ಬಳ್ಳಾರಿ: ರಾಹುಲ್ ಭಾಷಣದಲ್ಲಿ ಹಸ್ತದ ಚಿನ್ಹೆ ಬದಲು ಚೆಂಬು ತೋರಿಸುತ್ತಿರೋ ಹಿನ್ನಲೆ ಬದಲಾವಣೆ ಮಾಡಿಕೊಂಡಿದ್ದಾರೆಯೇ..? ಎಂದ ಸುರೇಶ್ ಕುಮಾರ್
ರಾಹುಲ್ ಹೋದಲ್ಲಿ ಬಂದಲ್ಲಿ ಚೆಂಬು ಹಿಡಿದುಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷದ ಚಿನ್ಹೆ ಹಸ್ತ ಆದರೆ ಈಗ ಚೆಂಬು ಕಾಂಗ್ರೆಸ್ ಪಕ್ಷದ ಚಿನ್ಹೆ ಮಾಡಿಕೊಂಡಿದ್ದಾರೆ ಎಂದು ವ್ಯಂಗವಾಡಿದ್ದಾರೆ.
ರಾಜ್ಯದಲ್ಲಿ ಚೆಂಬುಗಳ ಗುತ್ತಿಗೆ ಪಡೆದಿರೋ ಪಕ್ಷ ಇದೀಗ ಜನರಿಗೆ ಚೆಂಬು ನೀಡೋ ಪಕ್ಷವೆಂದ್ರೇ ಅದು ಕಾಂಗ್ರೆಸ್ ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡದೇ ರಾಜ್ಯದ ಜನರಿಗೆ ಚೆಂಬು ನೀಡಿದ್ದಾರೆ. ಹತ್ತು ತಿಂಗಳಿಂದ ಒಬ್ಬರಿಗೂ ನಿರುದ್ಯೋಗಿ ಭತ್ಯೆ ನೀಡಿಲ್ಲ.. ಯುವಕರಿಗೆ ಕಾಂಗ್ರೆಸ್ ಚೆಂಬು ನೀಡಿದೆ ಎಂದರು.
ರೈತರಿಗೆ ನೀಡುವ ಹಣ ಕೂಡ ಸಂಪೂರ್ಣ ನಿಲ್ಲಿಸಿ ರೈತರಿಗೆ ಚೆಂಬು ನೀಡಿದೆ:
ಮಹಿಳೆಯರಿಗೆ ಉಚಿತ ಬಸ್ ಎಂದು ಕೆಂಪು ಬಸ್ ಸೀಮಿತ ಮಾಡಿದ್ರು ಬಸ್ ಕಡಿಮೆ ಮಾಡಿದ್ರು ಸಾರಿಗೆ ದರ ಹೆಚ್ಚು ಮಾಡಿ ಚೆಂಬು ನೀಡಿದ್ರು, ಕರೆಂಟ್ ಫ್ರೀ ಅಂದ್ರೂ ಅದಕ್ಕೆ ನೂರಾರು ಕಂಡಿಷನ್ ಹಾಕಿ ಯೂನಿಟ್ ದರ ಜಾಸ್ತಿ ಮಾಡಿ ಚೆಂಬು ನೀಡಿದೆ.. 5kg ಅಕ್ಕಿ ಫ್ರೀ ಎಂದ್ರು ಕೇಂದ್ರದ ಅಕ್ಕಿ್ಎ ತಮ್ಮ ಲೇಬಲ್ ಹಾಕಿ ಕೊಟ್ಟು ಜನರಿಗೆ ಚೆಂಬು ನೀಡಿದ್ರು, ಪರೀಕ್ಷೆ ವಿಚಾರದಲ್ಲಿ ಮಕ್ಕಳ ಜೊತೆಗೆ ಪೋಷಕರಿಗೆ ಗೊಂದಲ ನೀಡಿ ಚೆಂಬು ನೀಡಿದ್ರು. ಸಿಎಂ ಡಿಸಿಎಂಗೆ ಜನರು ಹೇಗೆ ಚೆಂಬು ಕೊಡಬೆಕೋ ಗೊತ್ತಿದೆ.
ಗರೀಬಿ ಹಾಠವೋ ಸ್ಲೋಗನ್ ನೀಡಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಬಡತನವನ್ನೆ ಜನರಿಗೆ ಕೊಡುಗೆ ನೀಡಿದ ಕಾಂಗ್ರೆಸ್ ಚೆಂಬುಗಳ ಸರದಾರ ಕಾಂಗ್ರೆಸ್ ಪಕ್ಷ ಎಂದರು.
ಬಿಸಿಲಿನಿಂದ ಬಸವಳಿದಂತೆ ಕಾಂಗ್ರೆಸ್ ಆಡಳಿತದಿಂದ ಜನರು ಬಸವಳಿದಿದ್ದಾರೆ. ಧನ್ಯವಾದಗಳ ಮೂಲಕ ಜನರೇ ಜೂನ್ 4ರಂದು ಕಾಂಗ್ರೆಸ್ ಗೆ ಚೆಂಬು ನೀಡ್ತಾರೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಜಂಟಿ ಕಾರ್ಯಚರಣೆ ಮಾಡಿದ್ದು ನಿನ್ನೆಯ 14 ಕ್ಷೇತ್ರದಲ್ಲಿ ಗೆಲ್ತೇವೆ ಎಂದು ತಿಳಿಸಿದರು.
ಹಾಸನನದಲ್ಲಿ ಅಪಪ್ರಚಾರ ಮಾಡಲಾಗ್ತಿದೆ ಚಾರಿತ್ರ್ಯೆ ಹರಣ ಮಾಡೋದು ಹೆಚ್ಚಾಗಿದೆ, ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕು. ಯಾವುದೊ ಒಂದು ಚಾನೆಲ್ ಪ್ರಸಾರ ಮಾಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಿದೆ ಪರೋಕ್ಷವಾಗಿ ಜನರ ಜೊತೆ ಆಯೋಗ ಕೂಡ ಕಾರಣ ಎಂದ ಸುರೇಶ್ ಕುಮಾರ್ ತಿಳಿಸಿದರು.