ಕಿಚ್ಚಾ ಸುದೀಪ್ ತಂಡಕ್ಕೆ ಅಮೋಘ ಗೆಲುವು

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡಕ್ಕೆ ಗೆಲುವು ತಂದು ಕೊಟ್ಟ ಕೈಲ್ಕುಮಾರನ್ ಮತ್ತುನೀಲ್ಜಾನಿ

Kannada Nadu
ಕಿಚ್ಚಾ ಸುದೀಪ್ ತಂಡಕ್ಕೆ ಅಮೋಘ ಗೆಲುವು

ಬೆಂಗಳೂರು: ಕೊಯಮತ್ತೂರಿನ ಐಕಾನಿಕ್ ಕರಿ ಮೋಟಾರ್ ಸ್ಪೀಡ್‌ವೇನಲ್ಲಿಂದು ನಡೆದ ಜೆಕೆ ಟೈರ್‌ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ನ 3 ನೇ ಸುತ್ತಿನಲ್ಲಿ ಕೈಲ್ಕುಮಾರನ್ (ಇಂಡಿಯನ್ ರೇಸಿಂಗ್ಲೀಗ್), ಇಟ್ಸುಕೀಸಾಟೋ (ಎಫ್‌ಐ ಎ ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್) ಮತ್ತು ಮೆಹುಲ್ ಅಗರವಾಲ್ (28ನೇ ಜೆಕೆ ಟೈರ್ ಎಫ್‌ಎಂಎಸ್‌ಸಿಐ ನ್ಯಾಷನನ್ ರೇರಿಂಗ್ ಚಾಂಪಿಯನ್‌ ಶಿಪ್ ಫಾರ್ಮುಲಾಎಲ್‌ ಜಿಬಿ 4 ) ನಲ್ಲಿ ಅತ್ಯತ್ತಮ ಪ್ರದರ್ಶನನೀಡಿದರು.

ಇಂಡಿಯನ್ರೇಸಿಂಗ್ಲೀಗ್

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಕುಮಾರನ್ ರೇಸಿಂಗ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಯಶೀಲರಾಗಿ, ಭಾರತದ ಸ್ಪರ್ಧಾತ್ಮಕ ಮೋಟಾರ್‌ಸ್ಪೋರ್ಟ್ ವೇದಿಕೆಯಾಗಿ ಬೆಳೆಯುತ್ತಿರುವ ಇಂಡಿಯನ್ ರೇಸಿಂಗ್ ನಲ್ಲಿ ಎಲ್ಲರ ಗಮನ ಸೆಳೆದರು. ಕಿಚ್ಚಾ ಸುದೀಪ್ ಬೆಂಬಲಿಗರ ಅಮಿತೋತ್ಸಾಹದ ನಡುವೆ ತಂಡ ಅಮೋಘ ಪ್ರದರ್ಶನ ನೀಡಿ ಹೊಸ ಇತಿಹಾಸ ಬರೆಯಿತು.

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ‘ಎ’ಚಾಲಕ ಕುಮಾರನ್, ಪೋಲ್ಪೊಸಿಷನ್‌ನಿಂದ ಪ್ರಾರಂಭಿಸಿ 25 ನಿಮಿಷ + 1 ಲ್ಯಾಪ್‌ನ ಪ್ರಮುಖ ರೇಸ್‌ನಲ್ಲಿ ಆಧಿಪತ್ಯ ಸಾಧಿಸಿದರು. 2.4 ಕಿಮೀ ಸರ್ಕ್ಯೂಟ್‌ನಲ್ಲಿ ವೇಗ ಮತ್ತು ನಿಯಂತ್ರಣದ ಮೂಲಕ ಮೊದಲ ಲ್ಯಾಪ್‌ನಿಂದಲೇ ಮುನ್ನಡೆ ಪಡೆದು ಕೊನೆಹಂತದವರೆಗೂ ಮುಂದುವರೆದರು.

ಈಬಗ್ಗೆ ಮಾತನಾಡಿದ ಕುಮಾರನ್ “ಕಾರು ಪೋಡಿಯಂನಲ್ಲಿ ನಿಂತಾಗ ಬಹಳ ಖುಷಿಯಾಯಿತು. ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ನಿಜಕ್ಕೂ ಇದು ಅಮೂಲ್ಯ ಕ್ಷಣ’ ಎಂದರು.

ಏಳನೇಸ್ಥಾನದಲ್ಲಿದ್ದ ನೀಲ ಜಾನಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುದರಿಂದ ಕಿಚ್ಚಾಕಿಂಗ್ಸ್ ತಂಡಕ್ಕೆ ಗೆಲುವು ದೊರೆಯಿತು. ಹೈದರಾಬಾದ್ ತಂಡದ ರೇಸರ್ ಗಳು ದ್ವಿತೀಯ ಸ್ಥಾನಪಡೆದರು.

ಪ್ರೊವಿಷನಲ್ಫಲಿತಾಂಶಗಳು (ಐಆರ್ ಎಲ್ ಡ್ರೈವರ್ ಎ ರೇಸ್):

1. ಕೈಲ್ ಕುಮಾರನ್ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ) – 26:34.556

2. ಅಖಿಲ್ ಬೀಂದ್ರ (ಹೈದರಾಬಾದ್ ಬ್ಲ್ಯಾಕರ್ಡ್ಸ್) – 26:36.855

3. ನೀಲ್ಜಾನಿ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ) – 26:36.934

ಫಾರ್ಮುಲಾ 4 ಇಂಡಿಯನ್ಚಾಂಪಿಯನ್‌ಶಿಪ್:

ತನ್ನ ಮೊದಲ ರೇಸ್ ನಲ್ಲಿ ಎಲ್ಲರನ್ನು ಅಚ್ಚರಿಸಿಗೊಳಿಸಿದ ಸಾಟೋ ಶಾಕ್ ಜಪಾನ್‌ನ ಇಟ್ಸು ಕೀಸಾಟೋ, ಅಹಮದಾಬಾದ್ ಏಪೆಕ್ಸ್ರೇಸರ್ಸ್ ತಮ್ಮ ಭಾರತೀಯ ಡೆಬ್ಯೂ ರೇಸ್‌ನಲ್ಲೇ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿ ಪೋಲ್‌ನಿಂದಲೇ ಮುನ್ನಡೆಕಾಯ್ದುಕೊಂಡು ಮೊದಲ ರೇಸ್ ನಲ್ಲಿ ಗೆದ್ದರು. 15 ವರ್ಷದ ಶೇನ್ಚಂದಾರಿಯಾ (ಚೆನ್ನೈಟರ್ಬೋರೈಡರ್ಸ್) ಅವರಿಗೆ 5 ಸ್ಥಾನಗಳ ಗ್ರಿ‍ಡ ಪೆನಾಲ್ಟಿ ವಿಧಿಸಲಾಯಿತು, ಹೀಗಾಗಿ ಸಾಟೋಗೆ ಪೋಲ್‌ನಿಂದ ಆರಂಭಿಸಲು ಅವಕಾಶದೊರೆಯಿತು. ಜಪಾನ್, ಮೊಜಾಂಬಿಕ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಸ್ಪರ್ಧಿಗಳ ವಿರುದ್ಧ ಸಾಟೋ ಸ್ಪರ್ಧಿಸಿ 27:10.989 ಸಮಯದಲ್ಲಿ ಅಂತಿಮ ಗೆರೆ ದಾಟಿದರು.

ಪ್ರೊವಿಷನಲ್ ಫಲಿತಾಂಶಗಳು (ಎಫ್ 4 ಇಂಡಿಯನ್ ಚಾಂಪಿಯನ್ ಶಿಪ್ ರೇಸ್ 1 ):

1.ಇಟ್ಸುಕೀಸಾಟೋ (ಅಹಮದಾಬಾದ್ ಏಪೆಕ್ಸ್ರೇಸರ್ಸ್) – 27:10.989

2.ಘಾಜಿಮೊಟ್ಲೇಕರ್ (ಕೊಲ್ಕತಾ ರಾಯಲ್ ಟೈಗರ್ಸ್) – 27:31.350

3.ಸೈಶಿವಶಂಕರನ್ (ಸ್ಪೀಡ್ಡೀಮನ್ಸ್ದೆಹಲಿ) – 27:31.469

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";