ಜೂ 28 – 30 ರವರೆಗೆ ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ

 ಬೆಂಗಳೂರು : ದೇಶದ ಹಸಿರು ವಾಹನಗಳ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಬೆಂಗಳೂರಿನಲ್ಲಿ ಜೂ. 28 ರಿಂದ 30 ರ ವರೆಗೆ ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 5ನೇ ಆವೃತ್ತಿಯ ಹಸಿರು ವಾಹನಗಳ ಮೇಳ ನಡೆಯಲಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ, ಭಾರತದ ಪ್ರಮುಖ ಪರಿಸರ ಸಂಶೋಧನಾ ಸಂಸ್ಥೆಯಾದ ಇಂಧನ ಪರಿಸರ ಸಂಪನ್ಮೂಲ ಸಂಸ್ಥೆ, ಅನೇಕ ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳ ಸಂಘಟನೆಗಳು, ಜ್ಞಾನಾಧಾರಿತ ಪಾಲುದಾರರಾಗಿ 6ಡಬ್ಲ್ಯೂ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈದ್ರಾಬಾದ್ ನ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕರಾದ ಮೊಹಮದ್ ಮುದಸ್ಸರ್, ರಾಮ್ ಸೌಂದಲ್ಕರ್, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಜಂಟಿ ನಿರ್ದೇಶಕರಾದ ಡಾ. ಕೆ ಸೋಕ್ರೀಟ್ಸ್, ಫೆರ್ರಿ ಅಧ್ಯಕ್ಷ ರಮೇಶ್ ಶಿವಣ್ಣ, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಕ್ರೇಷ್ಮಾ ಕಾರ್ಯದರ್ಶಿ ಎ.ಸಿ. ಈಶ್ವರ್, ಆಟೋ ಪಾರ್ಟ್ಸ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಕೆ. ವೆಂಕಟೇಶ್, ಗ್ರೀನ್ ವೆಹಿಕಲ್ ಎಕ್ಸ್ಪೋವನ್ನು ಸ್ವಚ್ಛ ಮತ್ತು ಸುಸ್ಥಿರ ಸಂಚಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬದ್ಧತೆಯ ಪರಿಕಲ್ಪನೆಯಡಿ ಆಯೋಜಿಸಲಾಗಿದೆ. ಇವಿ ಘಟಕಗಳು, ಬಿಡಿಭಾಗಗಳು, ತಂತ್ರಜ್ಞಾನಗಳು ಮತ್ತು ಸಂಬಂಧಪಟ್ಟ ಕೈಗಾರಿಕಾ ವಲಯವನ್ನು ಒಂದೇ ವೇದಿಕೆಗೆ ತರುವುದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟದಲ್ಲಿ ಪಾಲುದಾರರಿಗೆ ಗ್ರೀನ್ ವೆಹಿಕಲ್ ಎಕ್ಸ್ಪೋ ಸೂಕ್ತ ವೇದಿಕೆಯಾಗಿದೆ ಎಂದರು. ಜೂನ್ 28 ರಂದು ಬೆಳಿಗ್ಗೆ 10:00 ಗಂಟೆಗೆ ಕೇಂದ್ರದ ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಳ ಉದ್ಘಾಟಿಸಲಿದ್ದಾರೆ. ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ. ಸಾಕ್ರಟೀಸ್ ಸಂಬಂಧಪಟ್ಟ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಉತ್ತೇಜಿಸುವ ಪ್ರವರ್ತಕ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಿದೆ. ಇವಿ ಕುರಿತು ಕರ್ನಾಟಕ ಸರ್ಕಾರದ ಹೊಸ ನೀತಿಯು ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿ ಮತ್ತು 50,000 ಕೋಟಿ ರೂ ಹೂಡಿಕೆ ಗುರಿ ಹೊಂದಲಾಗಿದೆ. 

ಪಳೆಯುಳಿಕೆ ಇಂಧನಗಳ ಹೆಚ್ಚುತ್ತಿರುವ ಬೆಲೆಗಳು ಮತ್ತು ಪರಿಸರ ಸಂರಕ್ಷಣೆಯ ಅರಿವು ಭಾರತ ಸೇರಿದಂತೆ ಜಗತ್ತನ್ನು ಹಸಿರು ವಾಹನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ. ಎರಡನೇ ಹಂತದ ಫೇಮ್ ಯೋಜನೆಯಡಿ 2019 ರಿಂದ 3 ವರ್ಷಗಳ ಅವಧಿಗೆ 10,000 ಕೋಟಿಗಳಷ್ಟು ಹೂಡಿಕೆಯನ್ನು ಹೊಂದಿರುವುದು ವಿಶೇಷವಾಗಿದೆ. ಫೇಮ್-II ರಡಿ 7000 ಎಲೆಕ್ಟ್ರಿಕ್ ಬಸ್ಗಳು, 5 ಲಕ್ಷ ಇ-ತ್ರಿಚಕ್ರ ವಾಹನಗಳೂ, 55000 ಇ- ನಾಲ್ಕು ಚಕ್ರದ ಪ್ರಯಾಣಿಕರ ಕಾರುಗಳು ಮತ್ತು 10 ಲಕ್ಷ ಇ-ದ್ವಿಚಕ್ರ ವಾಹನಗಳನ್ನು ಬೆಂಬಲಿಸುವ ಮೂಲಕ ಬೇಡಿಕೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದು 2030 ರ ವೇಳೆಗೆ ಸುಮಾರು $180 ಶತಕೋಟಿ ಹೂಡಿಕೆಯನ್ನು ಮತ್ತು 158 ಗಿಗಾವ್ಯಾಟ್ ವಾರ್ಷಿಕ ಬ್ಯಾಟರಿ ಸಾಮರ್ಥ್ಯದ ಅವಶ್ಯಕತೆಯಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವು 2020 ರಲ್ಲಿ ಐದು ಲಕ್ಷದಷ್ಟಿದ್ದು, ಇದು ಬರುವ 2030 ರ ವೇಳೆಗೆ 100 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದರು. ಗ್ರೀನ್ ವೆಹಿಕಲ್ ಎಕ್ಸ್ಪೋವು ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಕೇಂದ್ರವಾಗಿದೆ. ಹಸಿರು ವಾಹನಗಳನ್ನು ತಯಾರಿಸುವ ಸಂಸ್ಥೆಗಳಿಗೆ ತಮ್ಮ ಬ್ರ್ಯಾಂಡ್ ವ್ಯಾಪ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಕರ್ನಾಟಕ ದ್ವಿಚಕ್ರ ವಾಹನ ವರ್ಕ್ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಸಂಘ ಮತ್ತು ಇತರ ಸ್ಥಳೀಯ ಸಂಸ್ಥೆಗಳು ಸಹ ಭಾಗವಹಿಸುತ್ತಿವೆ. 3 ದಿನಗಳ ಮೇಳದಲ್ಲಿ ಸುಮಾರು 15 ಸಾವಿರಕ್ಕೂ ಅಧಿ ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, 100 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿದೆ. ಇದರಲ್ಲಿ ಉದ್ಯಮದ ಪ್ರಮುಖ ಆಟಗಾರರು 700 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top