ಬೆಂಗಳೂರು : ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯ 55 ನೇ ಅಧ್ಯಕ್ಷರಾಗಿ ಸಿಎ. ಪ್ರಮೋದ್.ಆರ್. ಹೆಗಡೆ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷೆ ಸಿಎ. ದಿವ್ಯ ರಾಘವೇಂದ್ರ ಅವರು ಸಿಎ. ಪ್ರಮೋದ್. ಆರ್. ಹೆಗಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾಗಿ ಸಿಎ. ಮಂಜುನಾಥ್ ಎಂ ಹಲ್ಲೂರ್, ಕಾರ್ಯದರ್ಶಿಯಾಗಿ ಸಿಎ. ಕವಿತಾ ಪರಮೇಶ್, ಖಜಾಂಚಿಯಾಗಿ ಸಿಎ. ತುಪ್ಪದ ವೀರುಪಾಕ್ಷಪ್ಪ ಮುಪ್ಪಣ್ಣ, ಸದರನ್ ಇಂಡಿಯ ಚಾರ್ಟರ್ಡ್ ಅಕೌಂಟೆಂಟ್ ಸ್ಟುಡೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸಿಎ.ಶ್ರೀಪಾದ್ ಹುಲಗೋಲ ನಾರಾಯಣ್, ಆಡಳಿತ ಸಮಿತಿ ಸದಸ್ಯರಾಗಿ ಚಂದ್ರಪ್ರಕಾಶ್ ಜೈನ್, ಸಿಎ. ರೆಜೊ ಜೆ ಜಾನ್ಸನ್ ಅಧಿಕಾರ ಸ್ವೀಕರಿಸಿದರು.
ಮಾಜಿ ಅದ್ಯಕ್ಷ ಸಿಎ. ಶ್ರೀನಿವಾಸ್. ಟಿ, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಕೇಂದ್ರ ಮಂಡಳಿ ಸದಸ್ಯ ಸಿಎ. ಕೋಥಾ ಎಸ್ ಶ್ರೀನಿವಾಸ್, ಸಿಎ. ಗೀತಾ ಎ.ಬಿ, ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಅಧ್ಯಕ್ಷ ಸಿಎ. ಪನ್ನರಾಜ್ ಹಾಜರಿದ್ದರು.
ಸಿಎ. ಪ್ರಮೋದ್ ಆರ್ ಹೆಗಡೆ ಅವರು ಹೊಸ ಜವಾಬ್ದಾರಿ ಹೊರುವ ಮೂಲಕ ಲೆಕ್ಕ ಪರಿಶೋಧಕರ ಕ್ಷೇತ್ರಕ್ಕೆ ಹೊಸ ಆಯಾಮ ತರುವ ಯೋಜನೆ ಹಮ್ಮಿಕೊಂಡಿರುವುದಾಗಿ ಹೇಳಿದರು
ಲೆಕ್ಕ ಪರಿಶೋಧಕರಿಗೆ ಜಾಗತಿಕ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ಆ ಹಿನ್ನಲೆಯಲ್ಲಿ ಸಣ್ಣ ಮತ್ತು ಮಧ್ಯಮ ಲೆಕ್ಕ ಪರಿಶೋಧಕರುಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ಸಿಗುವಂತೆ ಮಾಡಲು ನಮ್ಮ ಸಂಸ್ಥೆಯಿಂದ ಸೂಕ್ತ ಸಹಕಾರ ಹಾಗೂ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು ಎಂದು ಸಿಎ. ಪ್ರಮೋದ್.ಆರ್.ಹೆಗಡೆ ಹೇಳಿದರು
Can you be more specific about the content of your article? After reading it, I still have some doubts. Hope you can help me.