ನುಲಿಯ ಚಂದಯ್ಯ ವಚನಗಳು ಇಂದಿಗೂ ಪ್ರಸ್ತುತ : ಬಿ. ಎಸ್.ಆನಂದ್ ಕುಮಾರ್ ಏಕಲವ್ಯ

ಬೆಂಗಳೂರು: ನುಲಿಯಚಂದಯ್ಯ ಅವರ ವಚನಗಳು ಇಂದಿಗೂ ಪ್ರಸ್ತುತ ಎಂದು  ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ  ಬಿ. ಎಸ್.ಆನಂದ್ ಕುಮಾರ್ ಏಕಲವ್ಯ ಹೇಳಿದ್ದಾರೆ.

917ನೇ ಜಯಂತ್ಯೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯಮಟ್ಟದ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ ಉದ್ಘಾಟಿಸಿದರು. ಆನಂದ್ ಕುಮಾರ್ ಎಕಲವ್ಯ ಶ್ರೀ ಕುಳುವರ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ,  ಕೊರಮ‌ಕೊರಚ ಸಮುದಾಯದ ಧಾರ್ಮಿಕ ಅಸ್ಮಿತೆಯಾಗಿರುವ ಕಾಯಕ ಯೋಗಿ ಚಂದಯ್ಯನವರ ಜಯಂತ್ಯೋತ್ಸವವನ್ನು ಎಕೆಎಂಎಸ್ ಸಂಘಟನೆ ಮೂಲಕ ಆಚರಣೆಗೆ ತರಲಾಗಿದೆ. ಆ ಮ‌ೂಲಕ ಎಲ್ಲ ವಿಧದಲ್ಲೂ ಅವಕಾಶ ವಂಚಿತ  ಈ ಅಲೆಮಾರಿ ಕುಳುವ  ಸಮಾಜವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಹೆಸರುಗಳಿಂದ ಹಂಚಿ ಹೋಗಿರುವ ಈ ಸಮುದಾಯಗಳು ಕುಳುವ ಎಂಬ ಒಂದೇ ಸೂರಿನಡಿ ಸಂಘಟಿತರಾಗಲು ಕಾಯಕದಿಂದಲೇ ಜೀವನ್ಮುಕ್ತಿ ಎಂದು ನೀಡಿದರು.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭಾ ಧನಂಜಯ, ಇಲಾಖೆಯ ಹಿರಿಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ್, ಸಮುದಾದಯ ಮುಖಂಡರಾದ ಅಶೋಕ ಎನ್ ಚಲವಾದಿ, ಕೃಷ್ಣಪ್ರಸಾದ್, ಇಲಾಖೆಯ  ಅಧಿಕಾರಿ-ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top