ಆಗಸ್ಟ್ ೧೧ ರಿಂದ ಬೆಂಗಳೂರಿನ ರಿಟ್ಜ್ ಕಾರ್ಲಟನ್ ನಲ್ಲಿ ಆರಂಭ: ಮೂರು ದಿನಗಳ ಮನಮೋಹಕ ವರಮಹಾಲಕ್ಷ್ಮಿ ಹಬ್ಬದ ವಿಶೇಷ, ಹೊಸ ವಿನ್ಯಾಸ, ಸಾಂಪ್ರದಾಯಿಕ ವಡವೆಗಳ ಸಂಗ್ರಹ
ಬೆಂಗಳೂರು; ದಕ್ಷಿಣ ಭಾರತದ ೪೮ ನೇ ಮನಮೋಹಕ ಆಭರಣಗಳ “ಏಷ್ಯಾ ಜುವೆಲ್ಸ್ ಶೋ ೨೦೨೩” ಆಗಸ್ಟ್ ೧೧ ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಕಾರ್ಲಟನ್ ರಿಟ್ಜ್ ನಲ್ಲಿ ನಡೆಯಲಿದ್ದು
ಇದರ ಕುರಿತು ಆಯೋಜಕರಾದ ಹರೀಶ್ ಸಚ್ಚದೇವ್ ರವರು ಮಾತನಾಡಿ ವರಮಹಾ ಲಕ್ಷ್ಮಿ ಹಬ್ಬಕ್ಕಾಗಿ ಮಹಿಳೆಯರನ್ನು ಆಕರ್ಷಿಸಲು ಸಜ್ಜಾಗಿದೆ. ಪ್ರತಿದಿನ ಬೆಳಿಗ್ಗೆ ೧೦.೩೦ ರಿಂದ ರಾತ್ರಿ ೮ ಗಂಟೆವರೆಗೆ ಹಿಂದೆಂದೂ ಇಲ್ಲದ ಆಭರಣಗಳ ಸಂಗ್ರಹವನ್ನು ಮೇಳ ಪ್ರದರ್ಶಿಸುತ್ತಿದ್ದು, ದೇಶದ ಎಲ್ಲಾ ಆಭರಣ ಕಂಪೆನಿಗಳನ್ನು ಒಂದೇ ಸೂರಿನಡಿ ತರಲಾಗುತ್ತಿದೆ.
ಆಗಸ್ಟ್ ೧೧ ರಂದು ಅಪರಾಹ್ನ ೧೨ ಗಂಟೆಗೆ ಮೇಳಕ್ಕೆ ಚಾಲನೆ ದೊರೆಯುತ್ತಿದ್ದು, ಗ್ರಾಹಕರ ಸಮ್ಮುಖದಲ್ಲಿ ಗಣ್ಯರು ಪ್ರದರ್ಶವನ್ನು ಉದ್ಘಾಟಿಸಲಿದ್ದಾರೆ. ಚಿನ್ನ, ವಜ್ರ, ಪ್ಲಾಟಿನಂ, ಸಾಂಪ್ರದಾಯಿಕ ವಡವೆಗಳು, ಮದುವೆ, ಪ್ರಾಚೀನ, ವಿಶೇಷ ಸಂಗ್ರಹ, ಕುಂದನ್, ಜಡುವಾ, ಪೊಲ್ಕಿ ವಡವೆಗಳಲ್ಲದೇ ಬೆಳ್ಳಿ ಆಭರಣ ಕೂಡ ಪ್ರದರ್ಶನದ ವಿಶೇಷವಾಗಿದೆ.
“ಮುಂದಿನ ಮದುವೆ ಸಂಭ್ರಮಕ್ಕೆ ಅತ್ಯುತ್ತಮ ಆಭರಣಗಳನ್ನು ಮುಂಗಡ ಕಾಯ್ದಿರಿಸಲು ಸಹ ಅವಕಾಶವಿದ್ದು, ಒಂದೇ ಕಡೆ ಎಲ್ಲಾ ರೀತಿಯ ಆಭರಣಗಳನ್ನು ಖರೀದಿಸಲು ಇದೊಂದು ಸುರ್ವಣಾವಕಾಶವಾಗಿದೆ. ವಡೆವೆಗಳಷ್ಟೇ ಅಲ್ಲದೇ ಅಪರೂಪದ ಹರಳುಗಳು ಸಹ ಇಲ್ಲಿ ಲಭ್ಯವಿದೆ. ಬೆಂಗಳೂರು, ಮುಂಬೈ, ದೆಹಲಿ, ಜೈಪುರ, ಹೈದ್ರಾಬಾದ್ ಮತ್ತಿತರ ನಗರಗಳಿಂದಲೂ ಖ್ಯಾತ ಆಭರಣ ತಯಾರಕರು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಗಿರಿಜಾ ಜುವೆಲರ್ಸ್, ನಿಖಾರ್ ಜುವೆಲ್ಸ್, ಖೀಯಾ ಜುವೆಲರ್ಸ್, ಸಿಂಹ, ಪಿಎಂಜೆ, ಮುಂಬೈನ ನೆಹಾ ಜುವೆಲ್ಸ್, ರೇಣುಕಾ ಫೈನ್ ಜುವೆಲರ್ಸ್, ಝಿವಾ, ಸೋಹಮ್ ಕ್ರಿಯೇಷನ್, ದೆಹಲಿಯ ಸೆಹಗಲ್, ಅರುಣಾ ಮತ್ತಿತರೆ ಕಂಪೆನಿಗಳು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.