ಇಂದಿನ ದಿನ ಭವಿಷ್ಯ ಹೇಗಿದೆ ಒಮ್ಮೆ ನೋಡಿ

ಮೇಷ:  ವಿನಾಕಾರಣ ಎಲ್ಲದಕ್ಕೂ ಎಲ್ಲರಮೇಲೂ ಸಿಟ್ಟಾಗುವಿರಿ. ಶಿಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ವ್ಯಾಪಾರವನ್ನು ಮಾಡುವಾಗ ಎಚ್ಚರಿಕೆ ಇರಲಿದೆ. ಬಂಧುಗಳು ನಿಮಗೆ ಜೀವನದ ಪಾಠವನ್ನು ಹೇಳಿಕೊಡುವರು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುವಿರಿ. ಗೆಳೆತನದ ವಿಚಾರದಲ್ಲಿ ಮಿತಿಯಿರಲಿದೆ. ಸಂತರ ಭೇಟಿಯಾಗಿ ನಿಮಗೆ ನೆಮ್ಮದಿಯು ಸಿಗಲಿದೆ. ಪ್ರಯಾಣವನ್ನು ಮಾಡುವ ಉತ್ಸಾಹದಲ್ಲಿ ಇರುವಿರಿ. ಮಾನಸಿಕ‌ ಒತ್ತಡವು ಕಡಿಮೆಯಾಗಲಿದೆ. ಉದ್ಯೋಗದ ಸ್ಥಳದಲ್ಲಿ ಉತ್ಸಾಹವಿರಲಿದೆ.

ವೃಷಭ: ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಂಬಿಕೆಗೆ ದ್ರೋಹವಾಗಬಹುದು.‌ ಸಂಗಾತಿಯ ಮಾತುಗಳು ನಿಮಗೆ ಅಜೀರ್ಣವಾಗುವುದು. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವಿರಿ. ನೀವು ಬಯಸಿದ ವಸ್ತುಗಳು ನಿಮ್ಮನ್ನು ಬಂದು ಸೇರಲಿದೆ. ಧಾರ್ಮಿಕ ಆಚರಣೆಯಲ್ಲಿ‌ ಆಸಕ್ತಿಯು ಕಡಿಮೆ ಆಗಲಿದೆ. ಸರ್ಕಾರದ ಕೆಲಸದಿಂದ ನಿಮಗೆ ಬೇಸರವಾಗಬಹುದು. ‌ವ್ಯರ್ಥ ಓಡಾಟವು ನಿಮಗೆ ಬೇಸರ ತರಿಸಬಹುದು. ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯಲು ಇಚ್ಛಿಸುವಿರಿ.

ಮಿಥುನ:  ಯಾರಾದರೂ ನಿಮ್ಮ ಹಾದಿಯನ್ನು ತಪ್ಪಿಸಬಹುದು. ವಿವಾಹದಲ್ಲಿ ಆಸಕ್ತಿಯು ಕಡಿಮೆಯಾಗಲಿದೆ. ಸ್ವತಂತ್ರವಾಗಿರಲು ಬಯಸುವಿರಿ. ಮನೆಯವರ ವರ್ತನೆಯು ನಿಮಗೆ ಹಿಡಿಸದೇಹೋದೀತು. ಸಂಪತ್ತು ಕ್ಷಣಿಕ ಎಂದೆನಿಸಬಹುದು. ಸ್ತ್ರೀಯರಿಂದ ಸಹಾಯವನ್ನು ಪಡೆಯಲು ಇಚ್ಛಿಸುವಿರಿ. ಮಕ್ಕಳನ್ನು‌ ಮನೆಯಿಂದ ಆಚೆ ಇಟ್ಟು ಓದಿಸುವ ಆಲೋಚನೆ ಇರಲಿದೆ. ನಿಮ್ಮ ನಡತೆಯಲ್ಲಿ ಅನುಮಾನ ಕಾಣಬಹುದು. ಸಮಯವು ಅಮೂಲ್ಯ ಎಂದು ಅನ್ನಿಸಬಹುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಬಯಸುವಿರಿ. ಹೊಂದಾಣಿಕೆಯಿಂದ ಮನಸ್ಸಿನ ಕ್ಲೇಶವು ಸುಧಾರಿಸಬಹುದು.

ಕಟಕ:  ನಿಮ್ಮ ಸ್ವಭಾವಗಳು ಇಷ್ಟವಾಗದು. ನಿಮ್ಮ‌ ಮಾತುಗಳನ್ನು ನಿರಾಸಕ್ತಿಯಿಂದ ಪಾಲಿಸುವರು. ಸಂಬಂಧವನ್ನು ಮತ್ತಷ್ಟು ಆತ್ಮೀಯವಾಗಿಸಲು ಪ್ರಯತ್ನಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ನಿರೀಕ್ಷೆ ಇರಲಿದೆ. ಯಾರನ್ನೂ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾದ ಕಾರಣ ನಿಮಗೆ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಕುಳಿತು ಸರಿಮಾಡಿಕೊಳ್ಳಿ. ನಿಮ್ಮಲ್ಲಿ‌ ಇರುವುದನ್ನು ದಾನಮಾಡುವಿರಿ. ಮಕ್ಕಳ‌ ವಿವಾಹದ ಚಿಂತೆ‌ಯು ಕಾಡಲಿದೆ.

ಸಿಂಹ: ಚರಾಸ್ತಿಯನ್ನು ಕಳೆದುಕೊಳ್ಳುವಿರಿ. ನಿಮ್ಮ ನಿಗದಿತ ಸಮಯವು ವ್ಯತ್ಯಾಸವಾಗಿ ಕಾರ್ಯಕ್ರಮವೂ ಬದಲಾಗಲಿದೆ. ಉದ್ವಿಗ್ನತೆಗೆ ಎಡಮಾಡಿಕೊಡದೇ ಸಮಾಧಾನಚಿತ್ತದಿಂದ ಇರುವುದನ್ನು ಕಲಿಯಬೇಕಾದೀತು. ನೌಕರರ ವಿಷಯದಲ್ಲಿ ಸಿಟ್ಟಾಗುವ ಸಾಧ್ಯತೆ ಇದೆ. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ.‌ ಪ್ರಯತ್ನವನ್ನು ಮಾಡಿ, ಫಲವನ್ನು ಪಡೆಯುವಿರಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು‌. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ನಿಮ್ಮ ವರ್ತನೆಗಳು ಇತರರಿಗೆ ಮಾದರಿಯಾಗಬಹುದು.

 

ಕನ್ಯಾ: ಮಾನಸಿಕವಾಗಿ ಬಳಲಲಿದ್ದೀರಿ. ದೈಹಿಕ ಸಾಮರ್ಥ್ಯದಿಂದ ಕುಗ್ಗಿರುವಿರಿ. ಜೀವನದಲ್ಲಿ ಬದಲಾವಣೆಯನ್ನು ಬಯಸುವಿರಿ. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ವಿದ್ಯಾರ್ಥಿಗಳು ತೀರ್ಮಾನಿಸಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ಗೊಂದಲವಿರಲಿದೆ. ಸಂಬಂಧಗಳಲ್ಲಿ ನಿಮಗೆ ಅಪನಂಬಿಕೆ ಉಂಟಾಗಬಹುದು. ನಿಮ್ಮ ಮೇಲೆ ಅಪವಾದಗಳು ಬರುವ ಸಾಧ್ಯತೆ ಇದೆ. ರಾಜಕೀಯದಲ್ಲಿ ನೀವು ಸಿಕ್ಕಿಕೊಳ್ಳುವಿರಿ. ವಿದೇಶದಲ್ಲಿ ಇದ್ದವರಿಗೆ ಸಂಕಡವಾಗಲಿದೆ. ನೂತನ ವಾಹನವನ್ನು ಖರೀದಿಸುವಿರಿ. ವಾತಾವರಣದಿಂದ ನಿಮಗೆ ಮನಸ್ಸು ಹಾಳಾಗಬಹುದು.

ತುಲಾ: ಹೊಸ ಸ್ಥಳಗಳನ್ನು ನೀವು ನೋಡಲು ನಿಮಗೆ ಇಷ್ಟವಾಗಲಿದೆ. ಸಮಯಪಾಲನೆಗೆ ನೀವು ಹೆಚ್ಚು ಒತ್ತನ್ನು ಕೊಡುವಿರಿ. ನೀರಿನಿಂದ ಇಂದು ಭಯವಾಗುವ ಸಾಧ್ಯತೆ ಇದೆ. ನೀವು ಸುಳ್ಳು ಹೇಳುತ್ತಿರುವುದನ್ನು ನಿಮ್ಮ ಮುಖ ಹೇಳುವುದು. ವೃತ್ತಿಯನ್ನು ಆನಂದಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ವಿಷಯದಲ್ಲಿ ನಿಮಗೆ ಇಷ್ಟ ಕಡಿಮೆಯಾಗಲಿದೆ. ಕಾಲು ನೋವಿನಿಂದ ಬಳಲುವಿರಿ. ಇಂದಿನ ದಿನ‌ ಒತ್ತಡದಿಂದ ಇರಲಿದೆ. ವಿದ್ಯಾರ್ಥಿಗಳು ಖುಷಿಯಿಂದ ಇರಲಿದ್ದು, ಇದಕ್ಕೆ ಸಾಧನೆಯು ಕಾರಣವಾಗಲಿದೆ. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಬಹುದು. ರಹಸ್ಯವನ್ನು ಬಿಟ್ಟುಕೊಡಲು ಇಚ್ಛಿಸುವಿರಿ.

ವೃಶ್ಚಿಕ: ಉದ್ಯೋಗದ ಕಾರಣಕ್ಕೆ ನಿಮಗೆ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಬರಬೇಕಾದ ಹಣವನ್ನು ನೀವು ಪಡೆಯಲಿದ್ದೀರಿ. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಉದ್ಯೋಗಕ್ಕೆ ಸೇರಲು ಮಾನಸಿಕವಾಗಿ ನೀವು ಸಿದ್ಧರಾಗುವಿರಿ. ಕಲೆಯ ಅಭ್ಯಾಸವನ್ನು ನೀವು ಮಾಡಲಿದ್ದೀರಿ. ವಿದೇಶಕ್ಕೆ ಹೋಗಲು ಅವಕಾಶಗಳು ಬರಬಹುದು. ಗೃಹನಿರ್ಮಾಣಕ್ಕೆ ತಕ್ಕಂತೆ ನಿಮ್ಮ ನಿರ್ಧಾರಗಳು ಬದಲಾಗಲಿದೆ. ಕಣ್ಣಿನ‌ ತೊಂದರೆಯಿಂದ ಕಷ್ಟಪಡುವಿರಿ. ಸಮಯೋಚಿತ ಸ್ಫುರಣೆಯ ನಿಮಗೆ ಯಶಸ್ಸನ್ನು ತರಲಿದೆ. ವಿದ್ಯಾರ್ಥಿಗಳು ಓದಿಗೋಸ್ಕರ ತಜ್ಞರ ಸಲಹೆಯನ್ನು ಪಡೆದು ಮುಂದುವರಿಸಿರಿ. ಬಂಧನಭೀತಿ ಇರಲಿದೆ.

ಧನುಸ್ಸು:  ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಅಧಿಕ ವೆಚ್ಚವನ್ನು ನೀವು ಮಾಡಲಿದ್ದೀರಿ. ನಟರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಂಬಂಧಗಳು ನಿಮಗೆ ಸಹಕಾರವಾಗಲಿದೆ. ಸಾಹಸಕ್ಕೆ ಹೋಗುವಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಸಮಯವನ್ನೂ ಮಾರ್ಗವನ್ನೂ ಬದಲಾಯಿಸಬಹುದು.

ಮಕರ: ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಸ್ಥಿರಾಸ್ತಿಯ ವಿಷಯದಲ್ಲಿರುವ ಗೊಂದಲು ನಿವಾರಣೆ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ತಿಳಿಯದಾಗಿದೆ. ರಾಜಕಾರಿಣಿಗಳ ಒಡನಾಟವು ನಿಮಗೆ ಹೊಸ ಮಾರ್ಗವನ್ನು ತೋರಿಸಬಹುದು. ವೈರಾಗ್ಯಭಾವವು ನಿಮಗೆ ಹಿತವೆನಿಸವುದು.‌ ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣದಲ್ಲಿ ನಿಮಗೆ ಸುರಕ್ಷತೆಯ ಅವಶ್ಯಕತೆ ಇರಲಿದೆ.

 

ಕುಂಭ: ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಬಂಧುಗಳು ನಿಮಗೆ ಕಿರಿಕಿರಿ ಆಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಲಿದೆ. ಅಸ್ಥಿರ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳು ಗೊತ್ತಾಗಲಿದೆ. ಎಲ್ಲರೆದುರು ಮಾತನಾಡಲು ನಿಮಗೆ ಭಯವಾಗಲಿದೆ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ‌ ಮಾಡಲು ಇಚ್ಛಿಸುವಿರಿ.

 

ಮೀನ: ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅಧಿಕವಾಗಲಿದೆ. ನಿಮ್ಮ ನಿರ್ಧಾರದಲ್ಲಿ ಗೊಂದಲ ಇರಲಿದೆ. ಎಲ್ಲವೂ ಅಂದುಕೊಂಡಂತೆ ಆಗದು ಎಂಬ ಮಾನಸಿಕ ಸ್ಥಿತಿಯು ನಿಮ್ಮದಾಗುವುದು. ನಿಮ್ಮ ಉಪಕ್ರಮವು ಸರಿಯಾಗಿರದೇ ಇರುವುದರಿಂದ ಗುರಿಯೂ ತಪ್ಪಬಹುದು. ಪ್ರವಾಸ ಮಾಡುವುದು ನಿಮಗೆ ಇಷ್ಟವಾಗುವುದು. ಮನೆಯ ವಾತಾವರಣವೂ ನಿಮಗೆ ಇಷ್ಟವಾಗಲಿದೆ. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರಬಹುದು.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top