49 ವರ್ಷ ವಯಸ್ಸಿನ ರೋಗಿಯ ಮೇಲೆ ಮಾಡಿಫೈಡ್ ರ‍್ಯಾಡಿಕಲ್ ಮಾಸ್ಟೆಕ್ಟೋಮಿ ಕ್ರಮವನ್ನು ಯಶಸ್ವಿಯಾಗಿ ನಡೆಸಿದ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್

ಬೆಂಗಳೂರು:  ಮುಂಚೂಣಿಯ ಆಂಬ್ಯುಲೇಟರಿ ಆರೈಕೆ ಕೇಂದ್ರವಾಗಿರುವ ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ ಈಗ 49 ವರ್ಷ ವಯಸ್ಸಿನ ಗೃಹಿಣಿ ಶ್ರೀಮತಿ ಹೇಮಲತ ಅವರ ಮೇಲೆ ಮಾಡಿಫೈಡ್ ರ‍್ಯಾಡಿಕಲ್ ಮಾಸ್ಟೆಕ್ಟೋಮಿ(ಸಂಪೂರ್ಣ ಸ್ತನ ತೆಗೆದುಹಾಕುವ ಶಸ್ತ್ರ ಚಿಕಿತ್ಸೆ) ಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದನ್ನು ಪ್ರಕಟಿಸಲು ಹರ್ಷಪಡುತ್ತದೆ. ಆಕೆ ತಮ್ಮ ಬಲ ಸ್ತನದ ತೊಟ್ಟಿನಲ್ಲಿ ಬಿಳಿಯ ಸ್ರಾವ ಕುರಿತ ಕಾಳಜಿಯ ದೂರಿನೊಂದಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯನ್ನು ಕೋರಿದ್ದರು. ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯಲ್ಲಿನ ಸಾಮಾನ್ಯ ಮತ್ತು ಉದರದರ್ಶಕ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ನಂದ ರಜನೀಶ್ ಅವರು ಈ ಕ್ರಮವನ್ನು ಕೌಶಲ್ಯಪೂರ್ಣವಾಗಿ ನಡೆಸಿದರು. ಬಲ ಸ್ತನದಲ್ಲಿನ ಡಕ್ಟಲ್ ಕಾರ್ಸಿಲೋಮವನ್ನು ತೆಗೆದುಹಾಕುವುದು ಈ ಕ್ರಮದ ಪ್ರಾಥಮಿಕ ಉದ್ದೇಶವಾಗಿತ್ತು.

 

ತಮ್ಮ ಬಲಭಾಗದ ಮೊಲೆತೊಟ್ಟಿನಲ್ಲಿ ಚಿಂತಾಜನಕ ಸ್ರಾವದೊಂದಿಗೆ ಬರುವುದರೊಂದಿಗೆ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯೊಂದಿಗಿನ ಹೇಮಲತಾ ಅವರ ಪ್ರಯಾಣ ಆರಂಭವಾಗಿತ್ತು. ಸಲಹಾ ತಜ್ಞರಾದ ಡಾ. ನಂದ ರಜನೀಶ್ ಅವರು ಸ್ತನದಲ್ಲಿನ ಅಸಾಧಾರಣ ಬೆಳವಣಿಗೆ ಕುರಿತು ಅನುಮಾನ ವ್ಯಕ್ತಪಡಿಸಿದರಲ್ಲದೆ, ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಬಲ ಸ್ತನದಲ್ಲಿ ಗಡ್ಡೆ ಇರುವುದು ಕಂಡುಬಂದಿತ್ತು. ಈ ಗಡ್ಡೆ ಸ್ತನ ಕ್ಯಾನ್ಸರ್ ಸೂಚಿಸುವ ವೈದ್ಯಕೀಯ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು. ನಂತರ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮತ್ತು ಟ್ರೂಕಟ್ ಬಯಾಪ್ಸಿ(ಅಂಗಾಂಶ ಪರೀಕ್ಷೆ)ಗಳನ್ನು ನಡೆಸಲಾಯಿತು. ಆಕೆಗೆ ಇನ್ವೇಸಿವ್ ಡಕ್ಟಲ್ ಕಾರ್ಸಿಲೋಮ (ಸ್ತನ ಕ್ಯಾನ್ಸರ್) ಇರುವುದು ರೋಗನಿರ್ಣಯದಲ್ಲಿ ದೃಢಪಟ್ಟಿತ್ತು. ಪಿಇಟಿ ಸಿಟಿ ಸ್ಕ್ಯಾನ್ ಮೂಲಕ ಮತ್ತಷ್ಟು ಪರೀಕ್ಷೆ ನಡೆಸಿದ ನಂತರ ಆಕ್ಸಿಲಿಯರಿ ಲಿಂಫ್ ನೋಡ್(ದುಗ್ಧ ಗ್ರಂಥಿಗಳು)ಗಳಲ್ಲಿ ಸಕ್ರಿಯ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

ಕ್ಯಾನ್ಸರ್ ಈಗಾಗಲೇ 2ನೇ ಹಂತದಲ್ಲಿ ಇದ್ದ ಕಾರಣ, ವೈದ್ಯರು ಸ್ತನದ ಸುತ್ತಲೂ ಇರುವ ಕ್ಯಾನ್ಸರ್ ಸಂಬಂಧಿತ ಬೆಳವಣಿಗೆಗಳನ್ನು ತೆಗೆದುಹಾಕಲು ಮಾಡಿಫೈಡ್ ರ‍್ಯಾಡಿಕಲ್ ಮಾಸೆಕ್ಟೋಮಿ ಕ್ರಮವನ್ನು ನಡೆಸಿದರು. ಆದರೆ, ಮಾಂಸಖಂಡಗಳ ಆಕಾರ ರೂಪವಾಗದಂತೆ ಎಚ್ಚರಿಕೆ ವಹಿಸಿದ್ದರು. ಶಸ್ತ್ರ ಕ್ರಿಯೆ ನಂತರ ಹೇಮಲತಾ ಅವರು ಸಮಗ್ರ ಚಿಕಿತ್ಸಾ ಯೋಜನೆಗೆ ಒಳಗಾಗಿದ್ದರು. ಇದರಲ್ಲಿ ಕಿಮೋಥೆರಪಿ, ವಿಕಿರಣ ಚಿಕಿತ್ಸೆ, ಹಾರ್ಮೋನಲ್ ಚಿಕಿತ್ಸೆ ಮುಂತಾದವು ಸೇರಿದ್ದವು. ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯ ವೈದ್ಯಕೀಯ ತಂಡ ನಿಖರ ಮತ್ತು ಖಚಿತ ರೀತಿಯಲ್ಲಿ ಎಲ್ಲಾ ಚಿಕಿತ್ಸೆ ನೀಡಿತ್ತು.

ಶಸ್ತ್ರ ಕ್ರಿಯೆಯ ಗಮನಾರ್ಹ ಯಶಸ್ಸನ್ನು ಕುರಿತು ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯಲ್ಲಿನ ಸಾಮಾನ್ಯ ಮತ್ತು ಉದರದರ್ಶಕ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ನಂದ ರಜನೀಶ್ ಅವರು ಮಾತನಾಡಿ, “ಸ್ತನದ ರೋಗಗಳಿಗೆ ಗುಣಪಡಿಸುವುದಕ್ಕಿಂತಲೂ ರೋಗವನ್ನು ತಡೆಯುವುದು ಯಾವಾಗಲೂ ಹೆಚ್ಚು ಉತ್ತಮವಾಗಿರುತ್ತದೆ. ಸಮತೋಲಿತ ಆಹಾರಕ್ರಮ, ನಿಗದಿತ ವ್ಯಾಯಾಮ ಮತ್ತು ಆಗಾಗ್ಗೆ ಸ್ತನ ಕ್ಯಾನ್ಸರ್ ಪರೀಕ್ಷೆಗಳಿಗೆ ಒಳಗಾಗುವ ಆರೋಗ್ಯಕರ ಜೀವನಶೈಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಆರಂಭ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸ್ತನದ ಆಕಾರವನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ಲಭಿಸುತ್ತದೆಯಲ್ಲದೆ, ಅನುಕೂಲಕರ ಫಲಿತಾಂಶಗಳ ಖಾತ್ರಿ ಲಭಿಸುತ್ತದೆ ಎಂದರು.

ಹೇಮಲತಾ ಅವರ ಆರೈಕೆ ನೋಡಿಕೊಂಡ ಸಮರ್ಪಿತ ವೈದ್ಯಕೀಯ ತಂಡದಲ್ಲಿ ಸ್ತನ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ನಂದ ರಜನೀಶ್ ಮತ್ತು ವೈದ್ಯಕೀಯ ಕ್ಯಾನ್ಸರ್ ತಜ್ಞರಾದ ಡಾ. ವಿಶ್ವನಾಥ್ ಅವರು ಸೇರಿದ್ದರು. ಸಂಪೂರ್ಣ ಪ್ರಕ್ರಿಯೆಯ ಉದ್ದಕ್ಕೂ ಅನುಭವಿ ಅರಿವಳಿಕೆ ತಜ್ಞರ ತಂಡ, ಕರ್ತವ್ಯನಿರತ ವೈದ್ಯರು ಮತ್ತು ದಾದಿಯರು ರೋಗಿಯ ಚಿಕಿತ್ಸೆ ಸರಾಗವಾಗಿ ನಡೆಯುವುದನ್ನು ಖಾತ್ರಿ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.

ಉನ್ನತ ಹಂತದ ಅರಿವಳಿಕೆ ಔಷಧಗಳು, ಅತ್ಯಾಧುನಿಕ ಕಾಟರಿ ಮಿಷಿನ್‌ಗಳು ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿಯ ತಂತ್ರಜ್ಞಾನಗಳನ್ನು ಈ ಸಂದರ್ಭದಲ್ಲಿ ಬಳಸಲಾಗಿದ್ದು ಶಸ್ತ್ರ ಕ್ರಿಯಾ ಕ್ರಮದಲ್ಲಿ ಅತ್ಯುನ್ನತ ಮಾನದಂಡಗಳ ಖಾತ್ರಿ ಮಾಡಿಕೊಳ್ಳಲಾಗಿದೆ.

ರೋಗಿಯನ್ನು ಸಿದ್ಧಪಡಿಸುವುದರಿಂದ ಮತ್ತು ಅರಿವಳಿಕೆ ನೀಡುವುದರಿಂದ ಹಿಡಿದು ಶಸ್ತ್ರ ಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಮತ್ತು ಶಸ್ತçಕ್ರಿಯಾ ನಂತರದ ಆರೈಕೆವರೆಗಿನ ಸಂಪೂರ್ಣ ಶಸ್ತ್ರ ಚಿಕಿತ್ಸೆಯನ್ನು ಸೀಮಾತೀತವಾಗಿ ಕೇವಲ 1.5 ಗಂಟೆಗಳ ಒಳಗೆ ನಿರ್ವಹಿಸಲಾಗಿದೆ.

 

ಶ್ರೀಮತಿ ಹೇಮಲತಾರಂತಹ ರೋಗಿಗಳ ಚೇತರಿಕೆಗೆ ಅವಕಾಶ ಮಾಡಿಕೊಡುವಲ್ಲಿ ಹಾಗೂ ಅಸಾಧಾರಣ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮತ್ತು ಭರವಸೆ ಸಾದರಪಡಿಸುವಲ್ಲಿ ತಮ್ಮ ವೈದ್ಯಕೀಯ ತಂಡದ ಅಚಲ ಬದ್ಧತೆಯನ್ನು ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆ ಶ್ಲಾಘಿಸುತ್ತದೆ.

ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆ, ಬೆಂಗಳೂರು ಕುರಿತು :

ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯು ಬಹುವಿಶೇಷತೆಯ ಆಸ್ಪತ್ರೆಯಾಗಿದ್ದು, ವಿಶ್ವಮಟ್ಟದ ವೈದ್ಯಕೀಯ ಸೇವೆಗಳು ಮತ್ತು ಅತ್ಯುತ್ತಮ ಆರೋಗ್ಯ ಸೇವಾ ನಿರ್ವಹಣಾ ಅಭ್ಯಾಸಗಳನ್ನು ಒಂದುಗೂಡಿಸುತ್ತಿದೆ. ಬೇರಿಯಾಟ್ರಿಕ್ಸ್, ಆರ್ಥೋಪೆಡಿಕ್ಸ್, ಕಾಸ್ಮೆಟಿಕ್ ಸರ್ಜರಿ, ರಕ್ತನಾಳಗಳ ಶಸ್ತ್ರ ಚಿಕಿತ್ಸೆ, ಫಿಜಿಯೋಥೆರೆಪಿ ಇತ್ಯಾದಿ ಚಿಕಿತ್ಸೆಗಳಲ್ಲಿ ಸಂಸ್ಥೆ ವಿಶೇಷ ಪರಿಣತಿ ಹೊಂದಿದೆ.

 

ಆಸ್ಪತ್ರೆಯು 12 ನಗರಗಳಲ್ಲಿ 17 ಕೇಂದ್ರಗಳನ್ನು ಹೊಂದಿದ್ದು, ಈ ನಗರಗಳಲ್ಲಿ, ಬೆಂಗಳೂರು, ಚೆನ್ನೈ, ದಿಲ್ಲಿ, ಗುರ್‌ಗಾಂವ್, ಗ್ವಾಲಿಯರ್, ಹೈದ್ರಾಬಾದ್, ಜೈಪುರ್, ಕಾನ್ಪುರ್, ಮುಂಬಯಿ, ನಾಯ್ಡಾ, ಪಾಟ್ನಾ ಮತ್ತು ಪುಣೆ ನಗರಗಳು ಸೇರಿವೆ. ಸಂಸ್ಥೆ ಇದುವರೆಗೆ 2,50,000 ಯಶಸ್ವಿ ಶಸ್ತ್ರ ಚಿಕಿತ್ಸೆಗಳನ್ನು ಉತ್ಕೃಷ್ಟ ವೈದ್ಯಕೀಯ ಫಲಿತಾಂಶಗಳೊಂದಿಗೆ  ಕೈಗೊಂಡಿದೆ. 2,300ಕ್ಕೂ ಹೆಚ್ಚಿನ ಮುಂಚೂಣಿಯ ವೈದ್ಯರೊಂದಿಗೆ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ ಆರೋಗ್ಯ ಸೇವೆಗಳಲ್ಲಿ ನೂತನ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರಿಸಿದೆ. ಜೊತೆಗೆ  ಬೆನ್ನುಮೂಳೆ ಮತ್ತು ಮೂಳೆ ಚಿಕಿತ್ಸೆ, ಸಾಮಾನ್ಯ ಮತ್ತು ಉದರದರ್ಶಕ ಶಸ್ತ್ರಚಿಕಿತ್ಸೆ, ಇಎನ್‌ಟಿ, ಮೂತ್ರ ರೋಗಶಾಸ್ತ್ರ, ವೆರಕೋಸ್ ವೇನ್ಸ್, ಸ್ತ್ರೀರೋಗ ಶಾಸ್ತ್ರ, ನೇತ್ರ ರೋಗಶಾಸ್ತ್ರ, ಪಚನಾಂಗ ರೋಗಶಾಸ್ತ್ರ, ನೋವು ನಿರ್ವಹಣೆ ಮತ್ತು ಸಾಮಾನ್ಯ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇರಿದಂತೆ ವಿಸ್ತಾರವಾದ ಶ್ರೇಣಿಯ ವಿಶೇಷ ಸೇವೆಗಳನ್ನು ಆಸ್ಪತ್ರೆ ಸಾದರಪಡಿಸುತ್ತಿದೆ.

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top