ಬಾಲಿವುಡ್ ನಟ ಸೋನು ಸೂದ್ ಹಾವೊಂದನ್ನು ಹಿಡಿದುಕೊಂಡು ಬರುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಯಾವುದೇ ಸಿನಿಮಾ ಸಾಹಸ ದೃಶ್ಯವಲ್ಲ. ಅವರು ತಮ್ಮ ಸೊಸೈಟಿ ಆವರಣಕ್ಕೆ ಬಂದಿದ್ದ ಹಾವನ್ನು ಹಿಡಿದು ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ.
ಹಾವು ಹಿಡಿದ ಸೋನು ಸೂದ್… ಇದು ಸಿನಿಮಾ ದೃಶ್ಯವಲ್ಲ!
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಹಾವೊಂದನ್ನು ಹಿಡಿದುಕೊಂಡು ಬರುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಯಾವುದೇ ಸಿನಿಮಾ ಸಾಹಸ ದೃಶ್ಯವಲ್ಲ. ಅವರು ತಮ್ಮ ಸೊಸೈಟಿ ಆವರಣಕ್ಕೆ ಬಂದಿದ್ದ ಹಾವನ್ನು ಹಿಡಿದು ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ಅವರು ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದು, ನನಗೆ ಹಾವು ಹಿಡಿಯುವುದು ಗೊತ್ತಿದೆ. ಹೀಗಾಗಿ ನಾನು ಹಾವನ್ನು ಹಿಡಿದಿದ್ದೇನೆ. ನೀವು ಪ್ರಯತ್ನಿಸಲು ಹೋಗಬೇಡಿ ಎಂದು ಹೇಳಿದ್ದಾರೆ.
ಮುಂಬೈಯಲ್ಲಿರುವ ತಮ್ಮ ಸೊಸೈಟಿ ಆವರಣಕ್ಕೆ ಬಂದಿದ್ದ ಹಾವನ್ನು ಶನಿವಾರ ನಟ ಸೋನುಸೂದ್ ಬರಿ ಕೈಗಳಿಂದ ಹಿಡಿದು ರಕ್ಷಿಸಿದ್ದು, ಇದನ್ನು ತಿಳಿಯದವರು ಯಾರೂ ಪ್ರಯತ್ನಿಸಲು ಹೋಗಬೇಡಿ ಎಂದು ಹೇಳಿದ್ದಾರೆ. ವಿಷಕಾರಿಯಲ್ಲದ ಇಲಿ ಹಾವನ್ನು (ಕೇರೆ ಹಾವು) ಸೋನು ಸೂದ್ ಶನಿವಾರ ರಕ್ಷಿಸಿದ್ದು, ಅದನ್ನು ತಮ್ಮ ಬರಿ ಕೈಗಳಿಂದಲೇ ಹಿಡಿದರು. ಇದರ ವಿಡಿಯೊವನ್ನು ಹಂಚಿಕೊಂಡ ಅವರು ಇದರ ವಿಡಿಯೊವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡರು.
ಇದು ನಮ್ಮ ಸೊಸೈಟಿಯೊಳಗೆ ಬಂದಿತ್ತು. ನನಗೆ ಹಾವುಗಳನ್ನು ಹಿಡಿಯುವುದು ಗೊತ್ತಿದೆ. ಆದ್ದರಿಂದ ಹಿಡಿದಿದ್ದೇನೆ. ಆದರೆ ಜಾಗರೂಕರಾಗಿರಿ. ಹಾವುಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಇದಕ್ಕಾಗಿ ಯಾವಾಗಲೂ ವೃತ್ತಿಪರರನ್ನು ಕರೆಯಿರಿ, ಗೊತ್ತಿಲ್ಲದವರು ಯಾರೂ ಇದನ್ನು ಪ್ರಯತ್ನಿಸಲು ಹೋಗಬೇಡಿ ಎಂದು ಹೇಳಿದರು.
ತಮ್ಮ ಸೊಸೈಟಿ ಒಳಗೆ ಬಂದಿದ್ದ ಹಾವನ್ನು ರಕ್ಷಿಸಿದ ಸೋನು ಸೂದ್ ಮತ್ತೊಮ್ಮೆ ನಿಜ ಜೀವನದ ನಾಯಕರಾದರು. ಶಾಂತವಾಗಿ ಅವರು ತಮ್ಮ ಬರಿ ಕೈಗಳಿಂದ ಹಾವನ್ನು ಹಿಡಿದು ಅದರೊಂದಿಗೆ ಒಂದು ಪ್ರಮುಖ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡರು. ಬಳಿಕ ಹಾವನ್ನು ಎಚ್ಚರಿಕೆಯಿಂದ ದಿಂಬಿನ ಹೊದಿಕೆಯೊಳಗೆ ಇರಿಸಿ ಹತ್ತಿರದ ಕಾಡಿನಲ್ಲಿ ಬಿಡಲು ತಮ್ಮ ಸಹಾಯಕರಿಗೆ ಸೂಚಿಸಿದರು.
ರೈತನಿಗೆ ಎತ್ತು ಉಡುಗೊರೆ
ಸೋನು ಸೂದ್ ಹಲವು ಬಾರಿ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರು ಮಾಡಿರುವ ಸಮಾಜ ಸೇವೆಯನ್ನು ದೇಶವೇ ಮರೆಯಲು ಸಾಧ್ಯವಿಲ್ಲ. ಇದಲ್ಲದೆ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಹಡೋಲ್ಟಿ ಗ್ರಾಮದ 76 ವರ್ಷದ ರೈತ ಅಂಬಾದಾಸ್ ಪವಾರ್ ಅವರು ಎತ್ತುಗಳನ್ನು ಖರೀದಿಸಲು ಹಣದ ಕೊರತೆಯಿಂದಾಗಿ ತಮ್ಮ ಹೊಲವನ್ನು ಕೈಯಾರೆ ಉಳುಮೆ ಮಾಡುತ್ತಿರುವುದು ಸುದ್ದಿಯಾಗಿತ್ತು. ಇದು ಸೋನು ಸೂದ್ ಅವರ ಗಮನಕ್ಕೂ ಬಂದಿತ್ತು. ಬಳಿಕ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ನೀವು ನಿಮ್ಮ ಸಂಪರ್ಕ ಸಂಖ್ಯೆ ನೀಡಿ ನಾವು ನಿಮಗೆ ಎತ್ತುಗಳನ್ನು ಕಳುಹಿಸುತ್ತೇವೆ ಎಂದು ಹೇಳಿದ್ದರು. ಬಳಿಕ ಅವರು ಒಂದು ಜೋಡಿ ಎತ್ತುಗಳನ್ನು ರೈತ ಅಂಬಾದಾಸ್ ಪವಾರ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಸೋನು ಸೂದ್ ಕೊನೆಯದಾಗಿ ಫತೇಹ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಇದನ್ನು ಅವರೇ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಸೀರುದ್ದೀನ್ ಶಾ, ಜಾಕ್ವೆಲಿನ್ ಫರ್ನಾಂಡಿಸ್, ವಿಜಯ್ ರಾಜ್ ಮತ್ತು ದಿಬ್ಯೇಂಡು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸೋನುಸೂದ್ ಅವರು ತಮಿಳು ನಟ ವಿಶಾಲ್ ಜೊತೆ ಮಾಧ ಗಜ ರಾಜದಲ್ಲಿಯೂ ಕಾಣಿಸಿಕೊಂಡರು.