ಮುಖೇಶ್ ಅಂಬಾನಿಯ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್‌ ‍ಪಾರ್ಟಿಯಲ್ಲಿ ರಾಮೇಶ್ವರಂ ಕೆಫೆ ಫುಡ್​

ಬೆಂಗಳೂರು: ರಾಮೇಶ್ವರಂ ಕೆಫೆ ಶುರುವಾದ ಕೆಲವೇ ರ‍್ಷಗಳಲ್ಲಿ ಭಾರತದಾದ್ಯಂತ ಬ್ರಾಂಚ್ಗಳನ್ನ ತೆರೆದು ಜನರ ಮನೆ ಮಾತಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ಎರಡನೇ ಪ್ರೀ ವೆಡ್ಡಿಂಗ್‌ ಪರ‍್ಟಿ ಅದ್ಧೂರಿಯಾಗಿ ನಡೆದಿದ್ದು, ವಿಶೇಷ ಅಂದರೆ ಈ ಕರ‍್ಯಕ್ರಮಕ್ಕೆ ಬೆಂಗಳೂರಿನ ರಾಮೇಶ್ವರಂ ಕೆಫೆ ಆಹಾರ ಪೂರೈಸಿದೆ. ಈ ಕುರಿತು ಸಂತಸವನ್ನು ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.

ಮುಖೇಶ್ ಅಂಬಾನಿಯ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಕ್ರೂಸ್ ಪರ‍್ಟಿ ಮೇ ೨೯ರಿಂದ ಜೂ.೧ರವರೆಗೆ ಅದ್ಧೂರಿಯಾಗಿ ನಡೆದಿದೆ. ಸುಮಾರು ೮೦೦ ಅತಿಥಿಗಳನ್ನೊಳಗೊಂಡ ಐಷಾರಾಮಿ ಹಡಗು ಮೇ ೨೯ರಂದು ಇಟಲಿಯಿಂದ ಹೊರಟು ಜೂ.೧ ಕ್ಕೆ ಸ್ವಿಜರ್‌ಲ್ಯಾಂಡ್ ತಲುಪಿದ್ದು, ಈ ಮೂರು ದಿನಗಳ ಐಷಾರಾಮಿ ಸಂಭ್ರಮದಲ್ಲಿ ಅಂಬಾನಿಯ ಕುಟುಂಬದ ಅತಿಥಿಗಳಿಗೆ ಬೆಂಗಳೂರಿನ ರಾಮೇಶ್ವರಂ ಕೆಫೆ ರುಚಿ ರುಚಿಯಾಗಿ ಆಹಾರವನ್ನು ಉಣಬಡಿಸಿದೆ. ಸದ್ಯ ಊಟದ ಗುಣಮಟ್ಟ, ಜನಪ್ರಿಯತೆ, ರುಚಿ, ವೆರೈಟಿ ಊಟದ ಬಗ್ಗೆ ಮನೆಯ ಮಾತಾಗಿರುವ ರಾಮೇಶ್ವರಂ ಕೆಫೆ,‌ ಮುಖೇಶ್ ಅಂಬಾನಿಯ ಮಗನ ಮದುವೆಯಲ್ಲಿಯೂ ತಮ್ಮ ರುಚಿಯ ಮೂಲಕ ಕಮಾಲ್‌ ಮಾಡಲಿದೆ ಎಂದು ವರದಿಯಾಗಿದೆ.‌

 ೨೦೨೩ರ ಜನವರಿ ೧೯ರಂದು ಅನಂತ್ ಅಂಬಾನಿ ಮತ್ತು ರಾಧಿಕ ರ‍್ಚೆಂಟ್ ಜೋಡಿ ಮುಂಬೈನಲ್ಲಿ ನಿಶ್ಚಿತರ‍್ಥ ಮಾಡಿಕೊಂಡಿತ್ತು. ಈ ಜೋಡಿಯ ಅದ್ಧೂರಿ ವಿವಾಹ ಕರ‍್ಯಕ್ರಮವು ಜುಲೈ ೧೨ ರಂದು ಮುಂಬೈನ ಬಾಂದ್ರಾ ಕರ‍್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ರ‍್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಲಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top