ಬೆಂಗಳೂರು: ವಿಶ್ವಕರ್ಮ ಸೇವಾ ಪ್ರತಿನಿಷ್ಠಾನದಿಂದ “ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ” ಅಂಗವಾಗಿ ಭಗವಾನ್ ವಿಶ್ವಕರ್ಮರ ಕುರಿತಾದ ಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಕಲಾಪೋಷಕ ವಿಶ್ವಕರ್ಮ ನಾಡೋಜ ಡಾ. ಉಮೇಶ್ ಕುಮಾರ್ ತಿಳಿಸಿದರು. ಅವರು ಸ್ಪರ್ಧೆಯ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಸ್ಪರ್ಧೆ ಯ ಮಾಹಿತಿ ವಿವರಿಸಿದರು.
ಖ್ಯಾತ ನೃತ್ಯ ತೀರ್ಪುಗಾರರಾದ ಶ್ರೀ ಷಡಕ್ಷರಿ, ಭಾವನಾ ವೆಂಕಟೇಶ್ವರ,ಚೈತ್ರ ಅನಂತ್, ಅನುರಾಧ ಲೋಕೇಶ್ ಹಾಗೂ ಖ್ಯಾತ ಸಂಗೀತ ತೀರ್ಪುಗಾರರಾದ ಶ್ರೀಮತಿ ರೋಹಿಣಿ ರಘುನಂದನ್, ಮಹೇಶ್ ಮಹದೇವ್, ಪ್ರಿಯದರ್ಶಿನಿ, ಶ್ಲಾಘ್ಯ ವಶಿಷ್ಠ ರವರುಗಳು ಮಾತನಾಡಿ ಭಗವಾನ್ ವಿಶ್ವಕರ್ಮರನ್ನು ಸ್ತುತಿಸುವ ಈ ಸ್ಪರ್ಧೆಗಳಿಗೆ ವಿಡಿಯೋ ಆಡಿಶನ್ ಮೂಲಕ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ, ಅಂತಿಮ ಸ್ಪರ್ಧೆಯನ್ನು ಸೆಪ್ಟೆಂಬರ್ 27 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಶಂಕರ್.ಜಿ ಹಾಗೂ ಶ್ರೀಮತಿ ರಮ್ಯಾ ಕೃಷ್ಣಮೂರ್ತಿ ಮಾತನಾಡಿ ಸ್ಪರ್ಧೆಗೆ ಎಲ್ಲಾ ವಯೋಮಾನ, ಎಲ್ಲಾ ಸಮುದಾಯದವರಿಗೆ ಅವಕಾಶವಿದ್ದು, ಏಕ ವ್ಯಕ್ತಿ ಇಲ್ಲವೆ ಸಮೂಹ ಗಾಯನ ಹಾಗೂ ನೃತ್ಯ ಪ್ರದರ್ಶನ ಮಾಡಬಹುದಾಗಿದೆ. ಬಹುಮಾನಗಳು 10 ಸಾವಿರ, 8 ಸಾವಿರ, 6 ಸಾವಿರ ರೂಪಾಯಿ. ಆಸಕ್ತರು 9019364440 ಸಂಖ್ಯೆಗೆ ವಾಟ್ಸ್ ಅಪ್ ಮೂಲಕ , 10 ನಿಮಿಷದ ವಿಡಿಯೋ ಕಳುಹಿಸಿ ಆಡಿಷನ್ ನಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ ಅಡಿಷನ್ ವಿಡಿಯೋ ಕಳುಹಿಸಲು ಕೊನೆದಿನ 10 ಸೆಪ್ಟೆಂಬರ್2024.