ಈಶ್ವರ ಖಂಡ್ರೆ – ಡಿ. ಕೆ. ಶಿವಕುಮಾರ್ ಭೇಟಿ

ಗೋದಾವರಿ, ಮೆಹಕರ್ ಸೇರಿ ಕ.ಕ. ಯೋಜನೆಗಳ ಬಗ್ಗೆ ಚರ್ಚೆ

ಬೆಂಗಳೂರು : ಗೋದಾವರಿ ನದಿಯ ನೀರು ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಸಮರ್ಪಕವಾಗಿ ಬಳಕೆ ಆಗಬೇಕಿದ್ದು, ನಮ್ಮ ಪಾಲಿನ  23 ಟಿ.ಎಂ.ಸಿ ನೀರು ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಇಂದು ಗೃಹ ಕಚೇರಿಯಲ್ಲಿ ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಮಾಲೋಚಿಸಿದ ಈಶ್ವರ ಖಂಡ್ರೆ, ಈಗಾಗಲೇ ಕಾರಂಜಾ ಜಲಾಶಯ, ಅತಿವಾಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ತಮ್ಮ ಸ್ವಕ್ಷೇತ್ರ ಭಾಲ್ಕಿ ತಾಲೂಕಿನ ನೀರಾವರಿ ಪ್ರದೇಶ ಹೆಚ್ಚಳ ಮಾಡಲಾಗಿದೆ.

 

ಮೆಹಕರ್ ಏತ ನೀರಾವರಿ ಯೋಜನೆ ಕಾರ್ಯಗತಗೊಳಿಸಬೇಕಿದೆ. ಕಾರಂಜಾ ಯೋಜನೆಗೆ ಹಲವು ವರ್ಷಗಳ ಹಿಂದೆ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಿಲ್ಲ ಎಂಬ ಬೇಡಿಕೆ ಇದೆ.  ಕಾರಂಜಾ ಸಂತ್ರಸ್ತರ ದೀರ್ಘ ಕಾಲದ ಬೇಡಿಕೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಬಾರಿಯ ಆಧಾರದ ಮೇಲೆ ಪರಿಹರಿಸಬೇಕಿದೆ ಮತ್ತು ಬೀದರ್ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕಿದೆ ಎಂಬ ಅಂಶವನ್ನು ಗಮನಕ್ಕೆ ತಂದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top