹ ದುರಭ್ಯಾಸಗಗಳಿಂದ ದೂರ ಇರಬೇಕು. ವ್ಯಾಯಾಮ, ನಿದ್ರೆ ಮತ್ತು ಉಪವಾಸವು ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕೆ ಸಹಾಯ ಮಾಡುತ್ತವೆ ಎಂದರು. ಜಿಂದಾಲ್ ನೇಚರ್ ಕ್ಯೂರ್ ಇನ್‌ಸ್ಟಿಟ್ಯೂಟ್‌ನ ಉಪಮುಖ್ಯ ವೈದ್ಯಾಧಿಕಾರಿ ಡಾ.ಎಚ್.ಪಿ.ಭಾರತಿ ಅವರನ್ನು ಪ್ರಾದೇಶಿಕ ಲಯನ್ಸ್ ಕ್ಲಬ್ 317ಎಫ್ 317ರ ವಲಯದ ಅಧ್ಯಕ್ಷ ಲಯನ್ ಬಿ ವಿ ರಮಣಮೂರ್ತಿ ಸನ್ಮಾಯಿಸಿದರು.

Leave a Comment

Your email address will not be published. Required fields are marked *

Translate »
Scroll to Top