ಬಳ್ಳಾರಿ: ಬಳ್ಳಾರಿ ಬಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿದೆ. ಕಳೆದ ಕೆಲವು ತಿಂಗಳಲ್ಲಿ ಬಾಣಂತಿಯರ ಸರಣಿ ಸಾವಿನಿಂದ ಬಿಮ್ಸ್ ಆಸ್ಪತ್ರೆ ಸುದ್ದಿಯಲ್ಲಿತ್ತು. ಬಾಣಂತಿಯರ ಸಾವು ರಾಜ್ಯದಾದ್ಯಂತ ಸುದ್ದಿಯಾಗಿ ಆರೋಗ್ಯ ಸಚಿವರೇ ಬಳ್ಳಾರಿಗೆ ಭೇಟಿ ನೀಡಿ ಸರ್ಕಾರಿ ವೈದ್ಯಕೀಯ ಸೇವೆಯನ್ನು ಉತ್ತಮಪಡಿಸುವುದಾಗಿ ಭರವಸೆ ನೀಡಿದ್ದರು. ಆದರೇ ಬಳ್ಳಾರಿ ಬಿಮ್ಸ್‍ನಲ್ಲಿ ಸಾವಿನ ಸರಣಿ ಮಾತ್ರ ನಿಂತಿಲ್ಲ.
ವೈದ್ಯರ ನಿರ್ಲಕ್ಷ್ಯದಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಮಗುವೊಂದು ಮರಣವಪ್ಪಿದ ಇನ್ನೋಂದು ಪ್ರಕರಣ ಬೆಳಕಿಗೆ ಬಂದಿದೆ. ಕೌಲ್ ಬಜಾರ್ ಪ್ರದೇಶದ ಬಟ್ಟಿ ಏರಿಯಾದ 16 ತಿಂಗಳ ಮಗು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂದು ಮಗುವಿನ ಪೆÇೀಷಕರು ಮತ್ತು ಕನ್ನಡಪರ ಹೋರಾಟಗಾರರು ಶನಿವಾರ ಆಸ್ಪತ್ರೆಯ ಮುಂದೆ ಧರಣಿ ನಡೆಸಿದರು.
ವೈದ್ಯರು ಬಿಮ್ಸ್ ಸರ್ಕಾರಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ,ವಾರದಲ್ಲಿ ಒಂದೇ ಬಾರಿ ಬಂದರೂ, ಮಧ್ಯಾಹ್ನದವರೆಗೆ ಕಾರ್ಯ ನಿರ್ವಹಿಸುತ್ತಾರೆ. ಆಸ್ಪತ್ರೆಗೆ ಬಂದ ರೋಗಿಗಳನ್ನು ತಮ್ಮ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.ಹೆರಿಗೆ ಸಮಯದಲ್ಲಿ ಅನೇಕ ಶಿಶುಗಳು ಮೃತಪಟ್ಟಿವೆ. ಈ ಮಗುವಿನ ಸಾವಿಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು. ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ಮಾಡಿ ವೈದ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಮಗುವಿನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.