ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ, ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ದರ್ಶನ್ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಗುರುವಾರ ಬೆಳಿಗ್ಗೆ ೧೦ ಗಂಟೆಗೆ `ದರ್ಶನ್’ರನ್ನು ಬಂಧೀಖಾನೆ ಇಲಾಖೆ ಅಧಿಕಾರಿಗಳು, ಸಕಲ ಭದ್ರತೆಯೊಂದಿಗೆ ಬಳ್ಳಾರಿಗೆ ಕರೆ ತಂದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲು, ಬೆಂಗಳೂರಿನ ೨೪ನೇ ಎಸಿಎಂಎಂ ನ್ಯಾಯಾಲಯವು ಮಂಗಳವಾರ ಆದೇಶಿಸಿದ ಹಿನ್ನೆಲೆಯಲ್ಲಿ, `ದರ್ಶನ್’ರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.
ಬಳ್ಳಾರಿಯ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ `ಸೆಲ್’ನಲ್ಲಿ ದರ್ಶನ್‌ರನ್ನು ಇರಿಸಲಾಗುತ್ತದೆ. ಜೈಲಿನ ಕೊನೆಯ ಭಾಗದ `ಸೆಲ್’ನಲ್ಲಿ ಅವಕಾಶ ಮಾಡಿಕೊಡಲಾಗಿದೆ. `ದರ್ಶನ್’ರನ್ನು ಇಡಬಹುದಾದ `ಸೆಲ್’ನಲ್ಲಿನ ಭದ್ರತೆ, ಅಲ್ಲಿನ ಪರಿಸ್ಥಿತಿ, ಸಿ.ಸಿ.ಟಿವಿ ವ್ಯವಸ್ಥೆ, ಮತ್ತಿತರೆ ಎಲ್ಲವುಗಳ ಬಗ್ಗೆಯೂ ಜೈಲಿನ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಅಧಿಕಾರಿಗಳು ಸಮಗ್ರವಾಗಿ ವೀಕ್ಷಿಸಿ, ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದರ್ಶನ್ ಅವರ ಅಭಿಮಾನಿಗಳು ಕಳೆದ ರಾತ್ರಿಯಿಂದಲೇ `ಬಳ್ಳಾರಿ ಜೈಲಿ’ನ ಮುಂದೆ ಜಮಾಯಿಸಿದ್ದುದು ಕಂಡು ಬಂದಿತು. ಪೊಲೀಸರು ಆಗಾಗ್ಗೆ ಅವರನ್ನು ಅಲ್ಲಿಂದ ಹೊರಗಡೆ ಕಳುಹಿಸುವ ಪ್ರಯತ್ನವನ್ನು ನಡೆಸಿದ್ದರು. ತಮ್ಮ ಅಭಿಮಾನಿ ನಟ, ಚಾಲೆಂಜಿAಗ್ ಸ್ಟಾರ್, `ಡಿ’ ಬಾಸ್‌ನನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಗುಂಪು-ಗುAಪಾಗಿ ಬಂದು ಜೈಲಿನ ಬಳಿ ನಿಂತಿದ್ದಾರಲ್ಲದೇ,ಟಿವಿ ಕ್ಯಾಮೆರಾಗಳನ್ನು ಕಂಡು `ದರ್ಶನ್’ ಪರ ಘೋಷಣೆಗಳನ್ನು ಕೂಗುತ್ತಿದ್ದುದೂ ಗೋಚರಿಸಿತು.
ಬಳ್ಳಾರಿಯ ಸೆಂಟ್ರಲ್ ಜೈಲಿಗೆ ೧೪೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರö್ಯ ಹೋರಾಟಗಾರರು, ಭಾಷಾ ಚಳುವಳಿಗಾರರು, ಕರ್ನಾಟಕ ಏಕೀಕರಣ ಹೋರಾಟಗಾರರು ಸೇರಿದಂತೆ ವಿವಿಧ ಹೋರಾಟಗಾರರು ಮಾತ್ರವಲ್ಲದೇ, ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿದವರು, ಕುಖ್ಯಾತ ಕ್ರಿಮಿನಲ್‌ಗಳು, ಗ್ಯಾಂಗ್‌ಸ್ಟರ್‌ಗಳು, ಕೊಲೆಗಾರರು ಬಳ್ಳಾರಿ ಜೈಲಿನಲ್ಲಿದ್ದು, ಹೋಗಿದ್ದಾರೆ. ಈಗ ಕೊಲೆ ಆರೋಪದ ಮೇಲೆ ಬಂಧಿತವಾಗಿರುವ ದರ್ಶನ್ ಬಳ್ಳಾರಿ ಜೈಲಿನ ಸೆರೆವಾಸಿಯಾಗಿದ್ದಾರೆ.