ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವ ಹಿನ್ನೆಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ನಿರ್ಧಾರವನ್ನು ಕಾವೇರಿ ನೀರು ನರ‍್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮಂಗಳವಾರ ಅನುಮೋದಿಸಿದೆ.
ಬಾಕಿ ಇರುವ ನೀರನ್ನು ಬಿಡುಗಡೆ ಮಾಡಲು ಮತ್ತು ರಾಜ್ಯಕ್ಕೆ ಕಾವೇರಿ ನದಿ ನೀರು ಹರಿವಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ರ‍್ನಾಟಕಕ್ಕೆ ನರ‍್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಮೇ 16 ರಂದು ನಡೆದ ಸಭೆಯಲ್ಲಿ ತಿರಸ್ಕರಿಸಿತ್ತು.
ಜಲಾನಯನ ಪ್ರದೇಶದಲ್ಲಿ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿರುವ ನೀರನ್ನು ರಿಲೀಸ್ ಮಾಡುವಂತೆ ಮತ್ತು ತಮಿಳುನಾಡಿಗೆ ಕಾವೇರಿ ನೀರಿನ ಯಾವುದೇ ಕೊರತೆಯಾಗದಂತೆ ಕರ್ನಾಟಕಕ್ಕೆ ನರ‍್ದೇಶಿಸಲು ತಮಿಳುನಾಡು ರ‍್ಕಾರ ಮಾಡಿದ ಬೇಡಿಕೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸೌಮಿತ್ರಕುಮಾರ್ ಹಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆ ತಿರಸ್ಕರಿಸಿದೆ. ಇದು ಸಾಮಾನ್ಯ ಸಭೆಯಾಗಿದ್ದು, ಅಲ್ಲಿ ನಾವು 96 ನೇ ಸಿಡಬ್ಲ್ಯೂಆರ್‌ಸಿ ನರ‍್ಧಾರವನ್ನು ಅನುಮೋದಿಸಿದ್ದೇವೆ, ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೋರಿದ್ದ ತಮಿಳುನಾಡಿನ ಬೇಡಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಹಲ್ದಾರ್ ಖಾಸಗಿ ಮಾದ್ಯಮಕ್ಕೆ ತಿಳಿಸಿದರು.
ಇದು ನೀರಾವರಿ ಕಾಲವಲ್ಲ ಆದ್ದರಿಂದ ಎರಡೂ ರಾಜ್ಯಗಳು ಕುಡಿಯುವ ನೀರಿನ ಅಗತ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅವರು ಹಲ್ದಾರ್ ಹೇಳಿದರು. ಉತ್ತಮ ಮುಂಗಾರು ಮಳೆಯ ಮುನ್ಸೂಚನೆಯು ಈ ಪ್ರದೇಶದಲ್ಲಿ ನೀರಿನ ಒತ್ತಡವನ್ನು ಶೀಘ್ರದಲ್ಲೇ ಪರಿಹರಿಸುತ್ತದೆ ಎಂದು ಹೇಳಿದರು. ಕಳೆದ ವಾರದಿಂದ ಸುರಿಯುತ್ತಿರುವ ಪರ‍್ವ ಮುಂಗಾರು ಮಳೆಯು ಎರಡೂ ರಾಜ್ಯಗಳಲ್ಲಿ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.
ಪ್ರತಿ ದಿನ ಕೇವಲ 150 ಕ್ಯೂಸೆಕ್ ನೀರು ಬರುತ್ತಿದ್ದ ಅಂತರರಾಜ್ಯ ಗಡಿ ಬಿಂದು ಬಿಳಿಗುಂಡ್ಲುವಿಗೆ ಕಳೆದ ವಾರದಿಂದ ದಿನಕ್ಕೆ 1,100 ಕ್ಯೂಸೆಕ್‌ಗೂ ಹೆಚ್ಚು ನೀರು ಬರುತ್ತಿದೆ. ಎರಡೂ ರಾಜ್ಯಗಳು ತಮ್ಮ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಆಯಾ ಜಲಾಶಯಗಳಲ್ಲಿ ಸಾಕಷ್ಟು ನೀರನ್ನು ಹೊಂದಿವೆ ಎಂದು ಅWಒಂ ಸಭೆಯ ಭಾಗವಾಗಿರುವ ಅWಖಅ ಅಧ್ಯಕ್ಷ ವಿನೀತ್ ಗುಪ್ತಾ ಖಾಸಗಿ ಮಾದ್ಯಮಕ್ಕೆ ತಿಳಿಸಿದರು.
ಕಾವೇರಿ ಜಲ ವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಪ್ರಕಾರ ಕಾವೇರಿ ನೀರಿನ ಬಾಕಿ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನರ‍್ದೇಶನ ನೀಡಬೇಕೆಂಬ ತಮಿಳುನಾಡು ಬೇಡಿಕೆಯನ್ನು ಸಮಿತಿಯು ಒಪ್ಪಲು ನಿರಾಕರಿಸಿತು.
ಕರ್ನಾಟಕವು ದಿನಕ್ಕೆ ಸುಮಾರು 1,000 ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಬೇಕು, ಇದರಿಂದ ಫೆಬ್ರವರಿ ಮತ್ತು ಮೇ ನಡುವೆ ಬಿಳಿಗುಂಡ್ಲುವಿನಲ್ಲಿ ತಿಂಗಳಿಗೆ 2.5 ಟಿಎಂಸಿ ಅಡಿ ಇರುತ್ತದೆ. ಕಳೆದ ವಾರದ ಮುಂಗಾರು ಪರ‍್ವಮಳೆಯಿಂದಾಗಿ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 1,100 ಕ್ಯೂಸೆಕ್ ನೀರು ತಲುಪುತ್ತಿದ್ದು, ಕಾವೇರಿ ಜಲಾನಯನ ಹರಿವನ್ನು ಸುಧಾರಿಸಿದೆ” ಎಂದು ಗುಪ್ತಾ ಹೇಳಿದರು.
ಈ ಹಿಂದೆ CWRC ಗೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ, ತಮಿಳುನಾಡು ರ‍್ಕಾರವು ಸಂಕಷ್ಟದ ವರ್ಷದಲ್ಲಿ ನೀರನ್ನು ಹಂಚಿಕೊಳ್ಳಲು ವೈಜ್ಞಾನಿಕ ಸೂತ್ರದ ಬೇಡಿಕೆಯನ್ನು ಮುಂದಿಟ್ಟಿತ್ತು. ತಮಿಳುನಾಡು ರ‍್ಕಾರವು ತನ್ನ ಹೇಳಿಕೆಯಲ್ಲಿ, ರಾಜ್ಯವು ತನ್ನ ಬಾಕಿ ಪಾಲನ್ನು ಪಡೆಯದೆ ಸಂಕಷ್ಟ ಅನುಭವಿಸುತ್ತಿದೆ, ಹೀಗಾಗಿ ಸಂಕಷ್ಟದ ಪರಿಹರಿಸಲು ಮೊದಲಿನ ನಿರ್ಧಾರದಂತೆ ವೈಜ್ಞಾನಿಕ ಸೂತ್ರದ ಆಧಾರದ ಮೇಲೆ ವಿಳಂಬ ಮಾಡದೇ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ CWRC ಗೆ ತಮಿಳು ನಾಡು ಮನವಿ ಮಾಡಿತ್ತು. CWRC ಯ ಮುಂದಿನ ಸಭೆ ಜೂನ್ 13 ರಂದು ನಡೆಯಲಿದೆ.