ಬಳ್ಳಾರಿ : ಕರ್ನಾಟದ ಗಡಿಭಾಗದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟಿನಲ್ಲಿ ಮಾಳ ಮಲ್ಲೇಶ್ವರ ಸ್ವಾಮಿ ಬನ್ನಿ ಉತ್ಸವ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಮಧ್ಯ ಹಿಂಸಾಚಾರ ಭುಗಿಲೆದ್ದಿತು. ಎರಡು ಗುಂಪುಗಳು ಕೋಲುಗಳಿಂದ ಘರ್ಷಣೆ ನಡೆಸಿ ಇಬ್ಬರು ಭಕ್ತರು ಸಾವನ್ನಪ್ಪಿದರು. ಗುರುವಾರ ಮಧ್ಯರಾತ್ರಿ ಮಲ್ಲೇಶ್ವರ ಸ್ವಾಮಿ ಮತ್ತು ಮಾಳಮ್ಮ ದೇವಿಯವರ ಕಲ್ಯಾಣೋತ್ಸವ ನಂತರ ರಾಜಬೀದಿಯಲ್ಲಿ ಜೈತ್ರಯಾತ್ರೆ ಮೆರವಣಿಗೆ ನಡೆಸಲಾಯಿತು. ದೇವತೆಗಳ ವಿಗ್ರಹಗಳನ್ನು ತೆಗೆದುಕೊಂಡು ಹೋಗಲು ಎರಡು ಗುಂಪುಗಳು ಪೈಪೋಟಿ ನಡೆಸಿದವು ಈ ಪ್ರಕ್ರಿಯೆಯಲ್ಲಿ ಕೋಲುಗಳಿಂದ ದಾಳಿ ನಡೆಸಲಾಯಿತು. ಇದರ ಪರಿಣಾಮವಾಗಿ ಇಬ್ಬರು ಭಕ್ತರು ಸಾವನ್ನಪ್ಪಿದರು. ೧೦೦ ಜನರು ಗಾಯಗೊಂಡರು. ಅವರಲ್ಲಿ ಐದು ಜನ ಗಂಭೀರ ಗಾಯಗೊಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದೋವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾದರೆ ಎಂದು ಕರ್ನೂಲ್ ಜಿಲ್ಲೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇವರಗಟ್ಟ ದಸರಾ ಉತ್ಸವದಲ್ಲಿ ಇಬ್ಬರು ಸಾವು, ೧೦೦ಕ್ಕೂ ಹೆಚ್ಚು ಜನರಿಗೆ ಗಾಯ
