ಪೊಲೀಸರ ದೌರ್ಜನ್ಯದಿಂದ ಆತ್ಮಹತ್ಯೆ

ಬೆಂಗಳೂರು : ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಲಗುರ್ತಿ ಗ್ರಾಮದ ಕೋಲಿ ಕಬ್ಬಲಿಗ ಸಮಾಜದ ಯುವಕ ದೇವಾನಂದ ಕೋರಬಾ ಪಟ್ಟಭದ್ರಾ ಹಿತಾಸಕ್ತಿ ಮತ್ತು ಪೆÇಲೀಸರ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಿದವರನ್ನು ಬಂಧಿಸಿರುವುದನ್ನು ವಿರೋಧಿಸಿ  ಹೋರಾಟ ತೀವ್ರಗೊಳಿಸುವುದಾಗಿ ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘದ ಎಚ್ಚರಿಕೆ ನೀಡಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾ. ಬಿ. ಮೌಲಾಲಿ, ಉಪಾಧ್ಯಕ್ಷ ಮಣ್ಣೂರು ನಾಗರಾಜ್ ಅವರು, ರಾಮಚಂದ್ರ ಕೋರಬಾ ಎಂಬುವರು ಜುಲೈ 20 ರಂದು ಪೊಲೀಸರ ದೌರ್ಜನ್ಯದ  ವಿರುದ್ಧ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಆದರೆ ಪೆÇಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದು, ದುರ್ಬಲ ವರ್ಗದವರನ್ನು ಇನ್ನಷ್ಟು ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂದರು.

 

ಸೆಪ್ಟೆಂಬರ್ 30 ರಂದು ಜಿಲ್ಲಾ ಪೊಲೀಸ್ ವರಿಶಿಷ್ಠಾಧಿಕಾರಿಗಳ  ಅನುಮತಿ ಪಡೆದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಲಾಯಿತು. ಆದರೆ ಸಂಬಂಧಪಟ್ಟ ಇಲಾಖೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ನಮ್ಮ ಸಮಾಜದ ಹೋರಾಟಗಾರರನ್ನು ಬಂಧಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.

ಅತ್ಯಹತ್ಯೆ ಪ್ರಕರಣದಲ್ಲಿ 4 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸುವಂತೆ ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ. ಬದಲಿಗೆ ಪ್ರಶ್ನೆ ಮಾಡುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಸಂಬಂಧ ಪೊಲೀಸ್ ವರಿಶಿಷ್ಠಾಧಿಕಾರಿಗಳಿಗೆ  ದೂರು ನೀಡಿದರೂ ಸಹ ಕ್ರಮ ಆಗಿಲ್ಲ ಎಂದು ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘದ ರಾಜ್ಯಾಧ್ಯಕ್ಷ ಡಾ. ಬಿ. ಮಲಾಲಿ ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸೀತಾರಾಮ್ ಪಿ.ವಿ. ಶ್ರೀ ಮರ ನಾಗರಾಜ ಉಪಾಧ್ಯಕ್ಷರಾದ ಪಿ.ವಿ ಸೀತಾರಾಯ್ ಮಾಗಡಿ, ರಮೇಶ್ ನಾಟೇಕಾರ, ಬಸವರಾಜ ಬೂಡಿಗಾಳ್, ಸಂತೋಷ ತಳವಾರ, ಸಾಯಬಣ್ಣ ಜಾಲಗಾರ, ಶಿವಕುಮಾರ ನುಣಗಾರ, ಮಾಳಪ್ಪ ಹನಿನಾಪೂರ, ಮಲ್ಲಿಕಾರ್ಜುನ ಹುಗ್ಗ, ರಾಜ್ಯ ಕಾರ್ಯದರ್ಶಿಗಳಾದ ಬಿ. ರೇವಣ್ಣ ನೆಟ್ಟಪ್ಪ, ಬಸವರಾಜ ಹೆಚ್ ಆಶುಪುರ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top