ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ: ಸಚಿವ ಈಶ್ವರ ಖಂಡ್ರೆ

ಏಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್ನೆಕ್ಸ್ ಮತ್ತು ಎಫ್‌ಕೆಸಿಸಿಐಗಳ ಸಹಯೋಗದೊಂದಿಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆ ಸಚಿವ ಈಶ್ವರ್ ಖಂಡ್ರೆ ಅಂತರಪ್ರಬೇಧಗಳ ಸಮಾವೇಶವನ್ನು ಉದ್ಘಾಟಿಸಿದರು. 

ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ನಮ್ಮ ಸರ್ಕಾರ ಪಶ್ಚಿಮ ಘಟ್ಟಗಳು ಮತ್ತು ಅದರ ಜೀವವೈವಿಧ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲು ಬದ್ಧವಾಗಿದೆ. ಸಂಜಯ್ ಕುಮಾರ್ ನೇತೃತ್ವದ ಎರಡನೇ ಸಮಿತಿ ಡಿಸೆಂಬರ್ ವೇಳೆಗೆ ವರದಿಯನ್ನು ಜಾರಿಗೊಳಿಸುವ ನಿರೀಕ್ಷೆಯಿದ್ದು ಅದರ ಆಧಾರದ ಮೇಲೆ ಸರ್ಕಾರ ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ವರದಿ ಜಾರಿಗೆ ಕೆಲಸ ಮಾಡಲಿದೆ ಎಂದರು.

ಪಶ್ಚಿಮ ಘಟ್ಟಗಳ ಬಹುತೇಕ ಭಾಗವನ್ನು ಕರ್ನಾಟಕ ರಾಜ್ಯ ಹಂಚಿಕೊಂಡಿದ್ದು, ಅದರ ಭೌಗೋಳಿಕ ಪ್ರದೇಶಗಳಲ್ಲಿ 11 ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿನ ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳ ಸಂರಕ್ಷಣೆ, ತಂತ್ರಜ್ಞಾನ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾದ ಅರಿವು ಮೂಡಿಸಲು ಪ್ರಾಥಮಿಕ ಶಾಲೆ ಹಂತದಿಂದ ಪದವಿ ಹಂತದವರೆಗೆ ಪಠ್ಯಕ್ರಮವನ್ನು ತಕ್ಷಣ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು. ಸಂರಕ್ಷಣೆ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸುವ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಕಸ್ತೂರಿರಂಗನ್ ಸಮಿತಿ ವರದಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಅದಕ್ಕೂ ಮುನ್ನ ಗಾಡ್ಗೀಳ್ ಸಮಿತಿ ವರದಿಗೂ ಇದೇ ದುಃಸ್ಥಿತಿ ಎದುರಾಗಿತ್ತು. ಕರ್ನಾಟಕವು ಇತರ 6 ನೆರೆಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ವರದಿ ಜಾರಿಗೆ ಕಾನೂನು ರೂಪಿಸುವುದರ ಜೊತೆಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಗ್ರಾಮ ಪಂಚಾಯಿತಿಗಳಲ್ಲಿ ಅರಣ್ಯ ಸಮಿತಿಗಳು, ಅಂಗನವಾಡಿಗಳು ಮತ್ತು ಶಾಲಾ ಮಕ್ಕಳನ್ನು ಈ ಬಗ್ಗೆ ಜಾಗೃತಿ ಅಭಿಯಾನಕ್ಕೆ ತೊಡಗಿಸಿಕೊಳ್ಳಬಹುದು ಎಂದು ಸಹ ಸಲಹೆ ನೀಡಿದರು.

ಇಂಟರ್‌ ಸ್ಪೇಸಿಸ್ ಮನಿ ಗ್ರೂಪ್‌ನ ಸಂಸ್ಥಾಪಕ ಜೊನಾಥನ್ ಲೆಡ್‌ಗಾರ್ಡ್ ಅವರೊಂದಿಗೆ ಸಚಿವರು ಸಂವಾದ ನಡೆಸಿದರು, ಜೊನಾಥನ್ ಲೆಡ್ ಗಾರ್ಡ್ ಅವರು, ಜಗತ್ತಿನಾದ್ಯಂತ ಪರಿಸರ ಅವನತಿ ಸಮಸ್ಯೆಗಳ ಬಗ್ಗೆ ಮತ್ತು ನಾವು ಅವುಗಳಿಂದ ಹೇಗೆ ಹೊರಬಹುದು ಎಂಬುದರ ಕುರಿತು ಮಾತನಾಡಿದರು.

 

ಬೆಂಗಳೂರಿನಲ್ಲಿ ಸ್ವಿಸ್ನೆಕ್ಸ್ (ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಜಗತ್ತನ್ನು ಸಂಪರ್ಕಿಸುವ ಸ್ವಿಸ್ ಗ್ಲೋಬಲ್ ನೆಟ್‌ವರ್ಕ್) ಮತ್ತು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಸಹಯೋಗದಲ್ಲಿ ಏಟ್ರಿಯಾ ವಿಶ್ವವಿದ್ಯಾಲಯವು ಸಮಾವೇಶವನ್ನು ಆಯೋಜಿಸಿದೆ.

Facebook
Twitter
LinkedIn
WhatsApp
Telegram
Email

1 thought on “ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ: ಸಚಿವ ಈಶ್ವರ ಖಂಡ್ರೆ”

  1. Avatar
    ಟಿ.ಎಂ. ಸತೀಶ್

    ಮಾನ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಬಿ ಖಂಡ್ರೆ ಅವರು “ಪಶ್ಚಿಮ ಘಟ್ಟದಲ್ಲಿ ಜೀವವೈವಿಧ್ಯ ಮತ್ತು ಸಸ್ಯ ಸಂಕುಲ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಡಾ. ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರದ ಸಂಜಯ್ ಕುಮಾರ್ ಸಮಿತಿ ನನ್ನನ್ನು ಭೇಟಿ ಮಾಡಿತ್ತು, ಅವರು ಡಿಸೆಂಬರ್ ನಲ್ಲಿ ವರದಿ ಕೊಟ್ಟ ಬಳಿಕ ಸಂಪುಟದ ಉಪ ಸಮಿತಿಯಲ್ಲಿ ಅದರ ಸಾಧಕ ಬಾಧಕ ಚರ್ಚಿಸಿ, ಎಲ್ಲ ಬಾಧ್ಯಸ್ಥರೊಂದಿಗೆ (Stake holders) ಮಾತುಕತೆ ನಡೆಸಿ ನಂತರ ಸರ್ಕಾರ ವರದಿ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ” ಎಂದು ತಿಳಿಸಿದರು.ಆದರೆ ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ವರದಿ ಆಗಿದೆ. ಇದು ಪಶ್ಚಿಮಘಟ್ಟದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಆತಂಕ ತರುತ್ತದೆ. – ಮಾನ್ಯ ಅರಣ್ಯ ಸಚಿವರ ಮಾಧ್ಯಮ ಸಮನ್ವಯಾಧಿಕಾರಿ.

Leave a Comment

Your email address will not be published. Required fields are marked *

Translate »
Scroll to Top