ನವದೆಹಲಿ ; ಚಳಿಗಾಲದ ಅವೇಶನವು ಸಂಸತ್ತಿನಲ್ಲಿ ಶೀಘ್ರದಲ್ಲಿ ಆರಂಭವಾಗಲಿದ್ದು, ಸರ್ಕಾರವು ೩ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಮಸೂದೆ ಮಂಡಿಸದೆ. ಹಾಗಾಗಿ ಸಂಸತ್‌ನಲ್ಲಿ ಕಲಾಪ ಗದ್ದಲಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಈ ಮೂರು ಕೈಷಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ ಸಾವಿರಾರು ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ರೈತರ ಒಂದು ಚಿಕ್ಕ ಗುಂಪು ಮಾತ್ರ ಈ ಮೂರು ಕಾಯ್ದೆಗಳ ರದ್ದತಿಗಾಗಿ ಪ್ರತಿಭಟಿಸುತ್ತಿದ್ದರೂ ಪ್ರತಿಯೊಬ್ಬರನ್ನೂ ಒಳಗೊಳ್ಳುವ ಬೆಳವಣಿಗೆಯತ್ತ ಕರೆದೊಯ್ಯುವುದು ಈ ಕ್ಷಣದ ಅಗತ್ಯವಾಗಿದೆ ಎಂದು ಮಸೂದೆ ಪ್ರತಿಪಾದಿಸುತ್ತದೆ.