ತಾನು ಓದಿದ ಶಾಲೆಯಲ್ಲೇ ತನ್ನ ಸ್ವಂತ ಮಗನನ್ನು ಸರಕಾರಿ ಶಾಲೆಗೆ ಸೇರಿಸಿ ಮಾದಾರಿಯಾದ ಮಾಜಿ ಶಾಸಕ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಬಿಜೆಪಿ ಪಕ್ಷದ ಅಧ್ಯಕ್ಷ ಹಾಗೂ ಕುಷ್ಟಗಿ ಹೃದಯವಂತ ಮಾಜಿ ಶಾಸಕನೆಂದು ಕುಷ್ಟಗಿ ಕ್ಷೇತ್ರದ ಜನತೆಯ ಮನಸ್ಸಿನಲ್ಲಿ‌ ಹಚ್ಚಹಸಿರಾಗಿ ಉಳಿದಿರುವ ದೊಡ್ಡನಗೌಡ ಪಾಟೀಲ ಕೊರಡಕೇರಾ ಇವರು ತಾನು ಓದಿ ಬೆಳೆದ ಸರಕಾರಿ ಶಾಲೆಯಲ್ಲೇ ತನ್ನ ಸ್ವಂತ ಮಗನನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಡಕೇರಾ ಶಾಲೆ ಸೇರಿಸಿ ಇತರೆ ಜನ ಪ್ರತಿನಿಧಿಗಳಿಗೆ ಹಾಗೂ ಸರಕಾರಿ ನೌಕರಸ್ಥರಿಗೆ ಮತ್ತು ಬುದ್ದಿವಂತ ಜೀವಿಗಳಿಗೆ ಮಾದರಿಯಾಗಿದ್ದಾರೆ

ನಂತರ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಮಾಟೀಲ ಅವರು ನಮ್ಮ ತಂದೆ ಹನಮಗೌಡ ಮಾಟೀಲ ಶಾಸಕರಾಗಿದ್ದರು‌ ಆ ಸಮಯದಲ್ಲಿ ನಮ್ಮ ತಂದೆಯವರು ನನ್ನನ್ನು ನಮ್ಮ‌ ಸ್ವಂತ ಊರಿನಲ್ಲಿ ಇರುವ ಸರ್ಕಾರಿ ಶಾಲೆಗೆ ನನ್ನನ್ನು ಸೇರಿಸಿದ್ದರು ಅದಕ್ಕಾಗಿ ನಾನು ಕೂಡ ಈಗ‌ ಸರಕಾರಿ‌ ಶಾಲೆಗೆ ನನ್ನ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದೇನೆ.

ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣುಮಗಳು ಇದ್ದು ಈಗ ನನ್ನ ಹಿರಿಯ ಮಗನಿಗೆ ಆರು ವರ್ಷ ಮುಗಿದಿದ್ದರಿಂದ ೧ನೇ ತರಗತಿ ಶಾಲೆಗೆ ಸೇರಿಸಬೇಕಾಗಿದೆ ನನ್ನ ಹಿರಿಯ ಮಗನಿಗೆ ಸರಕಾರಿ ಶಾಲೆಯಲ್ಲೇ ಓದುತ್ತಾನೆ ಮತ್ತು ನನಗೆ ಇನ್ನು ಇಬ್ಬರು ಮಕ್ಕಳು ಇದ್ದಾರೆ ಇದೇ ನಮ್ಮ ಕೊರಡಕೇರಾ ಗ್ರಾಮದ ಸರಕಾರಿ ಶಾಲೆಗೆ ಸೇರಿಸುತ್ತೇನೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top