ನನ್ನ ವಿರುದ್ಧ ಮೀಡಿಯ ಟ್ರಯಲ್ ನಡೆಸದಂತೆ ಪ್ರಜ್ವಲ್ ರೇವಣ್ಣ ವಿನಂತಿ: ಜಿ ಅರುಣ್, ಪ್ರಜ್ವಲ್ ವಕೀಲ

ಬೆಂಗಳೂರು: ಎಸ್ಐಟಿ ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣರನ್ನು ಭೇಟಿಯಾಗುವ ಅನುಮತಿ ಸಿಕ್ಕ ಬಳಿಕ ಅವರ ವಕೀಲ ಜಿ ಅರುಣ್, ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 

ಪ್ರಜ್ವಲ್ ಮಾಧ್ಯಮದವರಿಗೆ ಮೀಡಿಯ ಟ್ರಯಲ್  ನಡೆಸದಂತೆ ವಿನಂತಿ ಮಾಡಿಕೊಂಡಿದ್ದಾರೆ ಮತ್ತು ತನ್ನ ವಿರುದ್ಧ ನಕಾರಾತ್ಮಕ ಪ್ರಚಾರ ನಡೆಸದಂತೆ ಆಗ್ರಹಿಸಿದ್ದಾರೆ ಎಂದು ವಕೀಲ ಅರುಣ್ ಹೇಳಿದರು. ವಕೀಲನಾಗಿ ತನ್ನ ಕೆಲಸ ನ್ಯಾಯಾಲಯದಲ್ಲಿ ಮಾಡುವುದಾಗಿ ಹೇಳಿದ ಅರುಣ್, ಮಾಧ್ಯಮದವರೂ ತಮ್ಮ ಕೆಲಸ ಮಾಡಲಿ ಅದರೆ ಪ್ರಜ್ವಲ್ ಬಗ್ಗೆ ನೆಗೆಟಿವ್ ವಿಚಾರಗಳನ್ನು ವರದಿ ಮಾಡೋದು ಬೇಡ ಎಂದು ಅರುಣ್ ಹೇಳಿದರು. ತಾನೀಗ ಎಸ್ಐಟಿ ಟೀಮಿಗೆ ಶರಣಾಗಿ ವಿಚಾರಣೆ ಮತ್ತು ತನಿಖೆ ಎದುರಿಸಲು ಸಿದ್ಧನಿದ್ದೇನೆ ಮತ್ತು ತನಿಖೆಯಲ್ಲಿ ಸಂಪರ‍್ಣ ಸಹಕಾರ ನೀಡುತ್ತೇನೆ ಅಂತ ಅವರು ಹೇಳಿದ್ದಾರೆಂದು ವಕೀಲ ಅರುಣ್ ಹೇಳಿದರು. ಹೊಳೆನರಸೀಪುರದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಮತ್ತು ತಾನು ಅವರಿಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ತಿಳಿಸಿರುವುದಾಗಿ ಅರುಣ್ ಹೇಳಿದರು. ಪ್ರಜ್ವಲ್ ಗೆ ಜಾಮೀನು ಕೋರಿ ಸಲ್ಲಿಸಿದ ಮನವಿ ಕರ‍್ಟ್ ಮುಂದಿದೆ, ವಿಚಾರಣೆ ಇಷ್ಟರಲ್ಲೇ ಶುರುವಾಗಲಿದೆ ಎಂದು ಅವರು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top