ವಿನೋಬಾ ಬಾವೆ ಅನಾಥ ಆಶ್ರಮದಲ್ಲಿ ಬಸವ ಪಂಚಮಿ ಆಚರಣೆ : ಹುತ್ತಕ್ಕೆ ಹಾಲೆರೆಯುವುದು ಪರಿಸರಕ್ಕೆ ಮಾರಕ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ಬೆಂಗಳೂರು : ವಿಧ್ಯಾರ್ಥಿ ಬಂಧುತ್ವ ವೇದಿಕೆಯಿಂದ ಗಾಂಧಿನಗರದ ವಿನೋಬಾ ಬಾವೆ ಅನಾಥ ಆಶ್ರಮದಲ್ಲಿ ಬಸವ ಪಂಚಮಿ” ಕಾರ್ಯಕ್ರಮ ಆಚರಿಸಲಾಯಿತು. ನಾಗರ ಪಂಚಮಿಯಿಂದ ಉಂಟಾಗುವ ಪರಿಸರ ಹಾನಿ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ  ಇ ಬಸವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯುವುದು ತರವಲ್ಲ. ಇದರಿಂದ ಹಾವು ಸೇರಿದಂತೆ ಇತರ ಜೀವಗಳಿಗೆ ಹಾನಿಯಾಗುತ್ತದೆ. ಮೌಢ್ಯ ತೊರೆದು ಬಸವ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಪತ್ರಕರ್ತ ಆಲ್ಬೂರು ಶಿವರಾಜ ಮಾತನಾಡಿ, ಹಬ್ಬ ಹರಿದಿನಗಳ ಆಚರಣೆಗೆ ವಿರೋಧವಿಲ್ಲ. ಆದರೆ ನಾಗರ ಪಂಚಮಿಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

 

ಎಂ.ಬಿ.ವಿ ಜಿಲ್ಲಾ ಸಮಿತಿಯ ಡಿ  ವೀರಣ್ಣ, ಸಂಚಾಲಕರಾದ ತೋರಣ್ ಕುಮಾರ್.  ಹಾಗೂ ಆಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು.

Facebook
Twitter
LinkedIn
Telegram
Email
WhatsApp
Print

Leave a Comment

Your email address will not be published. Required fields are marked *

Translate »
Scroll to Top