ಐಡಿಎಲ್ ಬ್ಲೈಂಡ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: 20 ವಿಶೇಷ ಶಿಕ್ಷಕರಿಗೆ ಸನ್ಮಾನ

ಬೆಂಗಳೂರು: ಐಡಿಎಲ್ ಬ್ಲೈಂಡ್ ಸ್ಕೂಲ್ ಗೆ 20 ವರ್ಷ ತುಂಬಿದ ಹಿನ್ನೆಲೆಯ ಜೊತೆಗೆ ವಿಶೇಷ ಶಿಕ್ಷಕರ ದಿನಾಚರಣೆಯನ್ನು ವಿನೂತನವಾಗಿ ಆಯೋಜಿಸಲಾಗಿತ್ತು. ದಿವ್ಯಾಂಗರಿಗೆ ಬೋಧನೆ ಮಾಡುವ 20 ಮಂದಿಗೆ ವಿಶೇಷ ಅಂಧ ಶಿಕ್ಷಕರನ್ನು ಸನ್ಮಾನಿಸಲಾಯಿತು.

 

          ವಿಜಯನಗರದ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳನ್ನು ಆರೈಕೆ ಮಾಡುವ, ಅವರ ಯೋಗ ಕ್ಷೇಮ ನೋಡಿಕೊಳ್ಳುವ ಮತ್ತು ಈ ವಲಯದಲ್ಲಿ ಅಸಾಧಾಣ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.

 

 

 “ಪ್ರತಿಯೊಂದು ವಿಶೇಷ ವಿದ್ಯಾರ್ಥಿಯ ಯಶಸ್ಸಿನಲ್ಲಿ ಇಂತಹ ವಿಶೇಷ ಶಿಕ್ಷಕರ ಪಾತ್ರವಿದ್ದು, ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ತ್ರಾಸದಾಯಕವಲ್ಲ. ಆದರೆ ವಿಶೇಷ ಶಿಕ್ಷಕರಿಗೆ ಬೋಧಿಸುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಪ್ರಯತ್ನದಲ್ಲಿ ನಮ್ಮ ವಿಶೇಷ ಶಿಕ್ಷಕರು ಯಶಸ್ವಿಯಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶೈನಿ ಗ್ರೇಸ್ ಪಾಲ್ ಹೇಳಿದರು.

ಶಾಲೆಯ ಸಂಸ್ಥಾಪಕರಾದ ಡಾ.ಪಿ.ಕೆ. ಪಾಲ್ ಅವರ ಪ್ರಯತ್ನದಿಂದ 2003 ರಲ್ಲಿ ಈ ಶಾಲೆ ಆರಂಭವಾಗಿದ್ದು, ಅವರ ನಿಧನದ ನಂತರ ಡಾ. ಶೈನಿ ಗ್ರೇಸ್ ಪಾಲ್  ನೇತೃತ್ವದಲ್ಲಿ ಶಾಲೆ ನಡೆಯುತ್ತಿದೆ.  ಕಾರ್ಯಕ್ರಮದಲ್ಲಿ  ರೋಟರಿ ಸಂಸ್ಥೆ ಅಧ್ಯಕ್ಷ ಅಧ್ಯಕ್ಷ ಶೈನ್ ನೆರೊ-ಪಿಂಕ್ ವಾಟರ್    ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top