ರಾಷ್ಟ್ರಮಟ್ಟದ 3 ದಿನಗಳ ನಾವೀನ್ಯತೆಯ ಸಿದ್ಧ ಉಡುಪು ಮಾರಾಟ ಉತ್ಸವ  ಮೇಳ

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ 28 ನೇ ನಾವೀನ್ಯತೆಯ ಸಿದ್ಧ ಉಡುಪು ಮಾರಾಟ ಉತ್ಸವ ; ನವೋದ್ಯಮಗಳು, ವ್ಯಾಪಾರಿಗಳಿಗೆ ಅತ್ಯುತ್ತಮ ವೇದಿಕೆ

ಬೆಂಗಳೂರು : ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ವೈವಿಧ್ಯಮ ಸಿದ್ಧಉಡುಪು ವಲಯದ ಬೃಹತ್ ವ್ಯಾಪರಿ ಮೇಳ ಆರಂಭವಾಗಿದೆ. ಅತ್ಯಾಧುನಿಕ ವಿನ್ಯಾಸ, ನವನವೀನ ಟ್ರೆಂಡ್ ಗಳ ಉಡುಪುಗಳು ವ್ಯಾಪಾರಿಗಳನ್ನು ಕೈ ಬೀಸಿ ಕರೆಯುತ್ತಿದೆ. ಜವಳಿ ಉತ್ಪಾದಕ ವಲಯದ ಬಹುತೇಕ ಬ್ರ್ಯಾಂಡ್ ಗಳು ಇಲ್ಲಿ ಲಭ್ಯವಿದೆ.

ಸಣ್ಣಪುಟ್ಟ ಜವಳಿ ಉತ್ಪಾದಕರಿಂದ ಹಿಡಿದು, ಝೋಲಾ, ರಿಲಯನ್ಸ್ ಮತ್ತಿತರೆ ಬೃಹತ್ ಕಂಪೆನಿಗಳು ತನ್ನ ಮಳಿಗೆಗಳನ್ನು ತೆರೆದಿವೆ. ಪುರುಷರು, ಮಹಿಳೆಯರು, ಮಕ್ಕಳ ಸಿದ್ದ ಉಡುಪುಗಳು ಗಮನ ಸೆಳೆಯುತ್ತಿವೆ. ಆದರೆ ಇಲ್ಲಿ ಮಾರಾಟಕ್ಕೆ ಅವಕಾಶವಿಲ್ಲ. ವ್ಯಾಪಾರಿಗಳು ಹೊಸ ವಿನ್ಯಾಸಗಳನ್ನು ನೋಡಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಜವಳಿ ವಲಯದ ನವೋದ್ಯಮಗಳಿಗೂ ಕೂಡ ತನ್ನ ವ್ಯಾಪಾರ – ವಹಿವಾಟಿಗೆ ವೇದಿಕೆ ಸಿದ್ಧವಾಗಿದೆ.

ಬೆಂಗಳೂರಿನ ಅರಮನೆ ಮೈದಾನದ ಪ್ರಿನ್ಸಸ್ ಶೈನ್ ನಲ್ಲಿ ದಾವಣಗೆರೆಯ ಬಿ..ಎಸ್. ಚೆನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಶಿವಕುಮಾರ್ ಜವಳಿ ಉತ್ಸವ ಉದ್ಘಾಟಿಸಿ ಮಾತನಾಡಿ, ಚಿಲ್ಲರೆ ವ್ಯಾಪಾರಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಎಲ್ಲಾ ಉತ್ಪಾದಕರು ಒಂದೆಡೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೆಂಗಳೂರು ಇಡೀ ದೇಶದಲ್ಲಿ ಸಂಘಟಿತ ಜವಳಿ ತಾಣವಾಗಿ ಮಾರ್ಪಟ್ಟಿದ್ದು, ಜವಳಿ ವ್ಯಾಪಾರದಲ್ಲಿ ಕರ್ನಾಟಕ ಮುಂಚೂಣಿ ಸ್ಥಾನಕ್ಕೇರಲಿದೆ ಎಂದರು.

ಚಿತ್ರನಟಿ ಶರಣ್ಯ ಶೆಟ್ಟಿ ಮಾತನಾಡಿ, ಈಗಿನ ಸಮೂಹದ ಆಸಕ್ತಿಗೆ ಅನುಗುಣವಾಗಿ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಸಂಗ್ರಹವೂ ಅತ್ಯುತ್ತಮವಾಗಿದ್ದು,  ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲಾ ರೀತಿಯ ಉಡುಪುಗಳ ಸಂಗ್ರಹ ಇಲ್ಲಿವೆ ಎಂದರು.

ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ಇದು ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಉತ್ಸವವಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳ 150 ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್ ಗಳು, ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ, ತೊಡುಗೆ, ಔಪಚಾರಿಕ, ಅನೌಪಚಾರಿಕ ವಸ್ತ್ರಗಳು, ಚಳಿಗಾಲದ ಉಡುಪುಗಳ  ಪ್ರದರ್ಶನ ಇರಲಿದೆ. ಸೂರತ್, ಜೈಪುರ, ದೆಹಲಿ, ಅಮಹದಾಬಾದ್, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳ ಜವಳಿ ಉತ್ಪಾದಕರು ಪಾಲ್ಗೊಳ್ಳುತ್ತಿದ್ದಾರೆ. ದೇಸೀಯ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು, ರಿಲಯನ್ಸ್ ರಿಟೈಲ್ ಪ್ಯಾಷನ್ ಬ್ರ್ಯಾಂಡ್, ಮುಂಬೈನ ಖ್ಯಾತ ಜೋಲಾ ಸೇರಿದಂತೆ ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳು ಭಾಗವಹಿಸುತ್ತಿವೆ. 2,500 ಕ್ಕೂ ಹೆಚ್ಚು ಜವಳಿ ವ್ಯಾಪಾರಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 100 ಕೋಟಿ ಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.  

 ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ, ಜೋಲಾ ಸಿದ್ಧ ಉಡುಪು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಲ್ ಶಾ. ಚಿತ್ರನಟಿ ಶರಣ್ಯ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ, ಜೋಲಾ ಸಿದ್ಧ ಉಡುಪು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಲ್ ಶಾ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top