ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಚಂದ್ರಪ್ಪ ಅವರ ಜಾತಿ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಎಲ್ಲರೂ ತಿಳಿದುಕೊಂಡಂತೆ ಅವರು ಮಾದಿಗ ಜಾತಿಗೆ ಸೇರಿದವರಲ್ಲ. ಹೀಗಾಗಿ ಅವರ ಜಾತಿ ವಿಚಾರದ ಬಗ್ಗೆ ಇದೀಗ ಕ್ಷೇತ್ರದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಂದ್ರಪ್ಪ ಅವರ ಜಾತಿ ವಿಚಾರ ಕಾಂಗ್ರೆಸ್ ಗೆ ಒಳ ಏಟಿನ ಭೀತಿ ಸೃಷ್ಟಿಸಿದೆ.
ಈ ಕುರಿತು ಮಾತನಾಡಿದ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ. ನರಸಪ್ಪ, ಚಂದ್ರಪ್ಪ ಅವರು “ಹಿಂದೂ ಮಾಸಾಳ” ಜಾತಿಗೆ ಸೇರಿದವರಾಗಿದ್ದಾರೆ. ಮಾಸಾಳ ಜಾತಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆಯಾದರೂ ಮಾಸಾಳ ಜಾತಿಗೆ ಸೇರಿದವರು ರಾಜ್ಯದಲ್ಲಿ ಗರಿಷ್ಠ ಎರಡರಿಂದ ಮೂರು ಸಾವಿರದಷ್ಟಿರಬಹುದು. ಪರಿಶಿಷ್ಟರಲ್ಲಿ ಎಡಗೈ ಜಾತಿಯಲ್ಲಿ ಮಾದಿಗ ಜನಾಂಗ ಅತ್ಯಂತ ಪ್ರಬಲ ಜಾತಿಯಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲೇ 2.5 ಲಕ್ಷದಿಂದ 3 ಲಕ್ಷದಷ್ಟು ಜನ ಸಂಖ್ಯೆ ಹೊಂದಿದೆ. ಚಂದ್ರಪ್ಪ ಅವರು ಮಾದಿಗ ಸಮುದಾಯದ ಜೊತೆ ಹೃದಯ ಸ್ಪರ್ಶಿ ಮತ್ತು ಅಂತಃಕರಣದ ಸಂಬಂಧ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಅವರು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಚಿತ್ರದುರ್ಗದಲ್ಲಿ ಮಾದಿಗ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಹೀಗಾಗಿ ಚಿತ್ರದುರ್ಗದ ಮಾದಿಗ ಜನಾಂಗದ ಮುಖಂಡರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಜಾತಿಗೆ ಸೇರಿದ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಏಪ್ರಿಲ್ 26 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಬೇಕೆಂದು ಬಿ.ನರಸಪ್ಪ ಮನವಿ ಮಾಡಿದ್ದಾರೆ.