ಇಂಧನ ಸಚಿವರಾದ ಕೆಜೆ ಜಾರ್ಜ್ ಅವರಿಂದ ಸಮಸ್ಯೆಗಳ ಇತ್ಯರ್ಥ - ರವಿ ಬೋಸರಾಜು
ರಾಯಚೂರು: ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರ (YTPS) ಹಾಗೂ ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗಾಗಿ ಭೂಮಿ ನೀಡಿದ ಕುಟುಂಬಗಳಿಗೆ ಉದ್ಯೋಗ, ಕಳೆದ 30 ವರ್ಷಗಳಿಂದ ಯಾವುದೆ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಖಾಯಂ ನೇಮಕಾತಿ ಹಾಗೂ ಹೆಚ್ಚುವರಿ ವೇತನ ಸೇರಿ ಮೂಲಭೂತ ಸಮಸ್ಯಗಳಿಗೆ ಇಂದನ ಸಚಿವರಾದ ಕೆ ಜೆ ಜಾರ್ಜ್ ಅವರಿಂದ ಇತ್ಯರ್ಥವಾಗಲಿವೆ ಎಂದು ಯುವ ಕಾಂಗ್ರೆಸ್ ರಾಜ್ಯ ಮುಖಂಡರಾದ ರವಿ ಬೋಸರಾಜು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್, ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ (YTPS) ಹಾಗೂ ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಕೆಜೆ ಜಾರ್ಜ್ ಅವರೋಂದಿಗೆ ಸುಧೀರ್ಗವಾಗಿ ಚರ್ಚಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿರುವ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಅತಿ ಹೆಚ್ಚು ವಿದ್ಯುತ್ತ್ ಉತ್ಪಾದನೆಯಾಗಲಿದೆ. ಇದರಿಂದ ಸರ್ಕಾರ ನೀಡಿದ್ದ ಭರವಸೆಯಾದ ಗೃಹಜೋತಿ ಯೋಜನೆಗೆ ಸಹಕಾರವಾಗಲಿದೆ ಎಂದು ತಿಳಿಸಿದರು.
ಭೂಮಿ ನೀಡಿ ಸ್ಥಳಾಂತರವಾಗಿರುವ ಬಡಾವಣೆಯ ಜನರಿಗೆ ಮೂಲಭೂತ ಸೌಲಭ್ಯಗಳು ಸೇರಿ ಅಭಿವೃದ್ದಿಗೆ ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರದಿಂದಾಗುವ ವಾಯುವ ಮಾಲಿನ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದರು.
ಅಲ್ಲದೆ ಸುಮಾರು 30 ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಬೇಡಿಕೆಗಳು ಹಾಗೂ ಕೆಪಿಸಿಎಲ್, ವೈಟಿಪಿಎಸ್, ಆರ್.ಟಿಪಿಎಸ್ ಗಳ ಬಲವರ್ಧನೆಗಾಗಿ ಅಗತ್ಯಾಗತ್ಯತೆಗಳು ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿವ ಕೆಪಿಸಿಎಲ್, ಆರ್ ಟಿ ಪಿ ಎಸ್, ವೈ ಟಿ ಪಿ ಎಸ್ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು