ಮಂಗಳೂರು : ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ ,ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ನಡೆದ ‘ಛಾಯಾ ಲೋಕ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .
ಈ ನಿಟ್ಟಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರ ಸಾಧನೆ ಅನನ್ಯವಾದುದು ಎಂದು ಡಾ.ತುಕರಾಮ ಪೂಜಾರಿ ಅಭಿಪ್ರಾಯಪಟ್ಟರು. ವಿಶ್ವನಾಥರ ಕೋಟೆಗಳ ದಾಖಲೀಕರಣ ಕೃತಿ ಅಪೂರ್ಣ ದಾಖಲೆಯಾಗಿದೆ ಎಂದವರು ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಅವರು ಮಾತನಾಡಿ , ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರ್ನಾಟಕದ ಕೋಟೆಗಳು ಹಾಗೂ ಪಕ್ಷಿಗಳ ಸಮಗ್ರ ಛಾಯಾ ಚಿತ್ರ ಕೃತಿ ಒಬ್ಬ ಶೃಜನಶೀಲ ಹಾಗೂ ಸೂಕ್ಷ್ಮ ಪ್ರಜ್ಞೆಯ ಪ್ರತೀಕವಾಗಿದೆ , ಇದೊಂದು ಅತ್ಯುತ್ತಮ ದಾಖಲೀಕರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯುವ ವಕೀಲ ನವನೀತ್ ಬಿ.ಹಿಂಗ್ಹಾಣಿ ಪೊಟೋಗ್ರಾಪಿ ಮತ್ತು ಕಾಪಿರೈಟ್ ಕಾಯಿದೆ ಬಗ್ಗೆ ಮಾತನಾಡಿದರು . ಉಪನ್ಯಾಸಕಿ ಹಾಗೂ ಪಕ್ಷಿ ವೀಕ್ಷಕಿ ವೈಭವಿ ಜಿ. ಅವರು ಕರ್ನಾಟಕದ ಪಕ್ಷಿಗಳ ಕೃತಿ ಬಗ್ಗೆ ಮಾತನಾಡಿದರು .
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ರೋಶನಿ ನಿಲಯದ ಕುಲಸಚಿವೆ ಪ್ರೋ.ವಿನುತಾ ರೈ ಅವರು ಶುಭಕೋರಿ ಮಾತನಾಡಿದರು. ವಿವಿಧ ಕಾಲೇಜಿನ ಇತಿಹಾಸ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರೊಂದಿಗೆ ಸಂವಾದ ನಡೆಸಿದರು .
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು . ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಹಾಗೂ ಕೋಶಾಧಿಕಾರಿ ಗಿರಿಧರ್ ಶೆಟ್ಟಿ ಸ್ವಾಗತಿಸಿದರು , ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಾಣಾಸಿ ವಂದಿಸಿದರು.