ಬೆಂಗಳೂರು: ಕೋರಿಯಾದ ಗ್ಯಾಂಗ್ ವಾನ್ ನಲ್ಲಿ ನಡೆದ ವಿಶ್ವ ಟ್ವೇಕ್ವಾಂಡೋ ಕಲ್ಚರಲ್ ಬೀಚ್ ಪೋಮ್ಸಾಯೆ ಚಾಂಪಿಯನ್ ನಲ್ಲಿ ಬೆಂಗಳೂರಿನ ತಿರುಮಾಲ ಜಯಪಾಲ್ ಅವರು ರೆಫ್ರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತದವರು ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಕ್ಕೆ ಅವರು ಭಾಜನರಾಗಿದ್ದಾರೆ.
ಸಂಗ್ ಅನ್ ಸ್ಪೋರ್ಟ್ ಟೌನ್ ನಲ್ಲಿ ಆಗಸ್ಟ್ 18 ರಿಂದ 24ವರೆಗೆ ನಡೆದ ಟೂರ್ನಿಯಲ್ಲಿ ತಿರುಮಾಲ ಜಯಪಾಲ್ ಅವರು ತಮ್ಮ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸಿದ್ದಾರೆ. ಏಳು ದಿನಗಳ ಕಾಲ ಸುಂದರ ಬೀಚ್ ಪರಿಸರದಲ್ಲಿ ಟ್ವೇಕ್ವಾಂಡೋದ ವಿವಿಧ ಪ್ರಕಾರದ ಕ್ರೀಡೆಗಳಲ್ಲಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಿರುಮಾಲ ಜಯಪಾಲ್, ನಿಜಕ್ಕೂ ಇದು ಸವಾಲಿನಿಂದ ಕೂಡಿದ ಜವಾಬ್ದಾರಿಯಾಗಿತ್ತು. ಬೆಂಗಳೂರಿನವರಾಗಿ ದೇಶವನ್ನು ಪ್ರತಿನಿಧಿಸಿದ್ದು ಹೆಮ್ಮೆ ತಂದಿದೆ. ಭಾರತೀಯ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಲು ಉಜ್ವಲ ಅವಕಾಶಗಳಿವೆ ಎಂದು ಹೇಳಿದರು.