ಬೆಂಗಳೂರು:ನಾಗರಿಕ ವಿಮಾನಯಾನ ಇಲಾಖೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ವತಿಯಿಂದ ಸೆಪ್ಟೆಂಬರ್ 11 ಹಾಗೂ 12 ರಂದು ನವದೆಹಲಿಯಲ್ಲಿ ನಡೆಯಲಿರುವ 2 ನೆಯ ಏಷಿಯಾ ಪೆಸಿಫಿಕ್ ಸಚಿವ ಸಮ್ಮೇಳನದ ಹಿನ್ನೆಲೆಯಲ್ಲಿ ” ಏಕ್ ಪೇಡ್ ಮಾ ಕೇ ನಾಮ್ ” ಅಭಿಯಾನ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಮುಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ವಿಮಾನ ನಿಲ್ದಾಣದ ಮುಂದೆ ಸಸಿಗಳನ್ನು ನೆಟ್ಟು ನೀರೆರದರು.
ಈ ಸಂದರ್ಭದಲ್ಲಿ ವಿಮಾನನಿಲ್ದಾಣ ನಿರ್ದೇಶಕ ಡಾ ಚಿಲ್ಕಾಮಹೇಶ್ ಸೇರಿದಂತೆ ಹಲವರಿದ್ದರು.
Facebook
Twitter
LinkedIn
WhatsApp
Telegram
Email
Print