ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಘಟನೆ ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಗೆ ಸಾವಿರಾರು ಬಾಳೆಗಿಡಗಳು ನೆಲಕ್ಕುರುಳಿವೆ
ರ್ಷದ ಮೊದಲ ದೊಡ್ಡ ಮಳೆ ಎಂದೇ ಗುರುತಿಸಿಕೊಂಡ ಬಂದ ಮಳೆ ವೆಂಕಟಾಪುರ ಮಾಗಣೆ, ನಿಂಬಾಪುರ, ಬುಕ್ಕಸಾಗರ ಮಾಗಣೆ ಸೇರಿದಂತೆ ವಿವಿಧೆಡೆ ಬಾಳೆ ಬೆಳೆದ ರೈತರಿಗೆ ಭಾರಿ ಹೊಡೆತ ನೀಡಿದೆ
ಹಲವು ತಿಂಗಳುಗಳಿಂದ ತರ್ತಾ, ಬಸವಣ್ಣ, ರಾಯ ಕಾಲುವೆಗಳಲ್ಲಿ ಝರಿ ನೀರಿಗಾಗಿ ಪರಿತಪಿಸುತ್ತಿದ್ದ ಬಾಳೆ ಬೆಳೆದ ರೈತರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು . ಗಾಳಿಯಿಂದಾಗಿ ಫಸಲು ಬಿಡುವ ಹಂತದ ಗಿಡಗಳು ನೆಲಕ್ಕುರುಳಿದವು, ಈ ಭಾಗದಲ್ಲಿ ಸುಗಂದಿ, ಏಲಕ್ಕಿ, ಸಕ್ಕರೆ ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ರೈತರು .ವೆಂಕಟಾಪುರ ಮಾಗಣೆಯಲ್ಲಿ ಬಾಳೆಗಿಡಗಳಿಗೆ ಹೆಚ್ಚಿನ ಹಾನಿಯಾಗಿದೆ ರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ
ಎಕರೆಗೆ 900 ಗಿಡಗಳು ನೆಡಲಾಗಿದೆ, ಅವುಗಳಲ್ಲಿ ಕೆಲವೆಡೆ 300 ರಿಂದ 400 ಗಿಡಗಳು ನೆಲಸಮವಾಗಿವೆ, ಕೆಲವೆಡೆ ಎಕೆರೆಗಟ್ಟಲೇ ಗಿಡಗಳು ನೆಲಕ್ಕುರುಳಿವೆ.