ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅವರಿಗೆ ಸಣ್ಣ ರಿಲೀಫ್

ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ಸಣ್ಣ ರಿಲೀಫ್ ಸಿಕ್ಕಿದೆ.ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ ಹೈಕೋರ್ಟ್, ಅಲ್ಲಿಯವರಗೂ ಯಾವುದೇ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ.

17ಎ ಮಾನದಂಡ ಪಾಲನೆಯಾಗಿಲ್ಲ, ಪಿಸಿ ಆಕ್ಟ್ 17ಎ ಅಡಿ ಪೂರ್ವಾನುಮತಿ ಅಗತ್ಯ, ಪೊಲೀಸ್ ಅಧಿಕಾರಿ ಅನುಮತಿ ಪಡೆಯದೆಯೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸ್ಸು, ನಿರ್ಧಾರಗಳ ಕುರಿತು ತನಿಖೆ ಇರಬೇಕು, ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. 17ಎ ಪಾಲನೆಯಾಗದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರಾಸಿಕ್ಯೂಷನ್ಗೆ ಅನುಮತಿ ಬೇಕಾಗಿಲ್ಲ ಎಂದು ಹೇಳಿಕೆ ನೀಡುವ ಹಿನ್ನೆಲೆಯಲ್ಲಿ ದೂರುದಾರ ಟಿಜೆ ಅಬ್ರಹಾಂಗೆ ದಂಡ ವಿಧಿಸಿ ದೂರನ್ನು ವಜಾಗೊಳಿಸಬೇಕು. ಪ್ರಾಸಿಕ್ಯೂಷನ್ಗೆ ನೀಡಿರುವ ಅನುಮತಿಯನ್ನು ರಾಜ್ಯಪಾಲರು ಹಿಂಪಡೆಯಬೇಕು, ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ರಾಜ್ಯಪಾಲರು ದಂಡ ವಿಧಿಸಬೇಕು, ದೂರು ವಜಾಗೊಳಿಸಬೇಕು, ರಾಜ್ಯಪಾಲರ ಮುಂದೆ ಒಂದು ಹೇಳಿಕೆ, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡಿದ್ದಾರೆ. ದ್ವಂದ್ವ ಹೇಳಿಕೆ ಹಿನ್ನೆಲೆಯಲ್ಲಿ ದಂಡ ವಿಧಿಸಿ ದೂರು ವಜಾಗೊಳಿಸಲು ಮನವಿ ಮಾಡಿದರು.

ಇಬ್ಬರು ಆರೋಪಿಗಳ ದೂರು ಕುರಿತು ಶೋಕಾಸ್ ನೋಟಿಸ್ ನೀಡಿಲ್ಲ, ತರಾತುರಿಯಲ್ಲಿ ರಾಜ್ಯಪಾಲರು ವಿವೇಚನೆ ಬಳಸದೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇಲ್ಲಿ ಸ್ವಾಭಾವಿಕ ನ್ಯಾಯದ ಪಾಲನೆಯಾಗಿಲ್ಲ ಎಂದು ಹಲವು ಪ್ರಕರಣಗಳ ಕುರಿತು ಸಿಎಂ ಪರ ವಕೀಲರು ಉಲ್ಲೇಖಿಸಿ, ಸುದೀರ್ಘ ವಾದ ಮಂಡನೆ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ್ದು, ಅಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗದAತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ಎರಡು ದಿನಗಳ ಕಾಲ ವಿಚಾರಣೆ ಮುಂದೂಡಿಕೆಯಾಗಿದ್ದರಿAದ ಮತ್ತೆ ಎರಡು ದಿನ ಸಿಎಂಗೆ ರಿಲೀಫ್ ಸಿಕ್ಕಂತಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ಸಿಎಂಗೆ ರಿಲೀಫ್ ಸಿಕ್ಕಿದೆ.

 
Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top