ಅಮ್ಮನಿಗೆ ಹೊಸ ಕಾರು ಕೊಡಿಸಿದ ಡ್ರೋನ್ ಪ್ರತಾಪ್ : ಕಾರ್ ನೋಡಿ ಖುಷಿಯಿಂದ ಕಣ್ಣೀರಾಕಿದ ಪ್ರತಾಪ್ ತಾಯಿ !

ಅಮ್ಮನಿಗೆ ಹೊಸ ಕಾರು ಕೊಡಿಸಿದ ಡ್ರೋನ್ ಪ್ರತಾಪ್ : ಕಾರ್ ನೋಡಿ ಖುಷಿಯಿಂದ ಕಣ್ಣೀರಾಕಿದ ಪ್ರತಾಪ್ ತಾಯಿ !

Kannada Nadu
ಅಮ್ಮನಿಗೆ ಹೊಸ ಕಾರು ಕೊಡಿಸಿದ  ಡ್ರೋನ್ ಪ್ರತಾಪ್ : ಕಾರ್ ನೋಡಿ ಖುಷಿಯಿಂದ ಕಣ್ಣೀರಾಕಿದ  ಪ್ರತಾಪ್ ತಾಯಿ  !

 ಅಮ್ಮನಿಗೆ ಹೊಸ ಕಾರು ಕೊಡಿಸಿದ ಡ್ರೋನ್ ಪ್ರತಾಪ್ : ಕಾರ್ ನೋಡಿ ಖುಷಿಯಿಂದ ಕಣ್ಣೀರಾಕಿದ ಪ್ರತಾಪ್ ತಾಯಿ !

ಒಂದು ಕಾಲದಲ್ಲಿ ಮನೆಯಿಂದ ದೂರವಿದ್ದ ಪ್ರತಾಪ್, ಬಿಗ್ ಬಾಸ್‌ ಶೋಗೆ ಬಂದಮೇಲೆ ಈಗ ಫ್ಯಾಮಿಲಿ ಜೊತೆಗೆ ಖುಷಿ ಖುಷಿಯಾಗಿದ್ದಾರೆ. ಬಿಗ್ ಬಾಸ್ನಲ್ಲಿ ತಮಗೆ ಬಂದಿದ್ದ ಬೈಕ್ನ ಅವರು ದಾನ ಮಾಡಿದರು. ಸದ್ಯ ಪ್ರತಾಪ್ ತನ್ನ ತಾಯಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.

ಬಿಗ್ ​ಬಾಸ್ ಕನ್ನಡ​ ಸೀಸನ್​ 10ರ ರನ್ನರ್​ ಅಪ್​ ಡ್ರೋನ್​ ಪ್ರತಾಪ್ ​ ಸದಾ ಒಂದಲ್ಲ ಒಂದು ವಿಚಾರಕ್ಕೆ ​ಸುದ್ದಿಯಲ್ಲಿರುತ್ತಾರೆ. ದೊಡ್ಮನೆಯೊಳಗೆ ಪ್ರತಾಪ್ ತುಂಬಾನೇ ಡಿಫರೆಂಟ್ ಆಗಿ ಇಡೀ ಕರ್ನಾಟಕದ ಜನತೆಯ ಮನ ಗೆದ್ದರು. ಬಿಗ್ ಬಾಸ್​ನಲ್ಲಿ ಸದಾ ಜಗಳವಾಡುತ್ತಿದ್ದ ಕಂಟೆಸ್ಟೆಂಟ್‌ಗಳ ಮಧ್ಯೆ ಇವರು ಸೈಲೆಂಟ್ ಆಗಿ ಕಾಣಿಸಿಕೊಂಡು ಕೊನೆವರೆಗೂ ಇದ್ದು, ರನ್ನರ್ ಅಪ್ ಕೂಡ ಆಗಿದ್ದರು. ಇದೇ ಬಿಗ್ ಬಾಸ್ ವೇದಿಕೆ ಪ್ರತಾಪ್ ಫ್ಯಾಮಿಲಿಯನ್ನು ಒಂದಾಗಿಸಿತ್ತು.

ಒಂದು ಕಾಲದಲ್ಲಿ ಮನೆಯಿಂದ ದೂರವಿದ್ದ ಪ್ರತಾಪ್, ಬಿಗ್ ಬಾಸ್‌ ಶೋಗೆ ಬಂದಮೇಲೆ ಈಗ ಫ್ಯಾಮಿಲಿ ಜೊತೆಗೆ ಖುಷಿ ಖುಷಿಯಾಗಿದ್ದಾರೆ. ಬಿಗ್ ಬಾಸ್​ನಲ್ಲಿ ತಮಗೆ ಬಂದಿದ್ದ ಬೈಕ್​ನ ಅವರು ದಾನ ಮಾಡಿದರು. ಸದ್ಯ ಪ್ರತಾಪ್ ತನ್ನ ತಾಯಿಗೆ ಸರ್​ಪ್ರೈಸ್ ಒಂದನ್ನು ನೀಡಿದ್ದಾರೆ. ಡ್ರೋನ್ ಪ್ರತಾಪ್ ಅವರು ತಮ್ಮ ತಾಯಿಗೆ ಹುಂಡೈ ಕ್ರೆಟಾ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಅವರ ತಾಯಿ ಅತ್ತಿದ್ದಾರೆ.Bigg Boss Kannada fame Drone Prathap gets arrested for the viral sodium  explosion; faces legal action

ಅಪ್ಪ – ಅಮ್ಮ ಊರಲ್ಲಿ ಓಡಾಡಲು ಅನುಕೂಲವಾಗಲಿ ಎಂದು ಹೊಸ ಕಾರೊಂದನ್ನು ಪ್ರತಾಪ್ ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 20 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಕಾರಿನ ಕೀ ಪಡೆದ ಪ್ರತಾಪ್ ತಾಯಿ ಭಾವುಕರಾಗಿದ್ದರು. ಮಗನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ನಮ್ಮ ತಂದೆ ತಾಯಿಗೆ ಏನಾದರೂ ಸಪ್ರೈಸ್‌ ಆಗಿ ಏನಾದರು ಕೊಡಬೇಕು ಎಂದು ಆಸೆ ಇತ್ತು. ಅದಕ್ಕೆ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೆ. ನಮ್ಮ ತಂದೆಗೆ ಹೊಲದಲ್ಲಿ ಏನೋ ಕೆಲಸ ಇತ್ತು ಅಂತ ಅವರು ಬಂದಿಲ್ಲ. ನಮ್ಮ ಹೆತ್ತವರ ಮುಖದಲ್ಲಿ ಖುಷಿ ನೋಡಬೇಕು ಎಂಬುದು ನನ್ನ ಆಸೆ ಆಗಿದೆ” ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಡ್ರೋನ್ ಪ್ರತಾಪ್ ಸಖತ್ ಬ್ಯುಸಿಯಾಗಿದ್ದಾರೆ. ಮೊದಲಿಗೆ ಅವರು ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲಿ ಭಾಗವಹಿಸಿ, ಅಲ್ಲಿ ಪ್ರೇಕ್ಷಕರನ್ನು ರಂಜಿಸಿ ತಮ್ಮಲ್ಲಿರುವ ಕಾಮಿಡಿ ಆ್ಯಂಗಲ್ ಅನ್ನು ಪ್ರೇಕ್ಷಕರಿಗೆ ತೋರಿಸಿದ್ದರು. ಇದಾದ ಬಳಿಕ ಸದ್ಯ ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ನಡೆಯುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಇವರ ಹವಾ ಭರ್ಜರಿ ಆಗಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್​ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್​ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡುತ್ತಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";