ಸಂಡೂರು : ಕ್ರೀಡೆಗಳು ಆರೋಗ್ಯವನ್ನು ನೀಡುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಗಳನ್ನು ಸಹಾಯಕಾರಿಯಾಗಿವೆ ಯುವಕರು ಕ್ರೀಡೆಯಲ್ಲಿ ಭಾಗವಹಿಸಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎಂದು ರಾಕೆಟ್ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಅಧ್ಯಕ್ಷರಾದ ಬಿ ನಾಗನಗೌಡ ಅವರು ಅಭಿಪ್ರಾಯಪಟ್ಟರು. ಸ್ನಾತಕೋತ್ತರ ಕೇಂದ್ರ ನಂದಿ ಹಳ್ಳಿಯಲ್ಲಿ ಜರು ಗಿದ ಕರ್ನಾಟಕ ರಾಜ್ಯ ರಾಕೆಟ್ ಬಾಲ್ ತಂಡದ ಆಯ್ಕೆ ಮತ್ತು ಮೂರು ದಿನಗಳ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಸಾಧನೆ ಸುಲಭವಾಗಿ ಸಿಗುವಂಥದ್ದಲ್ಲ ಏಕಾಗ್ರತೆ ಶ್ರದ್ಧೆಯಿಂದ ಸತತ ಪರಿಶ್ರಮ ಪಟ್ಟಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದರು. ಡಿಸೆಂಬರ್ 26ರಿಂದ 28ರ ವರೆಗೆ ದೆಹಲಿಯಲ್ಲಿ ನಡೆಯಲಿರುವ 8ನೇ ಹಿರಿಯ ರಾಷ್ಟ್ರೀಯ ರಾಕೆಟ್ ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯ ಪುರುಷರ ತಂಡದ ಆಟಗಾರರಿಗೆ ಶುಭಹಾರೈಸಿದರು.

ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಂ ರಾಗಿ ಮಾತನಾಡಿ, ಶಿಕ್ಷಣ ಕ್ರೀಡೆ ಆರೋಗ್ಯ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಸೇವೆಸಲ್ಲಿಸುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಿ. ನಾಗನಗೌಡ ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ಉಪಾಧ್ಯಕ್ಷ ಲಕ್ಷ್ಮಣ್ ತರಬೇತುದಾರ ಈಶ್ವರ್ ಬೊಮ್ಮನಾಳ, ಕಾರ್ಯದರ್ಶಿ ಶ್ರೀನಿವಾಸ್, ಎಸ್ ಎಂ ರಾಜು, ಖಜಾಂಚಿ ಮಂಜುನಾಥ್, ವೆಂಕಟಸುಬ್ಬಯ್ಯ, ಕ್ರೀಡಾ ಸಹಾಯಕ ಪಾಪಯ್ಯ ಇತರರಿದ್ದರು. ಆರ್.ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

ತಂಡ :
ಆರ್ ಚಂದ್ರಶೇಖರ್ ಸಂಡೂರು ಬಳ್ಳಾರಿ ಜಿಲ್ಲೆ, ಬಸವರಾಜ್ ಹನುಮನಾಳ ಕೊಪ್ಪಳ ಜಿಲ್ಲೆ, ಕುಮಾರ್ ವಿ ನವಲಗಿ ಬಾಗಲಕೋಟೆ ಜಿಲ್ಲೆ, ಮಲ್ಲೇಶ್ ನವಲಗಿ ಬಾಗಲಕೋಟೆ ಜಿಲ್ಲೆ, ಮಂಜುನಾಯ್ಕ ಹರಪನಹಳ್ಳಿ ವಿಜಯನಗರ ಜಿಲ್ಲೆ, ಶೀತಲ ನಂಜನಗೂಡು ಮೈಸೂರು ಜಿಲ್ಲೆ, ಹಿತೇಶ್ ಬೆಂಗಳೂರು ಬೆಂಗಳೂರು ಜಿಲ್ಲೆ.