ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.16 ರಿಂದ 18 ರ ವರೆಗೆ  ಕರಾಟೆ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರ್ಣ : ದೇಶ ವಿದೇಶಗಳ ಗಣ್ಯರು ಭಾಗಿ

ಬೆಂಗಳೂರು : ಭಾರತೀಯ  ರೈಯುಯೆ ರೈಯು ಕರಾಟೆ ಡು ಕೊಬೊಡೋ ಸಂಘಟನೆಯಿಂದ ಕರಾಟೆಗೆ ಹೊಸ ಸ್ಪರ್ಷ ನೀಡುವ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕಾರಣವಾಗಿರುವ ಕ್ರೀಡೆಗೆ ಹೊಸ ಆಯಾಮ ನೀಡುವ ಸಲುವಾಗಿ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಫೆ. 16 ರಿಂದ 18 ರ ವರೆಗೆ ಅಂತರರಾಷ್ಟ್ರೀಯ ಕರಾಟೆ ಕುರಿತಾದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ  ರೈಯುಯೆ ರೈಯು ಕರಾಟೆ ಡು ಕೊಬೊಡೋ ಸಂಘಟನೆ ಅಧ್ಯಕ್ಷ ಹಾಗೂ ತಾಂತ್ರಿಕ ನಿರ್ದೇಶಕ ಎಸ್. ಚಂದ್ರಶೇಖರ್, 18 ದೇಶಗಳ ಕರಾಟೆ ಪಟುಗಳು, ತರಬೇತುದಾರರು, ಕ್ರೀಡಾ ಉತ್ತೇಜಕರು, ಕರಾಟೆ ಸಂಘಟನೆಗಳ ಪ್ರತಿನಿಧಿಗಳು ಒಳಗೊಂಡಂತೆ ದೇಶ, ವಿದೇಶಗಳ 50 ರಿಂದ 60 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಜಪಾನ್‌ ನಲ್ಲಿ 1800 ರ ಮಧ್ಯ ಭಾಗದಲ್ಲಿ ನ್ರಿಸಟೋ ನಕೈಮಾ ಅವರು ರೈಯುಯೆ ರೈಯು ಡು ಕೊಬೊಡೋ ಕರಾಟೆಯನ್ನು ಅಸ್ಥಿತ್ವಕ್ಕೆ ತಂದಿದ್ದು, ಶತಮಾನಗಳಿಂದ ಈ ಕರಾಟೆ ಶಾಲೆ ತನ್ನದೇ ಆದ ಮಹತ್ವ ಕಾಯ್ದುಕೊಂಡು ಬರುತ್ತಿದೆ. ಹಲವಾರು ಮಂದಿ ವಿಶ್ವ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದು, ಕರಾಟೆಗೆ ಹೊಸ ಆಯಾಮ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದರು.

ಜಗತ್ತಿನಾದ್ಯಂತ ಇರುವ ಮಾರ್ಷಲ್‌ ಆರ್ಟ್ಸ್‌ ಕ್ರೀಡಾಪಟುಗಳನ್ನು ಒಂದೆಡೆ ಕರೆ ತರುವ, ಪರಸ್ಪರ ಜ್ಞಾನಹಂಚಿಕೆ, ಅಂತರರಾಷ್ಟ್ರೀಯ ಸಹಕಾರ ವೃದ್ಧಿಸುವ ದ್ಯೇಯ ಹೊಂದಲಾಗಿದೆ.  ದೇಶದಲ್ಲಿ 28 ರಿಂದ 30 ಲಕ್ಷ ಮಂದಿ ಕರಾಟೆ ಕ್ರೀಡಾಪಟುಗಳಿದ್ದು, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ವಿಚಾರಗೋಷ್ಠಿಯನ್ನು ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದಾರೆ. ನೆಹರು ಯುವ ಕೇಂದ್ರದ ದಕ್ಷಿಣ ಭಾರತ ನಿರ್ದೇಶಕರಾದ ಎಂ.ಎನ್.‌ ನಟರಾಜನ್‌, ದಕ್ಷಿಣ ಏಷ್ಯಾ ಕರಾಟೆ ಡು ಫೆಡರೇಷನ್‌ ನ ಅಧ್ಯಕ್ಷ ಶಿಹಾನ್‌ ಭರತ್‌ ಶರ್ಮಾ ಮತ್ತಿತರರು ಉಪಸ್ಥಿತರಲಿದ್ದಾರೆ.

 

ಸುದ್ದಿಗೋಷ್ಠಿಯಲ್ಲಿ ಕಾಟಾ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಏಳು ಬಾರಿ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಸುಗೋ ಸಕುಮೊಟೊ, ನಾಲ್ಕು ಬಾರಿ ಪ್ರಶಸ್ತಿ ವಿಜೇತ ರೈಯು ಕಿಯುನ, ಮಹಿಳೆಯರ ವಿಭಾಗದಲ್ಲಿ ಮೂರು ಪ್ರಶಸ್ತಿ ಗೆದ್ದಿರುವ ಯುಕು ಶಿಮಿಝು ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top