ನವದೆಹಲಿ: ಕದನ ವಿರಾಮ ಘೋಷಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯದ ಯುದ್ಧಕ್ಕೆ ಬ್ರೇಕ್ ಬಿದ್ದಿದೆ. ಇದರ ಬೆನ್ನಲ್ಲೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಮುಂದುವರಿಸಿದೆ. ಹೇಗೆಂದರೆ, ಪಹಲ್ಗಾಮ್ನಲ್ಲಿ ದಾಳಿ ಮಾಡಿ ನಾಗರಿಕರನ್ನು ಹತ್ಯೆಗೈದ ಲಷ್ಕರ್ ಸಂಘಟನೆಯ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರೆಸಿದೆ.
ಮಂಗಳವಾರ ಐeಖಿ ಸಂಘಟನೆಯ ಉಗ್ರನೊಬ್ಬನ್ನು ಭಾರತ ಭರ್ಜರಿ ಭೇಟೆ ಆಡಿದೆ. ಇನ್ನಿಬ್ಬರು ಉಗ್ರರಿಗಾಗಿ ಕಾಡಿನ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ಹೌದು, ಕದನ ವಿರಾಮ ಬಳಿಕ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದರೆ ಉಗ್ರರ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮುಂದುವರಿಸಿದೆ. ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಓರ್ವ ಉಗ್ರನನ್ನು ಭಾರತದ ಸೌನಿಕರು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಇನ್ನಿಬ್ಬರಿಗಾಗಿ ಶೋಪಿಯಾನ್ ನ ಕೆಲ್ಲಾರ್ ಕಾಡಿನಲ್ಲಿ ಸೈನಿಕರ ತಲಾಷ್ ನಡೆಸುತ್ತಿದ್ದಾರೆ.
ಉಗ್ರರು ಅಡಗಿ ಕುಳಿತಿದ್ದ ಪ್ರದೇಶ ಪತ್ತೆ ಮಾಡಿ ಓರ್ವನಿಗೆ ಹೆಡೆಮುರಿ ಕಟ್ಟಿದ್ದ ಸೈನಿಕರು, ಶಂಕಿತ ಉಗ್ರರ ಸ್ಥಳಗಳನ್ನು ಸುತ್ತುವರಿದಿದ್ದಾರೆ. ಈ ಮೂಲಕ ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಂದುವರಿದಿದೆ ಎನ್ನಬಹುದು. ಉಗ್ರರ ವಿರುದ್ಧ ಕಾರ್ಯಾಚರಣೆ ನಿಲ್ಲಲ್ಲ ಯುದ್ಧ ಪೂರ್ಣಗೊಂಡಿಲ್ಲ, ಸದ್ಯಕ್ಕೆ ನಿಂತಿದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡದ ಬೆನ್ನಲ್ಲೆ ಭದ್ರತಾ ಪಡೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಪಹಲ್ಗಾಮ್ ಉಗ್ರರನ್ನು ಹೊಡೆದುರುಳಿಸುವವರಗೆ ಈ ಕಾರ್ಯಾಚರಣೆ ನಿಲ್ಲುವುದು ಅನುಮಾನ. ನೆನ್ನೆ ಕದನ ವಿರಾಮ ಬೆನ್ನಲ್ಲೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಅದಾದ ಬಳಿಕ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಶೆಲ್ ದಾಳಿ ನಡೆಸಿದ್ದು ಗಮನಕ್ಕೆ ಬಂದಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನ ಗಡಿ ಭಾಗಗಳಲ್ಲಿ ಪಾಕಿಸ್ತಾನಿ ಶೇಲ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಶೆಲ್ ಗಳ ಅವೇಷಗಳು ಲಭ್ಯವಾಗಿವೆ.