ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ‘ಸೇವಾ ಪರ್ವ’

Kannada Nadu
ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ‘ಸೇವಾ ಪರ್ವ’

ನವದೆಹಲಿ : ಇಂದು ( ಸೆ.17 ರಂದು) ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಅವರು 75ನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಗೌರವ ಸೂಚಿಸಲು ಬಿಜೆಪಿಯು 15 ದಿನಗಳ ‘ಸೇವಾ ಪರ್ವ 2025’ ಎನ್ನುವ ವಿಶಿಷ್ಟ ಅಭಿಯಾನವನ್ನು ಆರಂಬಿಸಿದೆ. ಈ ಕಾರ್ಯಕ್ರಮವು ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಪ್ರಧಾನಿ ಮೋದಿಯವರ ಸೇವಾ ಮನೋಭಾವ ಹಾಗೂ ಅವರಿಗಿರುವ ಬದ್ಧತೆಯನ್ನು ಗೌರವಿಸಲಾಗುತ್ತದೆ.

ಸೇವಾ ಪರ್ವ್ 2025 ಎಂಬುದು ಪ್ರಧಾನಿ ಮೋದಿಯವರ ಜನ್ಮದಿನದಂದು ನಾಗರಿಕರು ಸೇವಾ ಕಾರ್ಯಗಳಲ್ಲಿ ಕೈಜೋಡಿಸುವಂತೆ ಆಹ್ವಾನಿಸುವ ಒಂದು ಉಪಕ್ರಮವಾಗಿದೆ. ಇದು ಪ್ರಧಾನಿಯ ಮಾರ್ಗದರ್ಶಿ ಮಂತ್ರವಾದ ಸೇವೆಯೇ ಸಂಕಲ್ಪ, ರಾಷ್ಟ್ರವೇ ಮೊದಲು ಇದರಿಂದ ಪ್ರೇರಿತವಾಗಿ ನಮೋ ಅಪ್ಲಿಕೇಶನ್‌ನಲ್ಲಿ ಸಂವಾದಾತ್ಮಕ ಅನುಭವಗಳನ್ನು ಜೀವಂತಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಈ ಉಪಕ್ರಮದಲ್ಲಿ ಭಾಗವಹಿಸುವವರು ಸೇವಾ ಮನೋಭಾವ ಅರಿಯುವುದು, ಪ್ರಧಾನಿಯವರ ಸ್ಪೂರ್ತಿದಾಯಕ ಪ್ರಯಾಣವನ್ನು ತಿಳಿದುಕೊಳ್ಳಬಹುದು, ಹಾಗೆಯೇ ಪ್ರಧಾನಿ ಮೋದಿಗೆ ಶುಭಾಶಯ ಕೂಡ ತಿಳಿಸಬಹುದಾಗಿದೆ.

ನಮೋ ಆ್ಯಪ್‌ನಲ್ಲಿ ಯಾವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ?

ಸಬ್ಕಾ ಸಾಥ್, ಸಬ್ಕಿ ಸೇವಾ: ಇದರ ಅಡಿಯಲ್ಲಿ, ನಾಗರಿಕರು ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮದಡಿಯಲ್ಲಿ ಮರ ನೆಡುವುದು, ರಕ್ತದಾನ ಮಾಡುವುದು ಅಥವಾ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸುವಂತಹ 15 ಪೂರ್ವನಿರ್ಧರಿತ ಚಟುವಟಿಕೆಗಳಿಂದ ರಾಷ್ಟ್ರವ್ಯಾಪಿ ಸೇವಾ ಆಂದೋಲನಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲ್ಪಡುತ್ತಾರೆ.

ಪ್ರತಿಯೊಂದು ಸೇವಾ ಕಾರ್ಯವನ್ನು ನಮೋ ಆಪ್‌ನಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಬಹುದು. ಅತ್ಯಂತ ಸಕ್ರಿಯ ಬಳಕೆದಾರರನ್ನು ಸೇವಾ ಲೀಡರ್‌ಬೋರ್ಡ್ನಲ್ಲಿ ಗುರುತಿಸಲಾಗುತ್ತದೆ ಮತ್ತು ವೈಯಕ್ತಿಕಗೊಳಿಸಿದ ಮಾನ್ಯತೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ವರ್ಚ್ಯುವಲ್ ಎಕ್ಸಿಬಿಷನ್: ನರೇಂದ್ರ ಮೋದಿ ಜೀವನದ ಕುರಿತು ಅರ್ಥ ಮಾಡಿಕೊಳ್ಳಬಹುದು, ಅದರಲ್ಲಿ ಮೋದಿ ಮೈಲ್‌ಸ್ಟೋನ್ ಫೋಟೊಬೂತ್, ಜರ್ನಿ ಆಫ್ ನರೇಂದ್ರ ಮೋದಿ ಎನ್ನುವ ಲಿಂಕ್ ನಿಮಗೆ ಸಿಗಲಿದ್ದು ಅದರಲ್ಲಿ ಪ್ರಧಾನಿ ಮೋದಿ ಬಾಲ್ಯದಿಂದ ಹಿಡಿದು ಇಲ್ಲಿಯವರೆಗೂ ಮೋದಿಯ ಬಗ್ಗೆ ಸಂಪೂರ್ಣ ತಿಳಿಯಲು ಸಹಕಾರಿಯಾಗುತ್ತದೆ.

ಎಐ ಶುಭ್‌ಕಾಮನಾ ರೀಲ್: ಅದರಲ್ಲಿ ಎಐ ಮೂಲಕ ಜನರು ತಮಗಿಷ್ಟವಾದ ರೀತಿಯಲ್ಲಿ ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂದೇಶ ಕಳುಹಿಸಬಹುದು. ಡಿಸ್ಕವರ್ ಯುವರ್ ಮೋದಿ ಟ್ರೈಟ್: ಪ್ರಧಾನಿ ಮೋದಿಯವರ ವ್ಯಕ್ತಿತ್ವದ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸಬಹುದು. ನೋ ಯುವರ್ ನಮೋ ಕ್ವಿಜ್: ಇದರಲ್ಲಿ ಪ್ರಧಾನಿ ಮೋದಿಗೆ ಸಂಬAಧಿಸಿದ 10 ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರಿಸಬೇಕಾಗುತ್ತದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";