750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ “ಕೋಟ ಶ್ರೀನಿವಾಸ ರಾವ್‌ ” ವಿಧಿವಶ

750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ "ಕೋಟ ಶ್ರೀನಿವಾಸ ರಾವ್‌ " ವಿಧಿವಶ

Kannada Nadu
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ “ಕೋಟ ಶ್ರೀನಿವಾಸ ರಾವ್‌ ” ವಿಧಿವಶ

750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ “ಕೋಟ ಶ್ರೀನಿವಾಸ ರಾವ್‌ ” ವಿಧಿವಶ

ಹಿರಿಯ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್‌ ಅವರು ಭಾನುವಾರ (ಜುಲೈ 13) ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಖಳನಾಯಕ, ಹಾಸ್ಯ ಹಾಗೂ ಗಂಭೀರ ಪಾತ್ರಗಳಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ಕೋಟ ಶ್ರೀನಿವಾಸ ರಾವ್‌ ಅವರಿಗೆ 84 ವರ್ಷ ವಯಸ್ಸಾಗಿತ್ತು.

ಹೈಲೈಟ್ಸ್‌:
ತೆಲುಗು ಚಿತ್ರರಂಗದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್‌ ನಿಧನ
ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್‌ ಅವರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಜುಲೈ 13ರಂದು ಕೊನೆಯುಸಿರೆಳೆದಿದ್ದಾರೆ

Kota Srinivasa Rao dies at 83; Vishnu Manchu, Chiranjeevi mourn the loss:  'His art will live on' - Hindustan Times

ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದ ಗುರುತಿಸಿಕೊಂಡಿದ್ದ ಹಿರಿಯ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) ಇನ್ನಿಲ್ಲ. ಭಾನುವಾರ (ಜುಲೈ 13) ಬೆಳಗಿನ ಜಾವ ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಚಿತ್ರರಂಗದಲ್ಲಿ ಆಘಾತವನ್ನುಂಟು ಮಾಡಿದ್ದು, ಅವರ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಭಾರತದಲ್ಲೇ ನಡೆಯಲಿದೆ ಆಪಲ್‌ನ ಲೇಟೆಸ್ಟ್‌ ಐಫೋನ್‌ 17 ಉತ್ಪಾದನೆ, ನಡೆದಿದೆ ಭರದ ಸಿದ್ಧತೆ
ಗೋಕರ್ಣ ಗುಹೆಯಲ್ಲಿ ಗುಟ್ಟಾಗಿ ಪಾಂಡುರಂಗ ಮೂರ್ತಿ ಆರಾಧಿಸುತ್ತಿರುವ ರಷ್ಯಾ ಮಹಿಳೆ ಪತ್ತೆ!
ಪ್ರಪಂಚ ಸುತ್ತಿ ಕೆಲಸ ಮಾಡಿ: ಭಾರತೀಯರಿಗೆ ಡಿಜಿಟಲ್ ನೊಮ್ಯಾಡ್ ವೀಸಾ ನೀಡುತ್ತಿರುವ 17 ದೇಶಗಳು
40 ವರ್ಷಗಳ ಹಳೆಯ ಸೋಫಾ, ಮಾರ್ಬಲ್‌ನಲ್ಲಿ ದೇವರ ಮನೆ: ಸಿವಿಲ್ ಎಂಜಿನಿಯರ್‌ ಜೆಕೆ ಮನೆಯ ವಿಶೇಷತೆಗಳೇನು?
ಕೋಟ ಶ್ರೀನಿವಾಸ ರಾವ್‌ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆಗಳ ಜೊತೆಗೆ, ಅವರ ಮಗನ ಸಾವಿನ ನಂತರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಎರಡೂ ಕಾರಣಗಳಿಂದಾಗಿ ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿತು. ಜುಲೈ 13ರಂದು ಬೆಳಗಿನ ಜಾವದಲ್ಲಿ ಅವರು ವಿಧಿವಶರಾದರು.

ಕೋಟ ಶ್ರೀನಿವಾಸ ರಾವ್‌ ತಮ್ಮ 50 ವರ್ಷಗಳ ಚಿತ್ರರಂಗದ ವೃತ್ತಿಜೀವನದಲ್ಲಿ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಖಳನಾಯಕ, ಪೋಷಕ ನಟ, ಹಾಸ್ಯ ಕಲಾವಿದನಾಗಿ ತಮ್ಮ ವಿಶಿಷ್ಟ ನಟನಾ ಶೈಲಿಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಅವರ ನಟನೆಯ ವೈವಿಧ್ಯತೆಯು ಚಿತ್ರರಂಗದಲ್ಲಿ ಅವರನ್ನು ವಿಶೇಷವಾಗಿಸಿತು. ಖಳನಾಯಕನ ಪಾತ್ರದಿಂದ ಹಿಡಿದು ಹಾಸ್ಯ ಮತ್ತು ಗಂಭೀರ ಪಾತ್ರಗಳವರೆಗೆ ಅವರು ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಅವರು ಮನೆಮಾತಾಗಿದ್ದರು.

ಕೋಟ ಶ್ರೀನಿವಾಸ್‌ ಅವರು ಕನ್ನಡದಲ್ಲಿ, ʻಲೇಡಿ ಕಮಿಷನರ್‌ʼ, ʻರಕ್ತ ಕಣ್ಣೀರುʼ, ʻಲವ್‌ʼ, ʻನಮ್ಮ ಬಸವʼ, ʻನಮ್ಮಣ್ಣʼ, ʻಶ್ರೀಮತಿʼ, ʻಕಬ್ಜಾʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಕೋಟ ಶ್ರೀನಿವಾಸ ರಾವ್‌ ರಾಜಕೀಯದಲ್ಲಿಯೂ ತಮ್ಮ ಕೊಡುಗೆ ನೀಡಿದ್ದಾರೆ. ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲಿಯೂ ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದರು.

1942ರ ಜುಲೈ 10ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ ಕೋಟ ಶ್ರೀನಿವಾಸ ರಾವ್‌, ರುಕ್ಮಿಣಿಯವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದರು. ಅವರ ಮಗನ ಇತ್ತೀಚಿನ ಸಾವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಕೋಟ ಶ್ರೀನಿವಾಸ ರಾವ್‌ ಅವರ ಸಾವು ದಕ್ಷಿಣ ಭಾರತದ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ರಂಗಭೂಮಿಯಿಂದ ಸಿನಿಮಾದವರೆಗೆ ತಮ್ಮ ಪ್ರತಿಭೆಯನ್ನು ತೋರಿದ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";