ಹುಬ್ಬಳ್ಳಿ: ನೇಹಾ ಕೊಲೆ ಆರೋಪಿ ಬಂಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತರಿಂದ ಸನ್ಮಾನ

ಹುಬ್ಬಳ್ಳಿ: ಇತ್ತೀಚೆಗೆ ನಡೆದ ೨೩  ವರ್ಷದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಪೊಲೀಸ್ ತಂಡದ ಕರ‍್ಯವನ್ನು ಧಾರವಾಡ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಶ್ಲಾಘಿಸಿದ್ದಾರೆ. ಕೊಲೆ ನಡೆದ ಒಂದು ಗಂಟೆಯೊಳಗೆ ಆರೋಪಿ ಫಯಾಜ್ ನನ್ನು ಬಂಧಿಸಿದ ತಂಡದ ಎಲ್ಲಾ ಪೊಲೀಸರಿಗೂ ಶ್ಲಾಘನಾ ಪತ್ರಗಳ ಜೊತೆಗೆ ೨೫,೦೦೦ ರೂ. ನಗದು ಬಹುಮಾನ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ ೧೮ ರಂದು ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ್ ಅವರನ್ನು ರ‍್ಬರವಾಗಿ ಕೊಂದ ನಂತರ ಪರಾರಿಯಾಗಿದ್ದ ಫಯಾಜ್‌ನನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ತ್ವರಿತವಾಗಿ ಪರಸ್ಪರ ಸಮನ್ವಯತೆಯಿಂದ ಅಪರಾಧ ನಡೆದ ಒಂದು ಗಂಟೆಯೊಳಗೆ ಬಂಧಿಸಲಾಗಿತ್ತು. ಆರೋಪಿ ಪತ್ತೆಗೆ ಹಿರಿಯ ಅಧಿಕಾರಿಗಳಾದ ಎಸಿಪಿ ಶಿವಪ್ರಕಾಶ ನಾಯ್ಕ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಡಿ ಕೆ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

 

ಆರೋಪಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ತಂಡದ ಕರ‍್ಯವೈಖರಿಯನ್ನು ಶ್ಲಾಘಿಸಿದ ಆಯುಕ್ತ ಸುಕುಮಾರ್, ತಂಡವನ್ನು ‘ಮಾಸಿಕ ಪೊಲೀಸ್ ಎಂದು ಘೋಷಿಸಿ ಶ್ಲಾಘನೆ ವ್ಯಕ್ತಪಡಿಸಿ, ತಂಡದ ಪ್ರತಿಯೊಬ್ಬ ಸದಸ್ಯರಿಗೂ ೨೫ ಸಾವಿರ ನಗದು ಬಹುಮಾನದ ಜತೆಗೆ ಪ್ರಶಂಸನಾ ಪತ್ರ ವಿತರಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top