ಆದಿವಾಸಿಗಳ ಸ್ಥಳದಲ್ಲಿಯೇ ವಿಶ್ವಬುಡಕಟ್ಟು ದಿನಾಚರಣೆ ಆಚರಿಸಿದ ನಾಗೇಂದ್ರ

ಹೆಚ್‍ಡಿಕೋಟೆ: ಬುಡಕಟ್ಟು ಜನರು ವಾಸಿಸುವ ಸ್ಥಳಕ್ಕೆ ತೆರಳಿದ ಸಚಿವ ಬಿ.ನಾಗೇಂದ್ರ ಅವರು, ಸಲ್ಲಿಯೇ ಅರ್ಥಪೂರ್ಣವಾಗಿ ವಿಶ್ವಬುಡಕಟ್ಟು ದಿನಾಚರಣೆಯನ್ನ ಆಚರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವಬುಡಕಟ್ಟು ದಿನಾಚರಣೆಯನ್ನ ಆಚರಿಸುವುದು ಸಂಪ್ರದಾಯ ಅದರೆ ಯುವ ಸಬಲೀಕರಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾದ ಬಿ.ನಾಗೆಂದ್ರ ಅವರು ಅದಿವಾಸಿಗಳು ವಾಸಿಸುವ ರಾಜ್ಯದ ಕಟ್ಟಕಡೆಯ ಹೆಗ್ಗಡದೇವನಕೋಟೆ ತಾಲೂಕಿನ‌  ಸಿ.ಹಾಡಿಯ ಏಕಲ್ಯವ್ಯ ವಸತಿ ಶಾಲೆಯಲ್ಲಿ ಬುಡಕಟ್ಟು ಜನರೊಂದಿಗೆ ವಿಶ್ವಬುಡಕಟ್ಟು ದಿನಾಚೆಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದರು.

 

ಸರ್ಕಾರಿ ಆಚರಣೆಗಳು ಕೇವಲ ಕಾಟಚಾರದ ಆಚರಣೆಗಷ್ಟೆ ಸೀಮಿತವಾಗಿರುವ ದಿನಮಾನದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಹೆಗ್ಗಡ ದೇವನಕೋಟೆಯ ಆದಿವಾಸಿಗಳು ವಾಸಿಸುವ ಅಡಿಗಳಿಗೆ ತೆರಳಿ ವಾಸ್ಯವ್ಯ ಹೂಡುವ ಮೂಲಕ ಸಮಸ್ಯೆಗಳ ಮೂಲ ಅರಿಯಲು ಹೊರಟಿದ್ದಾರೆ. 

ಹೌದು…ಸೊಳ್ಖೆಪುರ ಅಡಿಯ ಏಕಲವ್ಯ ಶಾಲೆಯಲ್ಲಿ ಬುಡಕಟ್ಟು ಜನರ ಜೊತೆ ವಿಶ್ವಬುಡಕಟ್ಟು ದಿನಾಚರಣೆಯನ್ನ ಆಚರಿಸಿಕೊಂಡು ಮಾತನಾಡಿದವರು, ರಾಜ್ಯದ ಕಟ್ಟಕಡೆಯ ವ್ಯೆಕ್ತಿಗಳಿಗೆ ಇಲಾಖೆಯ ಯೋಜನೆಗಳು ಮುಟ್ಟುವಂತಾಗಬೇಕು ಅನ್ನೊ ಉದ್ದೇಶದಿಂದ ಇಲ್ಲಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಮೂಲಕ ಇಲ್ಲಿನ ಜನರ ಜೀವನ ಕ್ರಮ, ಶಿಕ್ಷಣ, ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗುವುದು. ಈ ಆಚರಣೆ ಕೇವಲ ಒಂದು ದಿನದ ಆಚರಣೆಗಷ್ಟೆ ಸೀಮಿತ ಅಲ್ಲ ಮುಖ್ಯಮಂತ್ರಿಗಳು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜೊತೆ ಚರ್ಚಿಸಿ ದಶಕಗಳ ಬೇಡಿಕೆಯಾದ ಜಮೀನಿನ ಪಟ್ಟ ವಿತರಣೆ ಸೇರಿದಂತೆ ಮನೆಗಳ ನಿರ್ಮಾಣ ಕಾರ್ಯವನ್ನ ವರ್ಷದೊಳಗೆ ಮಾಡಿಯೇ ತೀರುತ್ತೇವೆ ಎಂದ ಅವರು ಅರಣ್ಯವಾಸಿಗಳು ಭಿಕ್ಷೆ ಕೇಳುತ್ತಿಲ್ಲ ಬದಲಿಗೆ ಅವರ ಹಕ್ಕನ್ನು ಕೇಳುತ್ತಿದ್ದಾರೆ ಅದನ್ನ ಸಂವಿದಾನದ ಚೌಕಟ್ಟಿನ ಅಡಿ ಒದಗಿಸಿ ಕೊಡಲಾಗುವುದೆಂದರು. 

ಈ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಕಲ್ಲೇಶಪ್ಪ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಪದ್ಮನಾಭ ಸೇರಿದಂತೆ ಬುಡಕಟ್ಟು ಸಮಾಜದ ಮುಖಂಡರು ಹಾಜರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top