ಇಂದಿನ ದಿನ ಭವಿಷ್ಯ ಹೇಗಿದೆ ಗೊತ್ತಾ..?

ಮೇಷ: ಎಷ್ಟೇ ಕಷ್ಟಪಟ್ಟರೂ ಬಯಸಿದ್ದನ್ನು ಪಡೆಯಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಬಂಧುಗಳು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಆರ್ಥಿಕವಾಗಿ ಸಬಲರಾಗಲು ಅನೇಕ ಆರ್ಥಿಕ ಮೂಲವನ್ನು ಹುಡುಕುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಮಕ್ಕಳ‌ ವಿವಾಹ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಆಗಿದ್ದು ನೀವು ನಿಶ್ಚಿಂತೆಯಿಂದ ಇರುವಿರಿ. ಶುಭ ಕಾರ್ಯದಲ್ಲಿ ನೀವು ತೊಡಗುವಿರಿ. ಮಾತನ್ನು ಕಡಿಮೆ ಮಾಡುವಿರಿ.

ವೃಷಭ: ಸಂಗಾತಿಯ ನಡುವೆ ಭಿನ್ನಾಭಿಪ್ರಾಯವು ಬರಬಹುದು. ಸತತ ಸುತ್ತಾಟದಿಂದ ಆಯಾಸವಾಗಲಿದೆ. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಚಿಂತೆಯು ಕಾಡಬಹುದು. ಹೊಸ ಕೆಲಸಕ್ಕೆ‌ ನಿಮಗೆ ಧೈರ್ಯವು ಸಾಕಾಗದು. ಇರುವುದರಲ್ಲಿ ನೆಮ್ಮದಿಯನ್ನು ಕಾಣಲು ಹೆಚ್ಚು ಇಷ್ಟಪಡುವಿರಿ. ಮನಸ್ಸಿನ ಚಂಚಲತೆಯನ್ನು ಸರಿಮಾಡಿಕೊಳ್ಳುವುದು ಉತ್ತಮ. ನೀರಿನ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ತೊಂದರೆಯಾಗಬಹುದು. ಕೆಲವು ವಿಚಾರದಲ್ಲಿ ನಿಮ್ಮ‌ ಮಾನಸಿಕ ಸ್ಥಿತಿಯು ಬದಲಾಗಬಹುದು.

ಮಿಥುನ:  ಸಂಗಾತಿಯ ನೋವನ್ನು ಕೇಳುವಷ್ಟು ತಾಳ್ಮೆ ಇಲ್ಲವಾದೀತು. ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ಆರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ಕಛೇರಿಯ ಒತ್ತಡದ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ವೇತನವನ್ನು ಹೆಚ್ಚಿಸಿಕೊಳ್ಳಲು ಮಾರ್ಗವನ್ನು ಹುಡುಕುವ ಸಂಭವ ಇದೆ. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಳ್ಳುವಿರಿ. ಸಂಗಾತಿಯನ್ನು ಹೊರಗೆ ಸುತ್ತಾಡಲು ಕರೆಯುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ‌ಆಹಾರದಲ್ಲಿ ವ್ಯತ್ಯಾಸ ಆಗಿ ಆರೋಗ್ಯದಲ್ಲಿ ತೊಂದರೆಯಾದೀತು.

ಕಟಕ:  ನಿಮ್ಮ ಬಳಿ ಸಾಲವನ್ನು ಕೇಳಬಹುದು. ವೈದ್ಯರಿಗೆ ಪ್ರಶಂಸೆ ಸಿಗಬಹುದು.‌ ಸರ್ಕಾರಿ ಉದ್ಯೋಗಿಗಳ ಸ್ಥಾನವು ಬದಲಾಗುವುದು. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಬೇರೆ ಕಡೆಗೆ ಕಳುಹಿಸುವ ವಸ್ತುಗಳು ನಿಮಗೆ ಕೊರತೆಯಾಗಬಹುದು. ಮನೆಯ ವಾತಾರಣದಲ್ಲಿ ಇರಲು ಖುಷಿಪಡುವಿರಿ. ನಿಮ್ಮ ವಸ್ತುಗಳನ್ನು ಸ್ನೇಹಿತನಿಗೆ ದಾನವಾಗಿ ಕೊಡುವಿರಿ. ಮಕ್ಕಳ‌ ಜೊತೆ ಸಮಯವನ್ನು ಕಳೆಯುವುದು ಇಷ್ಟವಾದೀತು. ರಹಸ್ಯ ವಿಚಾರಗಳನ್ನು ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಗೆಲುವನ್ನು ಸಾಧಿಸುವಿರಿ. ಸಮಯಕ್ಕೆ ಬೆಲೆಯನ್ನು ಕೊಡುವುದು ಉತ್ತಮ.

ಸಿಂಹ: ವ್ಯಾಪರವು ನಷ್ಟವಾಗಲಿದೆ. ತಾಳ್ಮೆಯಿಂದ ಇದ್ದು ಇದನ್ನು ಮುಂದುವರಿಸಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬಯಸುವಿರಿ. ವಿದೇಶವನ್ನು ಸುತ್ತುವ ಮನಸ್ಸಾಗುವುದು. ದೇಹವನ್ನು ದಂಡಿಸಬೇಕಾಗುವುದು. ಆಯಾಸದಂತೆ ನಿಮಗೆ ಅನ್ನಿಸೀತು. ಅಪರಿಚಿತರ ಮಧುರವಾದ ಮಾತಿಗೆ ಮನಸೋತು ಮೋಸ ಹೋಗಬಹುದು. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕ್ಷಮೆಯನ್ನು ಕೇಳಬಹುದು. ನೆಮ್ಮದಿಗಾಗಿ ದೇವಾಲಯಕ್ಕೆ ಹೋಗಬಹುದು. ನಿಮ್ಮ ನಿರೀಕ್ಷೆಯಲ್ಲಿ ಕೆಲವು ಫಲಿಸಬಹುದು. ಅನಾಯಾಸವಾಗಿ ಫಲವನ್ನು ಪಡೆಯಲು ಬಯಸುವುದು ಸರಿಯಲ್ಲ.

 

ಕನ್ಯಾ: ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ತರಲು ಶತ್ರುಗಳು ಮಸಿ ಬಳಿಯಬಹುದು. ಬೆನ್ನು ನೋವು ನಿಮ್ಮ ಯಾವ ಕೆಲಸವನ್ನೂ ಮಾಡಲು ಕೊಡದು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡಲಿದ್ದೀರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಅತಿಯಾದ ಆಸೆ ಬೇಡ. ಮೋಜಿಗಾಗಿ ಹಣವನ್ನು ಖರ್ಚು ಮಾಡುವಿರಿ. ಕೂಡಿಟ್ಟ ಹಣವನ್ನು ನೀವು ಇಂದು ಬಿಡಿಸಿಕೊಳ್ಳುವಿರಿ. ಸಂಗಾತಿಯ ಜೊತೆ ಹಳೆ ವಿಚಾರಗಳನ್ನು ಮಾತನಾಡುವಿರಿ. ಇದರಿಂದ ಜಗಳವೇ ಆದೀತು. ವಿಶ್ರಾಂತಿಯನ್ನು ಹೆಚ್ಚು ಬಯಸುವಿರಿ.

ತುಲಾ:  ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮರೆಯಬಹುದು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಹೊಸ ವಸ್ತುಗಳು ನಿಮಗೆ ಖುಷಿಯನ್ನು ಕೊಟ್ಟೀತು. ಮಕ್ಕಳಿಗೆ ನಿಮ್ಮಿಂದ ಪ್ರೋತ್ಸಾಹ ಸಿಗಬಹುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸುವರು. ಯಶಸ್ಸನ್ನು ಗಳಿಸುವಿರಿ. ದಾಂಪತ್ಯದಲ್ಲಿ ಅಸಹಜ‌ ಮಾತುಕತೆಗಳು ಕಿರಿಕಿರಿಯನ್ನು ತಂದೀತು. ಶುಭ ಸಮಾಚಾರದ ನಿರೀಕ್ಷೆಯಲ್ಲಿ ನೀವು ಇರುವಿರಿ. ಕರ್ತವ್ಯದಲ್ಲಿ ನೀವು ಇಂದು ನಿರತರಾಗಿರುವಿರಿ.

ವೃಶ್ಚಿಕ: ಹೂಡಿಕೆಯನ್ನು ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯಲಿವೆ. ಅಶುಭವಾದ ಕೆಲಸಕ್ಕೆ ಹಣವನ್ನು ನೀಡುವಿರಿ. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು. ನಿರಂತರ ಒಂದಲ್ಲ ಒಂದು ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗಬಹಿಸುವಿರಿ. ನಿಮಗೆ ಬರಬೇಕಾದ ಹಣವನ್ನು ಕೇಳಿ ಪಡೆಯುವಿರಿ. ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಸ್ಥಾನವನ್ನು ನೀವು ಬಿಟ್ಟಕೊಡುವಿರಿ.

ಧನು: ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ವಾಹನವನ್ನು ಚಾಲಾಯಿಸುವಾಗ ಅನೇಕ ನಕಾರಾತ್ಮಕ ಯೋಚನೆಗಳು ಬರಲಿದೆ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ಮನೆ ಕೆಲಸಕ್ಕೆ ಆಲಸ್ಯವನ್ನು ತೋರುವಿರಿ. ಸಮಾರಂಭದಲ್ಲಿ ನಿಮಗೆ ಗೌರವವು ಸಿಗಬಹುದು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು.

ಮಕರ: ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ನಿಮ್ಮ ವರ್ತನೆಯು ಸಹೋದ್ಯೋಗಿಗಳಿಗೆ ಸಿಟ್ಟನ್ನು ತಂದೀತು. ಭೋಗವಸ್ತುಗಳನ್ನು ಖರೀದಿಸುವಿರಿ. ಜೀವನಕ್ಕೆ ಬೇಕಾದುದನ್ನು ಸ್ನೇಹಿರಿಂದ ಪಡೆಯುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ‌ ಅವಕಾಶಗಳು ಲಭ್ಯ ಆಗುವುದು. ಮನೋರಂಜನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಯಂತ್ರದ ಮಾರಾಟದಿಂದ ಲಾಭವಿರಲಿದೆ. ಬರಹಗಾರರಿಗೆ ಗೌರವವು ಸಿಗಬಹುದು.

ಕುಂಭ: ಆರ್ಥಿಕ ಸಹಾಯವು ಸಿಗದೇ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದೇ ಇದ್ದೀತು. ಚರ ಆಸ್ತಿಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ನೀವು ಮೂಗು ತರಿಸುವಿರಿ. ಇದರಿಂದ ಅಪಮಾನವೂ ಆಗಬಹುದು. ಸ್ಥಾನವನ್ನು ಉಳಿಸಿಕೊಳ್ಳಲು ಜವಾಬ್ದಾರಿಯ ಕೆಲಸವನ್ನು ನಿರ್ವಹಿಸಬೇಕಾಗುವುದು. ಭೀತಿಯಿಂದ ಮನೆಯನ್ನು ಬಿಟ್ಟು ಹೋಗಲಾರಿರಿ. ಶುಭಾವಾರ್ತೆಯು ನಿಮಗೆ ನೆಮ್ಮದಿಯನ್ನು ತಂದೀತು. ಪ್ರಯಾಣದ ವಿಚಾರದಲ್ಲಿ ನಿಮಗೆ ನಿರಾಸಕ್ತಿ ಇರಲಿದೆ. ಬಂಧುಗಳ ಭೇಟಿಯು ಸುಖವನ್ನು ಕೊಡುವುದು.

 

ಮೀನ: ನಿಮಗೆ ಇಂದು ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತಸ್ಥಾನವು ಸಿಗಲಿದೆ. ಯಾರ ಮೇಲೂ ದೂರನ್ನು ಹಾಕುವುದು ಬೇಡ. ಮನೆಯಿಂದ‌ ದೂರವಿರುವ ಉದ್ಯೋಗವು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದ ತಾಯಿಗೆ ಬೇಸರವಾಗಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಇಷ್ಟದವರ ಭೇಟಿಯಾಗಲಿದೆ. ಕಾನೂನಿನ ಸಮರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯಿಂದ ಕಿರಿಕಿರಿ ಆಗಬಹುದು.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top