ವಿಜಯನಗರ : ಖಾಲಿಯಾಗಿದ್ದ ತುಂಗಭದ್ರಾ ಜಲಾಶಯಕ್ಕೆ ದಿನೇ ದಿನೇ ಒಳಹರಿವು ಹೆಚ್ಚಾಗುತ್ತಿದೆ. ಶಿವಮೊಗ್ಗ ಭಾಗದಲ್ಲಿ ಹೆಚ್ಚಿನ ಮಳೆ ಬರುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಸರಿ ಸುಮಾರು 5 ಟಿಎಂಸಿಗೂ ಹೆಚ್ಚಿನ ನೀರು ಜಲಾಶಯಕ್ಕೆ ಬಂದಿದೆ. ನಿನ್ನೆಗೆ 16.649 ಟಿಎಂಸಿ ನೀರು ಸಂಗ್ರಹಗೊಂಡಿತ್ತು. ಇಂದು ಸುಮಾರು 21.365 ಟಿಎಂಸಿ ಯಷ್ಟು ನೀರು ಸಂಗ್ರಹಗೊಂಡಿದೆ. ಸದ್ಯ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದ್ದು, ಕಳೆದ 24 ತಾಸುಗಳಲ್ಲಿ 59,500 ಕ್ಯೂಸೆಕ್ ನೀರು ನದಿಗೆ ಹರಿದು ಬಂದಿದೆ
ಸದ್ಯ ಜಲಾಶಯಕ್ಕೆ 54,657 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರ್ತಾ ಇದ್ದು, ಇದೇ ರೀತಿ ಮುಂದುವರೆದರೆ ಶೀಘ್ರದಲ್ಲಿಯೇ ಜಲಾಶಯಕ್ಕೆ ಜಲ ಕಳೆ ಬರುವುದರಲ್ಲಿ ಸಂಶಯವೇ ಇಲ್ಲ.
ಈಗಾಗಲೇ ವಿಜಯನಗರ, ಬಳ್ಳಾರಿ, ಕೊಪ್ಪಳ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ರೈತರು ಬೆಳೆ ಬೆಳೆಯಲು ಕಂಗಾಲಾಗಿದ್ದರು. ಇದೀಗ ಜಲಾಶಯಕ್ಕೆ ಜಲ ಕಳೆ ಬರುತ್ತಿದ್ದು, ರೈತರ ಮುಗದಲ್ಲಿ ಸಂತಸ ಕಾಣಬಹುದಾಗಿದೆ.
Nice massage sir
Tunfabhadra catchment area is HALF full of Silt, which prevents for more storage of WATER.Now it is the responsibility of Karnataka as well AP govts to find out a source to remove Silt and increase water storage capacity
Sir yavag releg hagute