ಮಾರ್ಚ್ ಅಂತ್ಯದವರಿಗೆ ಮಾತ್ರ ಕಾಲುವೆಗಳಿಗೆ ನೀರು | ನೀರಿಲ್ಲದೇ ಬೆಳೆ ನಷ್ಟವಾಗುವ ಭೀತಿಯಲ್ಲಿ ಅನ್ನದಾತರು..

Kannada Nadu
ಮಾರ್ಚ್ ಅಂತ್ಯದವರಿಗೆ ಮಾತ್ರ ಕಾಲುವೆಗಳಿಗೆ ನೀರು | ನೀರಿಲ್ಲದೇ ಬೆಳೆ ನಷ್ಟವಾಗುವ ಭೀತಿಯಲ್ಲಿ ಅನ್ನದಾತರು..

ಬಳ್ಳಾರಿ: ಬಳ್ಳಾರಿ, ವಿಜಯನಗರ, ಕೊ ಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರ ಪಾಲಿಗೆ ತುಂಗಭದ್ರಾ ಜಲಾಶಯ ಜೀವ ನಾಡಿಯಾಗಿದೆ. ಈ ನಾಲ್ಕು ಜಿಲ್ಲೆಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ತುಂಗಭದ್ರಾ ಜಲಾಶಯವೇ ಆಧಾರ. ಇದೇ ನೀರನ್ನು ನಂಬಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ಪೆಬ್ರವರಿ ತಿಂಗಳಲ್ಲಿ ಕೂಡಾ ಹಲವಡೆ ಭತ್ತದ ನಾಟಿಯನ್ನು ರೈತರು ಮಾಡ್ತಿದ್ದಾರೆ. ಆದ್ರೆ ಇದೀಗ ನಾಟಿ ಮಾಡ್ತಿರೋ ರೈತರಿಗೆ ಟಿಬಿ ಬೋರ್ಡ್ ಬಿಗ್ ಶಾಕ್ ನೀಡಿದೆ. ಈ ಬಾರಿ ಮಾರ್ಚ್ ಅಂತ್ಯದವರಿಗೆ ಮಾತ್ರ ನೀರು ಬಿಡಲಾಗುತ್ತದೆ ಎಂದು ತುಂಗಭದ್ರಾ ಜಲಾಶಯ ಅಧಿಕಾರಿಗಳು ತಿಳಸಿದ್ದಾರೆ.

ಬಳ್ಳಾರಿ ಸೇರಿದಂತೆ ನಾಲ್ಕೂ ಜಿಲ್ಲೆಯ ಹಲವಡೇ ಇಂದಿಗೂ ರೈತರು ಜಲಾಶಯ ನೀರನ್ನು ನಂಬಿ ಭತ್ತದ ನಾಟಿ ಮಾಡುತ್ತಿದ್ದಾರೆ. ಆದ್ರೆ ಜಲಾಶಯ ನೀರನ್ನು ನಂಬಿಕೊAಡು, ಇನ್ನು ಮುಂದೆ ಭತ್ತ ನಾಟಿ ಮಾಡಿದ್ರೆ, ಅವರಿಗೆ ಜಲಾಶಯದ ನೀರು ಸಿಗದು ಅಂತ ಅಧಿಕಾರಿಗಳು ಖಡಕ್ ವಾರ್ನಿಂಗ್‌ನ್ನು ರವಾನಿಸಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ನಿರ್ಣಯಕ್ಕೆ ಟಿಬಿ ಡ್ಯಾಂ ಅಧಿಕಾರಿಗಳು ಬಂದಿದ್ದಾರೆ.ರೈತರು ಈಗಾಗಲೇ ಸುಗ್ಗಿ ಬೆಳೆಯನ್ನು ತೆಗೆದುಕೊಂಡಿದ್ದು, ಇದೀಗ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡುತ್ತಿದ್ದಾರೆ. ಈಗಾಗಲೇ ಭತ್ತ ನಾಟಿ ಮಾಡಿದ್ದರೆ ಏನು ಸಮಸ್ಯೆ ಇಲ್ಲ. ಆದ್ರೆ, ಈಗ ಪ್ರಸ್ತುತ ಭತ್ತ ನಾಟಿ ಮಾಡುವವರಿಗೆ ಇದರಿಂದ ನೀರಿನ ಕೊರತೆ ಎದುರಾಗುತ್ತದೆ. ಜಲಾಶಯದಿಂದ ಎರಡನೇ ಬೆಳೆಗೆ ಮಾರ್ಚ್ ಅಂತ್ಯದವರಗೆ ಮಾತ್ರ ನೀರು ಬಿಡುತ್ತೇವೆ. ಹೀಗಾಗಿ ಈಗ ಭತ್ತ ನಾಟಿ ಮಾಡಬೇಡಿ. ಮಾರ್ಚ್ ನಂತರ ರೈತರ ಬೆಳೆಗೆ ನೀರು ಬಿಡುವುದಿಲ್ಲ. ಬೆಳೆ ಒಣಗಿದರೆ ನಾವು ಹೊಣೆಯಲ್ಲ ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಜಲಾಶಯದಲ್ಲಿ 49 ಟಿಎಂಸಿ ನೀರು ಸಂಗ್ರಹವಿದ್ದು, ಜಲಾಶಯಕ್ಕೆ ಒಳಹರಿವು ಇಲ್ಲ. ಇನ್ನು ಎಲ್ಲಾ ಕಾಲುವೆ, ಆಂಧ್ರದ ಕೋಟಾ ತಗೆದ್ರೆ, ಏಪ್ರಿಲ್ ನಂತರ ಜಲಾಶಯದಲ್ಲಿ ಹೆಚ್ಚು ಕಡಿಮೆ ಎಂಟರಿAದ ಹತ್ತು ಟಿಎಂಸಿ ನೀರು ಉಳಿಯೋ ಸಾಧ್ಯತೆಯಿದ್ದು, ಇದರಲ್ಲಿ ಡೆಡ್ ಸ್ಟೋರೇಜ್ ತಗೆದ್ರೆ ಆರೇಳು ಟಿಎಂಸಿ ನೀರು ಮಾತ್ರ ಉಳಿಯುತ್ತದೆ.ಅದನ್ನು ಕಡ್ಡಾಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಎಪ್ರಿಲ್ 1 ರಿಂದ ರೈತರ ಬೆಳೆಗಳಿಗೆ ನೀರು ಬಿಡುವಿದಲ್ಲ. ಇದೀಗ ನಾಟಿ ಮಾಡಿದ್ರೆ, ಎಪ್ರಿಲ್ ಅಂತ್ಯದವರಗೆ ನೀರು ಬೇಕಾಗುತ್ತದೆ. ಅಲ್ಲಿವರಗೆ ನೀರು ಬಿಡಲು ಆಗುವುದಿಲ್ಲ. ಈಗಾಗಲೇ ರೈತರಿಗೆ ನೀರಾವರಿ ಸಲಹಾ ಸಮಿತಿಯ ಮಾಹಿತಿಯನ್ನು ನೀಡಲಾಗಿದೆ. ಆದರೂ ರೈತರು ನಾಟಿ ಮಾಡಿದ್ರೆ, ಅವರ ಬೆಳೆಗೆ ಬೇಕಾದ ನೀರಿನ ಜವಾಬ್ದಾರಿ ನಮ್ಮದಲ್ಲಾ ಅಂತ ಟಿಬಿ ಡ್ಯಾಂನ ಅಧಿಕಾರಿಗಳು ಸ್ಪಷ್ಟ ಸಂದೇಶ ನೀಡಿದ್ದಾರೆ. ಆದ್ರೆ ಬಳ್ಳಾರಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪೆಬ್ರವರಿ ತಿಂಗಳಲ್ಲಿ ಕೂಡಾ ನಾಟಿ ನಾಟಿ ಕಾರ್ಯ ಮಾಡುತ್ತಿದ್ದಾರೆ.

ಏಪ್ರಿಲ್ ಒಂದರಿAದ ರೈತರ ಜಮೀನಿಗೆ ತುಂಗಭದ್ರಾ ಜಲಾಶಯ ನೀರು ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ, ರೈತರು ಭತ್ತದ ನಾಟಿ ಬಿಟ್ಟು ಪರ್ಯಾಯ ಬೆಳೆಯನ್ನು ಬೆಳೆಯೋದು ಸೂಕ್ತ. ಆದರೇ ಈಗಾಗಲೇ ಭತ್ತ ನಾಟಿ ಮಾಡಿರುವ ರೈತನಿಗೆ ಸಂಕಷ್ಟ ಎದುರಾಗಿದ್ದು, ಮುಂದೇನು ಎಂದು ಚಿಂತಿಸುವAತಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";