ಮುಡಾ ವಿಚಾರದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ : ಚಲುವರಾಯಸ್ವಾಮಿ

ಮಂಡ್ಯ : ಮುಡಾ ಹಗರಣದಲ್ಲಿ ಸಿ ಎಂ ವಿರುದ್ದ ಪ್ರಾಸಿಕ್ಯುಸನ್ ಗೆ ಅನುಮತಿ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಮೂಡ ವಿಚಾರದಲ್ಲಿ ಸಿ ಎಂ ಪಾತ್ರ ಇಲ್ಲ. ಕಾನೂನು ಬದ್ದವಾಗಿಯೇ ಅವರು ನಿವೇಶನ ಪಡೆದುಕೊಂಡಿದ್ದಾರೆ. ಇದೆಲ್ಲಾ ನಡೆದಿರೋದು ಬಿಜೆಪಿ ಅವದಿಯಲ್ಲಿ, ಹಾಗಾಗಿ ಅವರ ಮೇಲೆ ಕ್ರಮ‌ಕೈಗೊಳ್ಳಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

 

ಮಂಡ್ಯದ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಿರಾಣಿ ಹಾಗು  ಶಶಿಕಲ‌ ಜೊಲ್ಲೆ ವಿರುದ್ದವೂ ಪ್ರಾಸಿಕ್ಯೂಷನ್ ಗೆ  ಅನುಮತಿ ಕೇಳಲಾಗಿತ್ತು. ಅವರಿಗೆ ಇಲ್ಲದೆ ಇರೋದು ಸಿದ್ದರಾಮಯ್ಯಗೆ ಕೊಡ್ತಿರೋದು ರಾಜಕೀಯ ಪ್ರೇರಿತ. ಸಿ ಎಂ ಸಿದ್ದರಾಮಯ್ಯ ಅವರ ಬದಲಾವಣೆಯೂ ಇಲ್ಲ. ಅವರ ಸ್ಥಾನಕ್ಕೆ‌ ಕುತ್ತು ಇಲ್ಲ ಎಂದ‌ ಸ್ಪಷ್ಟ ಪಡಿಸಿದರು.

ಬಿಜೆಪಿ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರ ಅವಧಿಯಲ್ಲಿನ ಹಗರಣಗಳ ಬಗೆಗೆ ನಾವು ಪ್ರಶ್ನೆ ಮಾಡ್ತಿವಿ ಎಂದರು. ಪಾದಯಾತ್ರೆಗೆ ಜೆಡಿಎಸ್ ಬೆಂಬಲ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರ ಜೊತೆಗೆ ಇದ್ದಾಗ ಬೆಂಬಲ ಕೊಡಬೇಕಲ್ವಾ. ಬೆಂಬಲ ಕೊಡದಿದ್ದರೆ ತೆಗಿತಾರೆ ಎಂಬ ಕಾರಣಕ್ಕೆ‌ ಜೆಡಿಎಸ್ ನವರು ಬೆಂಬಲ ಕೊಟ್ಟಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಎದುರಿಸಬೇಕು. ಜೊತೆಗೆ ಕರ್ತವ್ಯವನ್ನು ನಿಬಾಯಿಸಬೇಕು ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top