ಬೆಂಗಳೂರು: ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘವು ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ
ಆಗಸ್ಟ್ 4, 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ತೆರಿಗೆ ಸಮ್ಮೇಳನ ಮತ್ತು
ತೆರಿಗೆ ವೃತ್ತಿಪರರ ದಿನಾಚರಣೆ ಜರುಗಲಿದೆ.
ಸಮ್ಮೇಳನವನ್ನು
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಉದ್ಘಾಟಿಸಲಿದ್ದು ಹಾಗೂ ಅತಿಥಿಗಳಾಗಿ ಕೇಂದ್ರ
ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ.
ಸುವರ್ಣ ವರ್ಷಾಚರಣೆ ಸವಿನೆನಪಿನಲ್ಲಿ ಸಂಸ್ಥೆಯು ”ಕರ್ನಾಟಕ ಮಹಿಳಾ ವಿಭಾಗವನ್ನು” ಆರಂಭಿಸುತ್ತಿದ್ದು ಅದನ್ನು ಚಲನಚಿತ್ರ ನಟಿ ಶ್ರೀಮತಿ ಶ್ವೇತ ಶ್ರೀವತ್ಸವ ಉದ್ಘಾಟಿಸಲಿದ್ದಾರೆ. ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಶ್ರೀಮತಿ ಸಿ. ಶಿಖಾ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ. ರಾಜ್ಯದಾದ್ಯಂತ 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ನಂಜುಂಡ ಪ್ರಸಾದ್ ತಿಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 10 ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 15 ಲಕ್ಷ ನೀಡಿದ್ದಾರೆ.
ತೆರಿಗೆ ಸಲಹೆಗಾರರ ಸಂಘದಲ್ಲಿ 2,000ಕ್ಕೂ ಅಧಿಕ ಸದಸ್ಯರಿದ್ದು, ತೆರಿಗೆ ಪಾವತಿಸುವವರಿಗೆ ವಿಸ್ತಾರವಾದ ನೆರವು ಒದಗಿಸುವುದಲ್ಲದೆ ಜಿಎಸ್ಟಿ ಬಗ್ಗೆ ಮಾರ್ಗದರ್ಶನ, ಆದಾಯ ತೆರಿಗೆ ಮತ್ತು ಇತರ ತೆರಿಗೆ ಸಂಬಂಧಿ ಸೇವೆಗಳನ್ನು ಒದಗಿಸುತ್ತದೆ.
ಅಷ್ಟೇ ಅಲ್ಲದೆ, ಸಂಘದ ಸದಸ್ಯರು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಾದ ‘ಪರಿಸರ ಸಂರಕ್ಷಣೆ’ ನಂತಹ ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇದರಡಿ 10,000ಕ್ಕೂ ಅಧಿಕ ಗಿಡಗಳನ್ನು ರಾಜ್ಯಾದ್ಯಂತ ನೆಡಲಾಗಿದೆ. ಕಾರ್ಯಕ್ರಮದ ಆಯೋಜಕರರಾದ ಶ್ರೀ ಡಿ.ಎಂ. ಭಟ್ಟಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 98440 06736 ಸಂಪರ್ಕಿಸಬಹುದು.